ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡುವ ಸಾಧ್ಯತೆಗಳಿವೆ. ಭಾನುವಾರವಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಸಿದ್ದರಾಮಯ್ಯ ಅವರ ಇಂದಿನ ಸಂಧಾನ ಸಕ್ಸಸ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಟಾಸ್ಕ್ ಅನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸ್ತಾರಾ ಅನ್ನುವ ಪ್ರಶ್ನೆಯೊಂದು ಮೂಡಿದೆ. ಹೀಗಾಗಿ ಇಂದಿನ ಮೆಗಾ ಪೊಲಿಟಿಕಲ್ ಟರ್ನ್ ಸಿದ್ದರಾಮಯ್ಯ ಮೇಲೆ ನಿಂತಿದೆ. ಕಾಂಗ್ರೆಸ್ ಹೈಕಮಾಂಡ್ ಶಾಸಕರನ್ನು ಸಮಾಧಾನಪಡಿಸುವ ಹೊಣೆ ಸಿದ್ದರಾಮಯ್ಯಗೆ ಕೊಟ್ಟಿದೆ. ಆದ್ರೆ ಎಲ್ಲ ಅಸಮಾಧಾನಿತ ಶಾಸಕರು ಸಿದ್ದರಾಮಯ್ಯ ಮಾತು ಕೇಳ್ತಾರಾ? ಅಥವಾ ಸಿದ್ದು ಮಾತು ಕೇಳದೇ ಕಮಲ ಮನೆಯ ಬಾಗಿಲು ತಟ್ಟುತ್ತಾರಾ ಅನ್ನುವ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಇದನ್ನೂ ಓದಿ: ಕೈ ನಾಯಕರ ಜೊತೆ ವೇಣುಗೋಪಾಲ್ ಸಭೆಯಲ್ಲಿ ಏನಾಯ್ತು: ಇಲ್ಲಿದೆ ಇನ್‍ಸೈಡ್ ಸ್ಟೋರಿ
Advertisement
Advertisement
ಸಿದ್ದರಾಮಯ್ಯ ಸಂಧಾನ ವಿಫಲವಾದ್ರೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿರುವ ಕುರಿತು ಚರ್ಚೆಗಳು ನಡೆಯುತ್ತಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv