ಮೈಸೂರು: ನಾನು ಯಾಕೆ ನಿಂಬೆಹಣ್ಣನ್ನು ಹಿಡಿದುಕೊಂಡಿರುತ್ತೇನೆ ಎನ್ನುವ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಉತ್ತರ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೆಲವೊಂದಕ್ಕೆ ನಿಂಬೆಹಣ್ಣು ಬೇಕೇ ಬೇಕು ಅದಕ್ಕೆ ಹಿಡಿದುಕೊಂಡಿರುತ್ತೇನೆ. ನಮ್ಮ ಕುಲದೇವರು ಈಶ್ವರ. ಈಶ್ವರ ಫೋಟೋ ಜೊತೆ ನಿಂಬೆಹಣ್ಣು ಇಟ್ಟುಕೊಂಡಿರುತ್ತೇನೆ. ಸಮಾವೇಶದಲ್ಲಿ ಯಾರೋ ಕೊಟ್ಟರೂ ಅಂತಾ 5-6 ನಿಂಬೆಹಣ್ಣು ಇಟ್ಟುಕೊಂಡಿದ್ದೆ ಅಷ್ಟೇ ಎಂದರು.
Advertisement
ಬಳಿಕ ನಿಮ್ಮ ಹೆಸರಲ್ಲಿ ನಿಂಬೆಹಣ್ಣು ಫೇಮಸ್ ಆಗಿದೆ ಎಂದು ಪ್ರಶ್ನಿಸಿದ್ದಕ್ಕೆ ರೇವಣ್ಣ ನಕ್ಕಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರಿಗೂ ಒಂದು ನಿಂಬೆಹಣ್ಣು ಕೊಡುತ್ತೇನೆ. ಆರ್. ಅಶೋಕ್‍ಗೂ ನಿಂಬೆಹಣ್ಣು ಕೊಡುತ್ತೇನೆ ಬೇಕಿದ್ರೆ ಕೇಳಲಿ ಎಂದು ನಗುತ್ತಾ ಉತ್ತರಿಸಿದರು. ಇದನ್ನೂ ಓದಿ: ಸೇಫ್ಟಿ ಇರಲೆಂದು ಯಶ್‍ಗೆ ನಿಂಬೆಹಣ್ಣು ಕೊಟ್ಟ ಅಭಿಮಾನಿ
Advertisement
Advertisement
ಈಶ್ವರಪ್ಪ ಅವರಿಗೆ ನಿಂಬೆಹಣ್ಣು ಕೊಡಲ್ವಾ ಎಂದು ಪ್ರಶ್ನಿಸಿದ್ದಕ್ಕೆ, ಈಶ್ವರಪ್ಪನನ್ನು ಯಾಕ್ರಪ್ಪ ಇಷ್ಟೋತ್ತಲ್ಲಿ ನೆನಪಿಸಿಕೊಳ್ತೀರಾ? ಯಾರಾದರೂ ಒಳ್ಳೆಯವರನ್ನು ನೆನಪಿಸಿಕೊಳ್ಳಿ. ಆ ಈಶ್ವರಪ್ಪನನ್ನು ಯಾಕ್ ನೆನಪಿಸಿಕೊಳ್ತೀರಾ. ಈಶ್ವರಪ್ಪನ ಬಗ್ಗೆ ಮಾತನಾಡಿದ್ರೆ ನಾನು ಪೊಳ್ಳೆದ್ದು ಹೋಗ್ತಿನಿ. 2018ರಲ್ಲಿ ಈಶ್ವರಪ್ಪ ಪರಿಸ್ಥಿತಿ ಏನಾಗಿತ್ತು ಗೊತ್ತು ತಾನೇ? ಅವರೇ ನಮ್ಮ ಪಕ್ಷಕ್ಕೆ ಬರುವುದಕ್ಕೆ ತಯಾರಾಗಿದ್ದರು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದರು. ಇದನ್ನೂ ಓದಿ: ನಿಖಿಲ್‍ಗೆ ಮೂರು ನಿಂಬೆಹಣ್ಣು ಕೊಟ್ಟ ಜೆಡಿಎಸ್ ಕಾರ್ಯಕರ್ತರು!
Advertisement
ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ. ರೈತರ ಸಹಾಯ ಧನದ ಪಟ್ಟಿ ಕೇಂದ್ರಕ್ಕೆ ತಲುಪಿಲ್ಲ ಅಂದರೆ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ. ರಾಜ್ಯದಿಂದ ಕೇಂದ್ರಕ್ಕೆ 15 ಲಕ್ಷ ರೈತರ ಪಟ್ಟಿ ಹೋಗಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದರು.