-ಅಪಘಾತದ ನಂತರ ಮತ್ತೊಂದು ಬ್ರ್ಯಾಂಡೆಡ್ ಕಾರಿನಲ್ಲಿ ಹೋದ್ರು
ಬಳ್ಳಾರಿ: ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಚಾಲಕ ಯುವಕನಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಅಪಘಾತದ ವೇಳೆ ಪ್ರತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿ ವರದಿಗಾರ ನವೀನ್ ಅವರು ಪ್ರತ್ಯಕ್ಷದರ್ಶಿಗೆ ಸಚಿವ ಆರ್. ಅಶೋಕ್ ಅವರ ಪುತ್ರ ಶರತ್ ಫೋಟೋವನ್ನು ತೋರಿಸಿ ಕಾರಿನಲ್ಲಿ ಈ ವ್ಯಕ್ತಿ ಇದ್ದರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತ್ಯಕ್ಷದರ್ಶಿ ಹೌದು ಈ ಫೋಟೋದಲ್ಲಿರುವ ವ್ಯಕ್ತಿ ಕಾರಿನಲ್ಲಿ ಇದ್ದರು ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?
Advertisement
ಇದೇ ವೇಳೆ ಪ್ರತ್ಯಕ್ಷದರ್ಶಿ ಅಪಘಾತದ ಬಗ್ಗೆ ವಿವರಿಸಿದ್ದಾರೆ. ಇದು ಡಬಲ್ ರೋಡ್ ಆಗಿದ್ದು, ಒಂದು ಕಡೆಯಿಂದ ಇವರ ಕಾರು ಬರುತ್ತಿತ್ತು. ಮತ್ತೊಂದು ಕಡೆಯಲ್ಲಿ ಲಾರಿ ಬರುತ್ತಿತ್ತು. ದೊಡ್ಡ ಕಾರು ಎಂದರೆ ಮಾಮೂಲಿ ಸ್ಪೀಡ್ ಆಗಿ ಬರುತ್ತಿರುತ್ತೆ. ಹಾಗೆಯೇ ಸೋಮವಾರ ಈ ಕಾರು ಕೂಡ ಸ್ಪೀಡ್ ಆಗಿ ಬರುತ್ತಿತ್ತು. ಪಕ್ಕದಲ್ಲಿ ಲಾರಿ ಕೂಡ ಬರುತ್ತಿತ್ತು. ಈ ವೇಳೆ ಚಾಲಕ ಟೀ ಕುಡಿಯಲು ಎಂದು ತಕ್ಷಣ ತನ್ನ ಲಾರಿಯನ್ನು ಸೈಡ್‍ನಲ್ಲಿ ಪಾರ್ಕ್ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಪಘಾತವಾದ ಕಾರಿಗೆ ನಮ್ಗೂ ಸಂಬಂಧವಿಲ್ಲ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಅಶೋಕ್
Advertisement
Advertisement
ಚಾಲಕ ತಕ್ಷಣ ಸೈಡಿನಲ್ಲಿ ಲಾರಿ ಪಾರ್ಕ್ ಮಾಡಿದ್ದನ್ನು ನೋಡಿದ ಕಾರು ಚಾಲಕ ನಾನು ಸ್ಪೀಡಾಗಿ ಬಂದರೆ ಅಪಘಾತವಾಗುತ್ತೆ ಎಂದು ತಿಳಿದಿದ್ದನು. ಈ ವೇಳೆ ಒಂದು ಕಡೆ ಮಣ್ಣು ಇರುವುದು ನೋಡಿ ಮತ್ತೊಂದು ಕಡೆಯೂ ಮಣ್ಣು ಇರಬಹುದು. ಅಲ್ಲಿ ಮುಖ್ಯರಸ್ತೆ ಇರಬಹುದು ಎಂದು ತಿಳಿದುಕೊಂಡು ಆ ಕಡೆ ಹೋದ. ಲಾರಿ ಕೂಡ ಅಡ್ಡ ಇದ್ದಿದ್ದರಿಂದ ಕಾರು ಚಾಲಕ ಯುವಕನನ್ನು ನೋಡಿಲ್ಲ. ಆ ಯುವಕನನ್ನು ಹೊಡೆದುಕೊಂಡು ಮುಂದೆ ಬೋರ್ಡ್ ಹೊಡೆದುಕೊಂಡು ಮುಂದೆ ಹೋಯ್ತು ಎಂದು ವಿವರಿಸಿದರು. ಇದನ್ನೂ ಓದಿ: ಪ್ರಭಾವಿ ವ್ಯಕ್ತಿಯನ್ನ ರಕ್ಷಿಸಲು ಬಿಜೆಪಿ ಸರ್ಕಾರದಿಂದ ಪ್ರಯತ್ನ – ಕಾಂಗ್ರೆಸ್
Advertisement
ಘಟನೆ ನಡೆದ ನಂತರ ಆ ಗಲಾಟೆಯಲ್ಲಿ ಅಶೋಕ್ ಪುತ್ರ ಶರತ್ ಎಲ್ಲಿ ಹೋದರು ಎಂದು ಸರಿಯಾಗಿ ನೋಡಲಿಲ್ಲ. ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ನೋಡಿದ್ದೇವೆ ಅಷ್ಟೇ. ಇನ್ನೊಬ್ಬ ವ್ಯಕ್ತಿಯ ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ಕಳುಹಿಸಿಕೊಟ್ಟೇವು. ಇವರೆಲ್ಲರೂ ಒಂದೇ ಕಾರಿನಲ್ಲಿ ಹೋಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಘಟನೆಯನ್ನು ವಿವರಿಸಿದ್ದರು.
ಅಪಘಾತವಾದ ನಂತರ ಮತ್ತೊಂದು ಬ್ರ್ಯಾಂಡೆಡ್ ಕಾರಿನಲ್ಲಿ ಅವರು ಮೃತದೇಹವನ್ನು ತೆಗೆದುಕೊಂಡು ಹೋಗಲಾಯಿತು. ಅಪಘಾತವಾದ ನಂತರ ಮತ್ತೊಂದು ಕಾರು ತಕ್ಷಣ ಬಂತು. ಆಗ ನಾವು ಅವರ ಪರಿಚಯಸ್ಥರು ಎಂದು ತಿಳಿದುಕೊಂಡಿದ್ದೇವೆ. ಅವರು ಅವರ ಜೊತೆಗಿದ್ದ ವ್ಯಕ್ತಿಯ ಮೃತದೇಹವನ್ನು ತೆಗೆದುಕೊಂಡು ಹೋದರು. ಸ್ಥಳದಲ್ಲಿದ್ದ ಜನರು ಯುವಕನ ಮೃತದೇಹವನ್ನು ಅಂಬುಲೆನ್ಸ್‍ನಲ್ಲಿ ಕಳುಹಿಸಿಕೊಟ್ಟರು ಎಂದು ತಿಳಿಸಿದರು.