ಬೆಂಗಳೂರು: ಉಗ್ರರನ್ನು ಹಿಡಿದು ಜೈಲಿಗೆ ಕಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ತಿಳಿಸಿದರು.
ರಾಮೇಶ್ವರಂ ಕೆಫೆ (Rameshwaram Cafe) ಸ್ಫೋಟ ಕುರಿತು ಮಾತನಾಡಿದ ಅವರು, ಉಗ್ರರು ಎಲ್ಲಿಗೆ ಹೋಗ್ತಾರೆ? ಉಗ್ರರನ್ನು ಹಿಡಿದು ಜೈಲಿಗೆ ಕಳಿಸೋ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತೆ. ನಮ್ಮ ಸರ್ಕಾರ ಶೀಘ್ರದಲ್ಲೇ ಬಾಂಬರ್ ಪತ್ತೆ ಹಚ್ಚಿ ಬಂಧನ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ರೆ ಬಾಂಬ್ ಸ್ಫೋಟ ಆಗ್ತಿರಲಿಲ್ಲ: ಗೋವಾ ಸಿಎಂ ಪ್ರಮೋದ್ ಸಾವಂತ್
ಯಡಿಯೂರಪ್ಪ ಸಿಎಂ ಆದಾಗ, ಬೊಮ್ಮಾಯಿ ಸಿಎಂ ಆದಾಗ, ಜಗದೀಶ್ ಶೆಟ್ಟರ್ ಸಿಎಂ ಆದಾಗಲೂ ಬಾಂಬ್ ಸ್ಫೋಟವಾಗಿದೆ. ಅವರ ಸರ್ಕಾರ ಇದ್ದಾಗ ಆರು ಸಲ ಬಾಂಬ್ ಬ್ಲಾಸ್ಟ್ ಆಗಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಅಂಬಾರಿ ಬಸ್‌ನಲ್ಲಿ ಬಾಂಬ್ ಇಡ್ತೇವೆ ಎಂಬ ಇ-ಮೇಲ್ ಬೆದರಿಕೆ ವಿಚಾರವಾಗಿ ಮಾತನಾಡಿ, ನಮ್ಮ ಸಾರಿಗೆ ಇಲಾಖೆಯ ಎಂಡಿಗಳು ಆಕ್ಷನ್ ತೆಗೆದುಕೊಂಡಿದ್ದಾರೆ. ಲಾಂಗ್ ರೂಟ್ ಬಸ್‌ನಲ್ಲಿ ಅಹಿತಕರ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಬಟ್ಟೆ ಬದಲಾಯಿಸಿ ಟೋಪಿ ಬಿಟ್ಟು ಹೋದ ಬಾಂಬರ್
ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಭೆ ಕುರಿತು ಮಾತನಾಡಿ, ರೆಜಿಸ್ಟ್ರೇಷನ್ ಆದ ಸಾರಿಗೆ ಸಂಘಟನೆಗಳ ಜೊತೆ ಮೀಟಿಂಗ್ ಇದೆ. ಹಲವಾರು ಬೇಡಿಕೆಗಳಿವೆ. ಅದರ ಬಗ್ಗೆ ಚರ್ಚೆ ಮಾಡ್ತೇವೆ ಎಂದರು.