ರೆಡ್ಡಿ ಬಂಧನ ತಪ್ಪಿಸಿದ್ದು ಸಚಿವ ರಮೇಶ್ ಜಾರಕಿಹೊಳಿ..?

Public TV
1 Min Read
REDDY 3

ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಕೇಸಲ್ಲಿ ಜೈಲಿಗೆ ಹೋಗಿದ್ದ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಯಿಂದ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾಗುತ್ತಾ ಅನ್ನೋ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

ಜನಾರ್ದನ ರೆಡ್ಡಿ ಬಂಧನ ತಪ್ಪಿಸಲು ಕಾಂಗ್ರೆಸ್‍ ನ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಯತ್ನಿಸಿದ್ದಾರೆ ಅನ್ನೋ ಮಾಹಿತಿಯೊಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

Reddy SriRamulu 2

ರೆಡ್ಡಿ ಬಂಧನಕ್ಕೆ ಬಲೆ ಬೀಸುತ್ತಲೇ ರಮೇಶ್ ಜಾರಕಿಹೊಳಿ ಮೂಲಕ ಸಿಎಂ ಮೇಲೆ ರಾಮುಲು ಒತ್ತಡ ಹೇರಿದ್ದಾರಂತೆ. ಸಿಎಂ ಕುಮಾರಸ್ವಾಮಿ ಜೊತೆ ಆತ್ಮಿಯ ಒಡನಾಟ ಹೊಂದಿರುವ ರಮೇಶ್ ಜಾರಕಿಹೊಳಿಯಿಂದ ಈ ಒತ್ತಡ ತಂತ್ರ ಹೂಡಲಾಗಿದೆ. ಆದರೆ ರೆಡ್ಡಿ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ನೀವು ಸುಮ್ಮನಿರಿ ಅಂತ ಕುಮಾರಸ್ವಾಮಿ ಹೇಳಿದ್ದು, ಕೊನೆಗೆ ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಒತ್ತಡ ಹೇರಲು ಪ್ರಯತ್ನ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ.

HDK DCM

ರೆಡ್ಡಿ ಅರೆಸ್ಟ್ ಆದ್ರೆ ರಾಮುಲು ಅವರ ವಾಲ್ಮೀಕಿ ಸಮುದಾಯ ಮುನಿಸಿಕೊಳ್ಳಬಹುದು ಎಂದು ಪರೋಕ್ಷ ಬೆದರಿಕೆ ಹಾಕಲಾಗಿತ್ತು. ನಮಗೂ ಕಷ್ಟ ಆಗುತ್ತೆ. ಮುಂದಿನ ದಿನಗಳಲ್ಲಿ ಇದು ಬೇರೆ ಬೆಳವಣಿಗೆಗಳಿಗೂ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಮುಖ್ಯಮಂತ್ರಿಯವರು ಸೊಪ್ಪು ಹಾಕಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಪ್ರಯತ್ನಕ್ಕೂ ಯಶಸ್ಸು ಸಿಕ್ಕಿಲ್ಲ. ಈ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ದೊಸ್ತಿ ಸರ್ಕಾರಕ್ಕೆ ಕಂಟಕ ಎದುರಾಗುತ್ತಾ ಅನ್ನೋ ಚರ್ಚೆಗಳು ಆರಂಭವಾಗಿದೆ.

congress bjp

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *