ಬೆಂಗಳೂರು: ದೇಗುಲಗಳಲ್ಲಿ ಡ್ರೆಸ್ ಕೋಡ್ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ವಿರೋಧನೂ ಮಾಡಲಿಲ್ಲ, ಪರನೂ ಮಾತಾಡಲಿಲ್ಲ. ಭಕ್ತಿ ಮುಖ್ಯ ಅಂತಾ ಹೇಳಿದ್ದಾರೆ ಅಷ್ಟೇ ಎಂದು ಸಚಿವ ರಾಮಲಿಂಗಾ ರೆಡ್ಡಿಯವರು (Ramalinga Reddy) ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೂರಾರು ವರ್ಷಗಳಿಂದ ಜನ ದೇವಸ್ಥಾನಕ್ಕೆ ಹೋಗ್ತಾರೆ, ಬರ್ತಾರೆ. ಅದೇ ರೀತಿ ಅಂತಾ ಹೇಳಿದ್ದಾರೆ. ಖಾಸಗಿ ದೇವಾಲಯಗಳೂ ಇದ್ದಾವೆ. ಮಂತ್ರಾಲಯ, ಧರ್ಮಸ್ಥಳದಲ್ಲಿ ಪಂಚೆ ಹಾಕಿಕೊಂಡು ಹೋಗಬೇಕಾಗುತ್ತೆ. ತಕ್ಷಣಕ್ಕೆ ನಮ್ಮ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ನೀತಿ ಎಲ್ಲೂ ಇಲ್ಲ ಎಂದರು.
Advertisement
Advertisement
ಹಂಪಿಗೆ ವಿದೇಶಿ ಪ್ರವಾಸಿಗರು ಜಾಸ್ತಿ ಬರುತ್ತಾರೆ. ಅಲ್ಲಿ ಬರ್ಮುಡಾ, ನಿಕ್ಕರ್ ಹಾಕಿಕೊಂಡು ಬರುತ್ತಾರೆ. ಹೀಗಾಗಿ ಅಲ್ಲಿ ಜಿಲ್ಲಾಧಿಕಾರಿಗಳು ಡ್ರೆಸ್ ಕೋಡ್ ಮಾಡಿದ್ದಾರೆ. ಸರ್ಕಾರದ ಮುಂದೆ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲ. ದೇವಸ್ಥಾನದ ಆಡಳಿತ ಮಂಡಳಿಗಳು ವಸ್ತ್ರಸಂಹಿತೆ ಬಗ್ಗೆ ಪ್ರಸ್ತಾವನೆ ಬಂದರೆ ಆಮೇಲೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ಇಂಥದ್ದೇ ಡ್ರೆಸ್ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್ ಕೋಡ್‌ಗೆ ಸಿಎಂ ವಿರೋಧ
Advertisement
ಈಗ ಜಾತ್ರೆಗಳು ನಡೆಯುತ್ತಾ ಇರ್ತಾವೆ ಲಕ್ಷಾಂತರ ಜನ ಬರ್ತಾರೆ ಪಾಲನೆ ಕಷ್ಟ. ಈಗ ಯಲ್ಲಮ್ಮ ಗುಡ್ಡಕ್ಕೆ ಲಕ್ಷಾಂತರ ಜನ ಬರುತ್ತಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಜನ ಬರುತ್ತಾರೆ ಹೇಗೆ ಪಾಲನೆ?. ತಕ್ಷಣಕ್ಕೆ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ, ಬಂದರೆ ನೋಡೋಣ. ಒಂದೇ ಒಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ತಗೊಂಡಿದ್ದಾರೆ. ಅವರು ವಿದೇಶಿಗರಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಮದು ರಾಮಲಿಂಗಾ ರೆಡ್ಡಿಯವರು ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ದಾರೆ.