– ರೈ ವಿರುದ್ಧ ರಾಹುಲ್‍ಗೆ ದೂರು
ಬೆಂಗಳೂರು: ಕಾಡಿನ ರಕ್ಷಣೆ ಮಾಡಬೇಕಾದ ಅರಣ್ಯ ಸಚಿವ ರಮಾನಾಥ್ ರೈ ಟಿಂಬರ್ ಮಾಫಿಯಾಗೆ ತೆರೆಮರೆಯಲ್ಲಿ ಬೆಂಬಲ ನೀಡ್ತಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಹಿಂದೆ ನಗರದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಕೈ ಹಾಕಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪರಿಸರ ಪ್ರೇಮಿಗಳು ಸಿಡಿದೆದ್ದಿದ್ರು. ಮರ ಕಡಿಯಲಾಗುತ್ತೆ ಮತ್ತು ಪರಿಸರ ನಾಶವಾಗುತ್ತೆ ಅನ್ನೋ ಕೂಗು ಗಟ್ಟಿಯಾದಾಗ ಸರ್ಕಾರ ಈ ಯೋಜನೆಯನ್ನ ಕೈಬಿಟ್ಟಿತ್ತು.
Advertisement
ಈಗ ಸದ್ದಿಲ್ಲದೇ 50ಕ್ಕೂ ಹೆಚ್ಚು ಜಾತಿಯ ಮರಗಳನ್ನು ಯಾರ ಅನುಮತಿಗೂ ಕಾಯದೆ ಕಡಿಯಬಹುದು ಅಂತಾ ಮರಗಳ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಆದೇಶ ಹೊರಡಿಸಲು ಸಜ್ಜಾಗಿದೆ. ಅಲ್ಲದೇ ಇದಕ್ಕಾಗಿ ಮಸೂದೆಯನ್ನು ಮಂಡಿಸಲಾಗಿದೆ. ಹಳ್ಳಿಯ ರೈತರ ಹಿತದೃಷ್ಟಿಯಿಂದ ಈ ಕಾಯ್ದೆ ಅಂತಾ ಅರಣ್ಯ ಸಚಿವ ರಮಾನಾಥ್ ರೈ ಮರ ಕಡಿಯಲು ಅಸ್ತ್ರ ಹಿಡಿದಿದ್ದಾರೆ. ಸರ್ಕಾರ ಗುಲ್‍ಮೋಹರ್, ಆಫ್ರಿಕನ್ ಟ್ಯೂಲಿಪ್, ಲಕ್ಷ್ಮಿತರು ಮರ, ನುಗ್ಗೇಕಾಯಿ ಮರ, ಬಾಗೇಮರ ಸೇರಿದಂತೆ ಐವತ್ತಕ್ಕೂ ಹೆಚ್ಚು ಜಾತಿಯ ಮರಗಳ ಹೆಸರನ್ನು ಲಿಸ್ಟ್ ಮಾಡಿಕೊಂಡಿದೆ.
Advertisement
Advertisement
ಈ ಸಂಬಂಧ ರಮಾನಾಥ್ ರೈ ವಿರುದ್ಧ ಪರಿಸರ ಪ್ರೇಮಿಗಳು ಸಿಡಿದೆದ್ದಿದ್ದಾರೆ. ಈ ಕಾಯ್ದೆ ಜಾರಿಯಾದ್ರೆ ದೊಡ್ಡ ಹೋರಾಟವಾಗಲಿದೆ. ನಿಮ್ಮ ಸಚಿವರಿಗೆ ಬುದ್ಧಿ ಹೇಳಿ ಅಂತಾ ಪರಿಸರ ಪ್ರೇಮಿ ನಿಶಾಂತ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
Advertisement
ಸರ್ಕಾರ ಟಿಂಬರ್ ಮಾಫಿಯಾಗೆ ಕುಮ್ಮಕ್ಕು ಕೊಡೋಕೆ ಈ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ ಅನ್ನೋ ಅನುಮಾನ ಮೂಡಿದೆ.