– ಡಿಕೆ ನಾಯಕತ್ವ ವಿರುದ್ಧ ಸಿದ್ದು ಬಣ ರಣಕಹಳೆ
ಬೆಂಗಳೂರು: ಕಾಂಗ್ರೆಸ್ (Congress) ಒಳಜಗಳಕ್ಕೆ ಮದ್ದರೆಯಲು ಸುರ್ಜೇವಾಲ ಕೊಟ್ಟ ವಾರ್ನಿಂಗ್ ಕೆಲಸ ಮಾಡಿಲ್ಲ… ಬದಲಾಗಿ, ಪಟ್ಟದ ಕದನ ಹೊಸ ಸ್ವರೂಪ ಪಡೆದಿದೆ. ಹಳೆಯ ಅಸ್ತ್ರವೊಂದಕ್ಕೆ ಸಿಎಂ ಬಣ ಸಾಣೆ ಹಿಡಿದಿದೆ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಕೂಗೆಬ್ಬಿಸಿ ಹೊಸ ಆಟಕ್ಕೆ ನಾಂದಿ ಹಾಡಿದೆ. ಸಿಎಂ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ, ಡಿಕೆಶಿ (DK Shivakumar) ನಾಯಕತ್ವದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.
ಸಂಘಟನೆ ವಿಚಾರದಲ್ಲಿ 2023ರಲ್ಲಿ ಇದ್ದ ಸ್ಪೀಡ್ ಕಡಿಮೆ ಆಗಿದೆ.. ಕೆಪಿಸಿಸಿಗೆ ಪೂರ್ಣ ಪ್ರಮಾಣದ.. ವರ್ಚಸ್ಸು ಇರುವ ಹೊಸ ಅಧ್ಯಕ್ಷರು ಬೇಕಿದೆ ಎಂಬ ಹಕ್ಕೋತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಎಂಬ ದಾಳ ಉರುಳಿಸಿದ್ದಾರೆ. ಇದನ್ನೂ ಓದಿ: 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್ – ವಿಶ್ವದಾಖಲೆ ಬರೆದ ನೀಲಿ ತಾರೆ
ಪವರ್ ಗೇಮ್ ಶುರು ಮಾಡಿದ್ದ ಡಿಕೆ ಶಿವಕುಮಾರ್‌ಗೆ ಸತೀಶ್ ಜಾರಕಿಹೊಳಿ ಚೆಕ್‌ಮೆಟ್ ಇಡಲು ಯತ್ನಿಸಿದ್ದಾರೆ. ಆದ್ರೆ ಅಷ್ಟು ಸುಲಭವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಬಲಾಬಲ ಪ್ರದರ್ಶನ ನಡೆಸಲು ಹೈಕಮಾಂಡ್ ಒಪ್ಪುತ್ತಾ ಅನ್ನೋದೇ ಇಲ್ಲಿನ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಜಾರಿಕೊಂಡಿದ್ದಾರೆ. ಇದ್ರ ಮಧ್ಯೆ, ಪಕ್ಷದ ಮೊದಲು ಸರ್ಕಾರ ನಂತರ ಎಂದಿದ್ದ ಸುರ್ಜೆವಾಲಾಗೆ, ನಾವಿದ್ದರೇ ತಾನೆ ಪಕ್ಷ.. ಸಮುದಾಯ ಇದ್ರೆ ತಾನೆ ಪಕ್ಷ ಎನ್ನುವ ಮೂಲಕ ಪರಮೇಶ್ವರ್ ಪರೋಕ್ಷವಾಗಿ ಟಕ್ಕರ್ ನೀಡಿದ್ದಾರೆ.
ಇನ್ನೂ ಐದು ವರ್ಷವೂ ಸಿದ್ದರಾಮಯ್ಯನವ್ರೇ ಸಿಎಂ ಎಂದು ಸಚಿವ ಮಹದೇವಪ್ಪ ಮತ್ತೊಮ್ಮೆ ಹೇಳಿದ್ದಾರೆ. ನಾನ್ಯಾಕೆ ಭವಿಷ್ಯದಲ್ಲಿ ಸಿಎಂ ಆಗಬಾರದು, ಹೈಕಮಾಂಡ್ ಒಪ್ಪಿದ್ರೆ ನಾನೂ ಸಿಎಂ ಆಗ್ತೀನಿ ಎಂದು ಸಚಿವ ಆರ್.ಬಿ ತಿಮ್ಮಾಪುರ ಕೇಳಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಕೇಸ್ – ರಾಜು ಕಪನೂರ್ ಆ್ಯಂಡ್ ಗ್ಯಾಂಗ್‌ಗೆ 3 ದಿನ ಸಿಐಡಿ ಕಸ್ಟಡಿಗೆ
ಇತ್ತ ಸಿಎಂ ಬದಲಾವಣೆಯ ಸನ್ನಿವೇಶ ಸೃಷ್ಟಿಯಾದ್ರೆ ಪರಮೇಶ್ವರ್ ಸಿಎಂ ಆಗಲಿ ಎಂದಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ, ಕಳೆದ ರಾತ್ರಿ ಎಐಸಿಸಿ ಅಧ್ಯಕ್ಷರೊಂದಿಗೆ ಡಿಸಿಎಂ ಪ್ರತ್ಯೇಕ ಸಭೆ ಮಾಡಿರೋದು ಕುತೂಹಲ ಕೆರಳಿಸಿದೆ. ಇತ್ತ, ಸಿಎಂ ರಾಜೀನಾಮೆ ಸನ್ನಿಹಿತ ಎಂದು ಬಿಜೆಪಿಯ ವಿಜಯೇಂದ್ರ ಪುನರುಚ್ಚರಿಸಿದ್ದಾರೆ.