ನವದೆಹಲಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಎಡರನೇ ಬಾರಿ ಲಾಕ್‍ಡೌನ್ ಆಗಿದೆ. ಈಗಾಗಲೇ ಅನೇಕ ಬ್ಯಾಂಕ್, ಕಂಪನಿಗಳು ಕೆಲಸಗಾರರಿಗೆ ವಿನಾಯಿತಿ ನೀಡಿದೆ. ಇದೀಗ ಸ್ಟಾರ್ಟ್ ಅಪ್‍ಗಳಿಗೂ ಬಾಡಿಗೆ ವಿನಾಯಿತಿ ನೀಡಲಾಗಿದೆ.
ಸ್ಟಾರ್ಟ್ ಅಪ್‍ಗಳು ಮಾರ್ಚ್ ತಿಂಗಳಿಂದ ಜೂನ್‍ವರೆಗೆ ಬಾಡಿಗೆ ಕಟ್ಟುವ ಅಗತ್ಯವಿಲ್ಲ. ಸುಮಾರು 200 ಸಣ್ಣ ಪ್ರಮಾಣದ ಘಟಕಗಳಿಗೆ ಬಾಡಿಗೆ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಸ್ವತಃ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡುವ ಮೂಲಕ ಆದೇಶ ಹೊರಡಿಸಿದ್ದಾರೆ.
Advertisement
IT units/ startups operating from 60 STPI Centers across India have been granted waiver from paying rental for period between 01.03.2020 and 30.06.2020.
This will benefit nearly 200 small & medium IT/ITeS units supporting 3000 direct jobs. @stpiindia #IndiaFightsCorona
— Ravi Shankar Prasad (@rsprasad) April 16, 2020
Advertisement
ಟ್ವೀಟ್‍ನಲ್ಲೇನಿದೆ.?
“ಭಾರತದಾದ್ಯಂತ 60 ಎಸ್‍ಟಿಪಿಐ ಕೇಂದ್ರಗಳಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್‍ಗಳಿಗೆ ಮಾಚ್ 1 ರಿಂಂದ ಜೂನ್ 30ರ ವರೆಗೆ ಬಾಡಿಗೆ ಪಾವತಿಸುವುದನ್ನು ಮನ್ನಾ ಮಾಡಲಾಗಿದೆ. ಇದರಿಂದ 3000 ಜನರಿಗೆ ಉದ್ಯೋಗ ನೀಡಿರುವ ಸುಮಾರು 200 ಸಣ್ಣ ಮತ್ತು ಮಧ್ಯಮ ಐಟಿ/ಐಟಿಇಎಸ್ ಘಟಕಗಳಿಗೆ ಪ್ರಯೋಜನವಾಗಲಿದೆ” ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.