ಬೆಳಗಾವಿ: ಜಿಲ್ಲೆಯ ಸಾಂಬ್ರಾ ಏರ್ ಪೋರ್ಟ್ ಗೆ ಬಂದಿಳಿದ ವೇಳೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರನ್ನು ಸಚಿವ ರಮೇಶ್ ಜಾರಕಿಹೊಳಿ ಸ್ವಾಗಿಸಿದ್ರು. ಈ ವೇಳೆ ಸಿಎಂ ಅವರು ರಮೇಶ್ ಜಾರಕಿಹೊಳಿ ಕೆನ್ನೆ ಸವರಿ ಮಾತನಾಡಿಸಿದ್ದಾರೆ.
ಬೆಳಗಾವಿ ಏರ್ ಪೋರ್ಟ್ ಗೆ ಮುಖ್ಯಮಂತ್ರಿಯವರು ಬಂದಿಳಿಯುತ್ತಿದ್ದಂತೆಯೇ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಬ್ಬರೂ ಪ್ರತ್ಯೇಕವಾಗಿ ಸ್ವಾಗತಿಸಿದ್ದಾರೆ. ಸಚಿವರು ಆದರದಿಂದ ಮುಖ್ಯಮಂತ್ರಿಯವನ್ನು ಹೂ ಗುಚ್ಚ ನೀಡಿ ಬರಮಾಡಿಕೊಳ್ಳುತ್ತಿದ್ದಾಗ ಸಿಎಂ ಅವರು ರಮೇಶ್ ಜಾರಕಿಹೊಳಿ ಕೆನ್ನೆ ಸವರಿ ಮಾತನಾಡಿಸಿದ್ದಾರೆ. ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಎಂ ಕಾರಿನಲ್ಲೇ ತೆರಳಿದ್ದಾರೆ. ಆದ್ರೆ ರಮೇಶ್ ಜಾರಕಿಹೊಳಿ ಅವರು ಸಿಎಂ ಜೊತೆಗೆ ಹೋಗದೆ ಪ್ರತ್ಯೇಕ ಕಾರಿನಲ್ಲಿ ಕಾರ್ಯಕ್ರಮದತ್ತ ತೆರಳಿದ್ದಾರೆ.
Advertisement
Advertisement
ಬೆಳಗಾವಿಯ ಕೆಎಲ್‍ಇ ಸಂಸ್ಥೆಯ 75ನೇ ವರ್ಷದ ಅಮೃತಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ವಿಶೇಷ ಅತಿಥಿಗಳಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ಸ್ವಾಗತಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಜಿಐಟಿ ಕಾಲೇಜು ಆವರಣಕ್ಕೆ ರಾಷ್ಟ್ರಪತಿ ಬಂದಿದ್ದಾರೆ. ಇದನ್ನೂ ಓದಿ: ನಾನು ನನ್ನ ಪಕ್ಷದ ಶಿಸ್ತಿನ ಸಿಪಾಯಿ: ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದು, ಬೆಳಗ್ಗೆ 8 ಗಂಟೆಯಿಂದಲೇ ನಗರದಲ್ಲಿ ಚೆನ್ನಮ್ಮ ವೃತ್ತ ಸೇರಿದಂತೆ ಬೆಳಗಾವಿ ಖಾನಾಪುರ ರಸ್ತೆ, ಸಾಂಬ್ರಾ ಬೆಳಗಾವಿ ರಸ್ತೆಯ ಸಾರ್ವಜನಿಕ ಸಂಚಾರವನ್ನ ಸಂಪೂರ್ಣವಾಗಿ ಬಂದ್ ಮಾಡಿ ಉಳಿದಂತೆ ರಸ್ತೆ ಮಾರ್ಗಗಳನ್ನ ಬದಲಿಸಲಾಗಿದೆ. ಈ ಮಧ್ಯೆ, ರಾಷ್ಟ್ರಪತಿಗಳು ಬರ್ತಿದ್ದಾರೆ ಎಂಬ ಕಾರಣಕ್ಕೆ ರಸ್ತೆಗಳಿಗೆ ಡಾಂಬರ್ ಭಾಗ್ಯ ಕೊಟ್ಟಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv