ಚಾಮರಾಜನಗರ: ಮೈಸೂರು ದಸರಾ ನಾಡಹಬ್ಬದಲ್ಲಿ ಈ ಹಿಂದಿನಿಂದಲೂ ಚಾಮರಾಜನಗರ, ಮೈಸೂರು ಉಸ್ತುವಾರಿ ಸಚಿವರು ಹಾಗೂ ಸಿಎಂ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಉಸ್ತುವಾರಿಯಾಗಿರುವ ಸಚಿವ ಜಿ.ಟಿ ದೇವೇಗೌಡ ಅವರು ತಮ್ಮ ಇಚ್ಛೆಯಂತೆ ವರ್ತಿಸುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಮ್ ಕೇ ವಾಸ್ತೆಗೆ ದಸರಾ ಸಮಿತಿ ರಚಿಸಿ ನನ್ನನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದು ಬಿಟ್ಟರೆ ಯಾವುದೇ ಇತರೆ ಕಮಿಟಿಗಳನ್ನು ರಚಿಸಿಲ್ಲ. ಈ ಕುರಿತು ಕೇಳಿದರೆ ಮಾಡೋಣ ಬಿಡಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇಲ್ಲಿಯವರೆಗೆ ಕಮಿಟಿ ರಚಿಸಿ ಸೂಕ್ತ ಸ್ಥಾನಮಾನ ನೀಡಿಲ್ಲ. ಮೈಸೂರು, ಚಾಮರಾಜನಗರದಲ್ಲಿ ಇರುವ ಏಕೈಕ ಸಚಿವ ನಾನು. ಆದರೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಯಾರೂ ಇಲ್ಲದ ಕಾರಣ ಕಮಿಟಿಗಳಲ್ಲಿ ನಮ್ಮವರನ್ನು ನೇಮಕ ಮಾಡುವುದು ನನ್ನ ಜವಾಬ್ದಾರಿಯಾಗಿತ್ತು. ಅದು ಕೂಡ ಸಾಧ್ಯವಾಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿರುವುದರಿಂದ ನಾವು ಈ ಕುರಿತು ಏನೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಕೂಡ ನೀವು ಹೇಗೆ ಹೋಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ನಾಡಹಬ್ಬ ಮೈಸೂರಿನ ದಸರಾದಲ್ಲಿ ಭಾಗವಹಿಸುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಪಾಲುದಾರರಾದ ಕಾಂಗ್ರೆಸ್ ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.
Advertisement
ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಾಂಗ್ರೆಸ್ ಸಚಿವರು ಗೈರುಹಾಜರಾಗಿದ್ದರು. ಇದರೊಂದಿಗೆ ದೋಸ್ತಿ ಪಕ್ಷದಲ್ಲಿನ ಮುನಿಸು ಮತ್ತೊಮ್ಮೆ ಎದ್ದು ಕಾಣಿಸಿತ್ತು. ದಸರಾ ಕಾರ್ಯಕ್ರಮದ ಮೊದಲ ದಿನ ಮೈಸೂರು-ಚಾಮರಾಜನಗರದ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ಸಮಾರಂಭಕ್ಕೆ ಬಂದಿರಲಿಲ್ಲ. ಬುಧವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸಚಿವೆ ಜಯಮಾಲ ಅವರು ಹಾಜರಾಗಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv