ಬೆಂಗಳೂರು: ಈಗಾಗಲೇ ಮೂಲೆ ಗುಂಪಾಗಿರುವ ಕಾಂಗ್ರೆಸ್ಸಿಗರು ಟಾಂಗಾ ಹಾಗೂ ಸೈಕಲ್ ಓಡಿಸುವುದಕ್ಕೆ ಮಾತ್ರ ಸೀಮಿತ ಎಂದು ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಕಾಂಗ್ರೆಸ್ಸಿಗರು ಸೋತು ಸುಣ್ಣ ಆದ ಮೇಲೆ ದಿನಕ್ಕೊಂದು ಗಿಮಿಕ್ ಮಾಡುತ್ತಾ ಇದ್ದಾರೆ. ಯಾವತ್ತಾದ್ರೂ ಪೆಟ್ರೋಲ್ ಡಿಸೀಲ್ ಬೆಲೆ ಕಮ್ಮಿ ಆಗಿತ್ತಾ ಎಂದು ಪ್ರಶ್ನಿಸಿದರು.
Advertisement
Advertisement
ಕಾಂಗ್ರೆಸ್ಸಿನವರು ಇದ್ದಾಗ ಬೆಲೆ ಏರಿಕೆಯಾದ್ರೆ ಆರ್ಥಿಕ ಸುಧಾರಣೆಗಾಗಿ ಅಂತಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬೆಲೆ ಏರಿಕೆಯಾದ್ರೆ ಅದು ಅಕ್ರಮ, ಅನೈತಿಕ. ಅವರ ಪಾರ್ಟಿಯನ್ನು ಯಾಕೆ ಬೆಳೆಸೋಕೆ ಆಗಿಲ್ಲ, ಯಾಕೆ ಸೋತೆವು ಅಂತ ಆತ್ಮ ವಿಮರ್ಶೆ ಮಾಡ್ತಾ ಇದ್ದಿದ್ದರು ಎಂದರು. ಇದನ್ನೂ ಓದಿ: ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ
Advertisement
Advertisement
ಎತ್ತಿನ ಬಂಡಿ ಆಯ್ತು, ಸೈಕಲ್ ಸವಾರಿ ಆಯ್ತು ಈಗ ಟಾಂಗಾ ಜಾಥಾ. ಇದು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಇಂದು ಹಮ್ಮಿಕೊಂಡಿರುವ ವಿಭಿನ್ನ ಪ್ರತಿಭಟನೆ. ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹಾಗೂ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ಟಾಂಗಾ ಜಾಥಾ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಟಾಂಗಾ ಗಾಡಿಯಲ್ಲಿ ಹೋಗುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು ಜಾಥಾದಲ್ಲಿ ಭಾಗಿಯಾಗಿದ್ದಾರೆ.