ಹಾಸನ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾ ಮಾಡುವುದನ್ನು ಬಿಟ್ಟು ಮಂಡ್ಯದ ರೈತರ ಬಗ್ಗೆ ಸ್ಟಡಿ ಮಾಡಿ ಅವರ ಬೆಳೆಗೆ ತಕ್ಕ ಬೆಂಬಲ ಬೆಲೆ ಕೊಡಿಸಲಿ ಎಂದು ಸಚಿವ ರೇವಣ್ಣ ಅವರು ಹೇಳಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಮವೊಂದರಲ್ಲಿ ದರ್ಶನ್ ನೀಡಿದ್ದ ಹೇಳಿಕೆಗೆ ತಿರುಗೇಟು ಕೊಟ್ಟರು. ದರ್ಶನ್‍ಗೆ ರೈತರ ಕಷ್ಟದ ಬಗ್ಗೆ ಏನು ಗೊತ್ತು. ಅವರಿಗೆ ಸಿನಿಮಾ ಮಾಡುವುದನ್ನು ಬಿಟ್ಟರೆ ಬೇರೇನು ಗೊತ್ತಿದೆ. ದರ್ಶನ್‍ಗೆ ರೈತರ ಬಗ್ಗೆ ಗೊತ್ತಿರಲ್ಲ, ನಿರ್ಮಾಪಕರ ಬಗ್ಗೆ ಗೊತ್ತಿರುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: SSLCಯಲ್ಲಿ ಹಾಸನಕ್ಕೆ ಉತ್ತಮ ಫಲಿತಾಂಶ ಬರಲು ಪತ್ನಿ ಭವಾನಿ ಕಾರಣ- ರೇವಣ್ಣ
Advertisement
Advertisement
ಸಿಎಂ ಕುಮಾರಸ್ವಾಮಿಯವರು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಷ್ಟೊಂದು ಕೆಲಸ ಮಾಡಿದ ಸಿಎಂ ಚಿಕಿತ್ಸೆ ತಗೆದುಕೊಳ್ಳಬಾರದ ಎಂದು ಪ್ರಶ್ನಿಸಿದರು. ಯಡಿಯೂರಪ್ಪಗೆ ಅವರ ಸರ್ಕಾರ ರಚನೆ ಮಾಡಬೇಕು ಎಂಬ ಅರ್ಜೆಂಟ್ ಇದೆ. ಆದರೆ ಕುಮಾರಸ್ವಾಮಿಗೆ ಯಾವ ಅರ್ಜೆಂಟೂ ಇಲ್ಲ. ಯಡಿಯೂರಪ್ಪನವರಿಗೆ ಚಿಕಿತ್ಸೆ ಮಾಡುವವರೇ ಬೇರೆ ಇದ್ದಾರೆ. ಯಡಿಯೂರಪ್ಪ ಮತ್ತು ದರ್ಶನ್ ಏನು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹೇಳಿ ರೈತರ ಸಮಸ್ಯೆಗಳತ್ತ ಗಮನ ಹರಿಸಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ:ಬಿಜೆಪಿಗೆ ವೋಟ್ ಹಾಕಿದ್ದಕ್ಕೆ SSLCಯಲ್ಲಿ ದಕ್ಷಿಣ ಕನ್ನಡಕ್ಕೆ 5ನೇ ಸ್ಥಾನ – ರೇವಣ್ಣ ವ್ಯಂಗ್ಯ
Advertisement
ಹಾಸನದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿಕೆ ಕುರಿತು ನನಗೆ ಗೊತ್ತಿಲ್ಲ. ಒಬ್ಬ ಚುನಾವಣಾ ಅಧಿಕಾರಿಯಾಗಿ ಆ ಜಿಲ್ಲೆಯ ಹಳೆಯ ಜಿಲ್ಲಾಧಿಕಾರಿ ಮನೆಯಲ್ಲಿ ಉಳಿದುಕೊಳ್ಳುವುದು ಏನಿತ್ತು?. ಬ್ಯಾಚ್‍ಮೇಟ್ ಅಂದ್ಮೇಲೆ ತನಿಖೆ ನಡೆಯಲಿ ಬಿಡಿ. ಅದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ನಮ್ಮ ಚುನಾವಣಾ ಏಜೆಂಟ್ ಈ ಕುರಿತು ದೂರು ಕೊಡುತ್ತಾರೆ ಬಿಡಿ ಎಂದ ಅವರು, ಇವತ್ತೇ ಬರೆದು ಇಟ್ಟುಕೊಳ್ಳಿ ಹಾಸನ, ಮಂಡ್ಯ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ನಮ್ಮ ಅಭ್ಯರ್ಥಿಗಳು ದೆಹಲಿಗೆ ಹೋಗೋದು ಖಚಿತ ಎಂದು ಭವಿಷ್ಯ ನುಡಿದರು.
Advertisement
ದರ್ಶನ್ ಹೇಳಿದ್ದೇನು:
ಇತ್ತೀಚೆಗೆ ಬೆಂಗಳೂರಿನ ಬಿಐಟಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ, ನಾವೆಲ್ಲ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು. ಅದೇ ರೀತಿ ತುಂಬಾ ಕಡೆ ಸಾಲಮನ್ನ ಮಾಡಿಲ್ಲ, ಮಾಡಿಲ್ಲ ಎಂದು ಹೇಳುತ್ತಿದ್ದರು. ಆದರೆ ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ಹೇಳಿದ್ದರು.