ಬೆಳಗಾವಿ: ಬಿಜೆಪಿ ಮುಕ್ತ ಭಾರತ ಮತ್ತು ಕಾಂಗ್ರೆಸ್ ಮುಕ್ತ ಭಾರತ ಆಗಲು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದ್ದ ಬಿಜೆಪಿಗೆ ಐದು ರಾಜ್ಯಗಳಲ್ಲಿ ಜನರೇ ಅಬಾರ್ಷನ್ ಮಾಡಿಸಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯಲ್ಲ, ನಮ್ಮ ಯಾವ ಶಾಸಕರು ಪಕ್ಷ ತೊರೆಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಬೆಳಗಾವಿಯಲ್ಲಿ ಹೇಳಿದರು.
ಚುನಾವಣಾ ಫಲಿತಾಂಶ ಮೋದಿಯವರ ವಿಭಜನೆ ಆಡಳಿತಕ್ಕೆ ಉತ್ತರ ನೀಡಿದೆ. ಕೇಂದ್ರ ಸರ್ಕಾರದ ವೈಫಲ್ಯತೆ, ಮೋದಿ ಮತ್ತು ಅಮಿತ್ ಶಾ ಅವರ ವಿಭಜನೆಯ ರಾಜಕಾರಣ, ಕೇಂದ್ರದ ಘೋಷಣೆಗಳೆಲ್ಲ ಸುಳ್ಳು ಎಂಬುವುದನ್ನು ಫಲಿತಾಂಶ ದೇಶದ ಜನರಿಗೆ ಉತ್ತಮ ಸಂದೇಶ ನೀಡಿದೆ. ಬಿಜೆಪಿಯ ಭದ್ರಕೋಟೆಗಳು ಇಂದು ಕಾಂಗ್ರೆಸ್ ವಶವಾಗಿದೆ. ಪ್ರಗತಿ ಪರ ಆಲೋಚನೆ, ಜಾತ್ಯಾತೀತ ತತ್ವಗಳನ್ನು ಕಾಂಗ್ರೆಸ್ ಅಳವಡಿಸಿಕೊಂಡಿದ್ದು, ಇವುಗಳೆಲ್ಲ ಜೊತೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ಕೈ ಚಳಕ ಸಹ ಗೆಲುವಿನಲ್ಲಿ ಒಳಗೊಂಡಿದೆ. ಇಂದು ಸಂವಿಧಾನ ನಂಬಿರುವ ಪಕ್ಷಗಳು ಒಂದಾಗಿದ್ದು, ನಂಬದ ಬಿಜೆಪಿ ಚುನಾವಣೆಯಲ್ಲಿ ಸೋತಿದೆ ಅಂದ್ರು.
Advertisement
Advertisement
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ದೇಶದ 20ರಿಂದ 22 ಮನೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಒಂದೆರೆಡು ಮನೆಯನ್ನು ಕಾಂಗ್ರೆಸ್ ಬಡಿದಾಡಿಕೊಂಡು ತೆಗೆದುಕೊಂಡಿದೆ. ಈ ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಯ ದಿಕ್ಸೂಚಿ ಅಲ್ಲ. ಕೇವಲ ಒಂದೆರೆಡು ಚುನಾವಣೆ ಫಲಿತಾಂಶವನ್ನ ದಿಕ್ಸೂಚಿ ಎಂದು ನಾವು ಕರೆದಿಲ್ಲ. ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು ಅಷ್ಟೆ ಹೊರತು ಬಿಜೆಪಿಗೆ ಅಬಾರ್ಷನ್ ಆಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv