ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪವರ್ ಮಿನಿಸ್ಟರ್ ಲೋಕೋಪಯೋಗಿ ಎಚ್.ಡಿ.ರೇವಣ್ಣ ಅವರಿಗಿಂತ ಮೂವರು ಪವರ್ ಫುಲ್ ವ್ಯಕ್ತಿಗಳು ಅವರ ಇಲಾಖೆಯಲ್ಲಿಯೇ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸರೋಜ ಪಾಟೀಲ್, ಚಂದ್ರಶೇಖರ್ ಮತ್ತು ಅಂದಾನಿ ಈ ಮೂವರು ಸಹ ಎಂಜಿನಿಯರ್ ಗಳು ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದರು. ಇವರಿಗೆ ಸಚಿವ ರೇವಣ್ಣ ಅವರು ವರ್ಗಾವಣೆಗೆ ಆದೇಶ ಮಾಡಿದ್ದರು. ಆದರೆ ಈ ಮೂವರು ರೇವಣ್ಣ ಅವರ ಆದೇಶಕ್ಕೂ ತಲೆಕೆಡಿಸಿಕೊಳ್ಳದೇ ಅಲ್ಲಿಯೇ ಇದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಅಂದಾನಿ
Advertisement
ಸರೋಜ ಪಾಟೀಲ್, ಚಂದ್ರಶೇಖರ್ ಮತ್ತು ಅಂದಾನಿ ಮೂವರನ್ನು ವರ್ಗಾವಣೆ ಮಾಡಿ ನಾಲ್ಕು ತಿಂಗಳಾದರೂ ವರ್ಗಾವಣೆ ಸ್ಥಾನಕ್ಕೆ ಹೋಗಿಲ್ಲ. ಅಷ್ಟೇ ಅಲ್ಲದೇ 8-10 ವರ್ಷಗಳಿಂದ ಬೆಂಗಳೂರಿನಲ್ಲೆ ಠಿಕಾಣಿ ಹೂಡಿದ್ದಾರೆ. ರೇವಣ್ಣ ಅವರು ವರ್ಗಾವಣೆ ಆದೇಶ ಮಾಡಿದ್ದರೂ ಅಲ್ಲೇ ಕೆಲಸ ಮುಂದುವರಿಸಿದ್ದಾರೆ.
Advertisement
ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 600ರಿಂದ 800ಕ್ಕೂ ಹೆಚ್ಚು ವರ್ಗಾವಣೆ ಆಗಿದೆ. ಅವರು ವರ್ಗಾವಣೆ ಜಾಗಕ್ಕೆ ಹೋಗಿದ್ದಾರೆ. ಆದರೆ ಈ ಮೂರು ಜನ ಮಾತ್ರ ಆದೇಶಕ್ಕೆ ಸೆಡ್ಡು ಹೊಡೆದು ಇಲ್ಲೇ ಉಳಿದುಕೊಂಡಿದ್ದಾರೆ. ಕಾರಣ ಸರೋಜ ಪಾಟೀಲ್, ಚಂದ್ರಶೇಖರ್ ಮತ್ತು ಅಂದಾನಿ ಮೂವರು ಎಂಜಿನಿಯರ್ ಗೆ ಸಚಿವ ರೇವಣ್ಣ ಅವರ ಆಪ್ತ ಎಂಜಿನಿಯರೊಬ್ಬರ ಸಹಾಯದ ಮೇರೆಗೆ ಇಲ್ಲಿಯೇ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಚಂದ್ರಶೇಖರ್
ಸರೋಜಾ ಪಾಟೀಲ್ ಇದೇ ವರ್ಷದ ಜುಲೈ 25ರಂದರು ಬೆಂಗಳೂರಿನಿಂದ ಹೊಸಕೋಟೆಗೆ, ಅಂದಾನಿ ಬೆಂಗಳೂರಿನಿಂದ ಜಲಸಂಪನ್ಮೂಲ ಇಲಾಖೆಗೆ ಸೆಪ್ಟಂಬರ್ 29ರಂದು ವರ್ಗಾವಣೆಗೊಂಡಿದ್ದರು. ಚಂದ್ರಶೇಖರ್ ಸೆಪ್ಟಂಬರ್ 29ರಂದು ಬೆಂಗಳೂರಿನಿಂದ ಹೊಸಕೋಟೆಗೆ ವರ್ಗಾವಣೆ ಮಾಡಲಾಗಿತ್ತು. ಆದ್ರೆ ಈ ಮೂವರು ವರ್ಗಾವಣೆಯಾದ ಸ್ಥಳಕ್ಕೆ ಹೋಗದೇ ಇಲ್ಲೇ ಉಳಿದುಕೊಂಡಿದ್ದು, ಈ ಬಗ್ಗೆ ಗೊತ್ತಿದ್ದರೂ ಸಚಿವ ರೇವಣ್ಣ ಅವರು ಸುಮ್ಮನಿರುವುದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv