ಮಂಡ್ಯ: ಮಳೆಯಿಂದ ಹಾನಿಯಾಗಿದ್ದ ಮನೆಗಳ ಮರುನಿರ್ಮಾಣಕ್ಕೆ ಧನುರ್ಮಾಸ ಇತ್ತು ಎಂದು ಕಾರಣಕೊಟ್ಟ ತಹಶೀಲ್ದಾರ್‌ಗೆ ಸಚಿವ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಆರ್.ಅಶೋಕ್ ಕೆಆರ್‌ಪೇಟೆ ತಹಶೀಲ್ದಾರ್ ಶಿವಮೂರ್ತಿ ಅವರಿಗೆ ತರಾಟೆ ತೆಗೆದುಕೊಂಡಿದ್ದರು. ಕಳೆದ ಮೂರು ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಕೆಆರ್‌ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳು ಹಾನಿಯಾಗಿದ್ದವು. ಈ ಮನೆಗಳ ಮರು ನಿರ್ಮಾಣ ಹಂತದ ಕಾಮಗಾರಿ ಎಲ್ಲಿಯವರೆಗೆ ಬಂದಿದೆ ಎಂದು ಸಚಿವ ಆರ್.ಅಶೋಕ್ ತಹಶೀಲ್ದಾರ್ ಶಿವಮೂರ್ತಿ ಅವರನ್ನು ಕೇಳಿದ್ದರು.
Advertisement
Advertisement
ಈ ವೇಳೆ ತಹಶೀಲ್ದಾರ್ ಶಿವಮೂರ್ತಿ ಸರ್ ಎಲೆಕ್ಷನ್, ಧನುರ್ಮಾಸ ಇತ್ತು ಹಾಗಾಗಿ ಇನ್ನೂ ಕೆಲಸ ಪ್ರಾರಂಭವಾಗಿಲ್ಲ ಎಂದರು. ಇದಕ್ಕೆ ಕೋಪಗೊಂಡ ಆರ್.ಅಶೋಕ್, ಧನುರ್ಮಾಸ ಮುಗಿದು ಎಷ್ಟು ದಿನವಾಗಿದೆ ಅದಕ್ಕೂ ಮನೆ ಕಟ್ಟುವುದಕ್ಕೂ ಏನು ಸಂಬಂಧ ಇದೆ. ಚುನಾವಣೆ ಅಂತೀರಾಲ್ಲ ಚುನಾವಣೆ ನೀತಿಸಂಹಿತೆ ಯಾವುದಕ್ಕೆ ಬರುತ್ತದೆ ಅಂತಾ ನಿಮಗೆ ಗೊತ್ತಾ. ಕಾನೂನನ್ನು ಸರಿಯಾಗಿ ಓದಿಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ 4-5 ದಿನಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭ ಮಾಡಬೇಕೆಂದು ತಾಕೀತು ಮಾಡಿದ್ದಾರೆ.