ಉಡುಪಿ: ಮುಂದಿದೆ ಮಾರಿಹಬ್ಬ ಎನ್ನುವ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಸ್ಟೇಟಸ್ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ಕೊಟ್ಟಿದ್ದಾರೆ.
ಮಾರಿಹಬ್ಬ ಎನ್ನುವ ಮೂಲಕ ಬಲಿ ಪಡೆಯುವ ಸೂಚನೆಯಾ ಎಂದು ಪ್ರಶ್ನಿಸಿದ್ದಾರೆ. ಮುಂದಿನ ಚುನಾವಣೆ ಗೆಲುವಿಗಾಗಿ ಗಲಭೆ ಹಬ್ಬಿಸುವ ಯತ್ನ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಎಲ್ಲರೂ ಹಿಂಸಾಚಾರ ನಡೆಸಲು ಮುಂದಾಗಿದ್ದಾರೆ. ಅಮಿತ್ ಶಾ ಅವರು ಪ್ರತಾಪ್ ಸಿಂಹನಿಗೆ ಗಲಾಟೆ ಮಾಡಲು ಹೇಳಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಶಾ ಸೂಚನೆಯಂತೆ ರಾಜ್ಯದಲ್ಲಿ ನಡೆಯುತ್ತಿದೆ, ಕೇಂದ್ರ ಸಚಿವನಾಗಿ ಹೆಗಡೆ ಈ ರೀತಿಯ ಹೇಳಿಕೆ ಸರಿಯಲ್ಲ ಇಂತವರ ಬಗ್ಗೆ ಜನತೆಯೇ ಸರಿಯಾದ ನಿರ್ಧಾರ ತಳೆಯುತ್ತಾರೆ ಎಂದರು. ಇದನ್ನೂ ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ
Advertisement
Advertisement
ಜಾಫರ್ ಷರೀಫ್ ಕಾಂಗ್ರೆಸ್ ಮನೆಯ ಹಿರಿಯ ಅಜ್ಜ. ಕಾಂಗ್ರೆಸ್ ಮುತ್ಸದ್ಧಿ ಜಾಫರ್ ಷರೀಫ್ ಅಸಮಾಧಾನ ಇರಬಹುದು. ಎಲ್ಲಾ ಮನೆಯಲ್ಲೂ ಅಜ್ಜಂದಿರು ಸ್ವಲ್ಪ ಚರಿಪಿರಿ ಮಾಡ್ತಾರೆ. ಪಕ್ಷದ ಹಿರಿಯ ನಾಯಕರು ಅಸಮಾಧಾನ ಶಮನ ಮಾಡುತ್ತಾರೆ ಅಂದರು.
Advertisement
2018ರ ರಾಜ್ಯ ಚುನಾವಣೆಗೆ ಪ್ರಧಾನಿ ಮೋದಿ-ಅಮಿತ್ ಷಾ ಕರ್ನಾಟಕ ಕ್ಕೆ ಪ್ರಚಾರಕ್ಕೆ ಬರಲಿ. ಆದ್ರೆ ರಾಜ್ಯದಲ್ಲಿ ಗಲಭೆ ಎಬ್ಬಿಸುವುದು ಬೇಡ ಎಂದು ಮಾಧ್ಯಮಗಳ ಮೂಲಕ ಟಾಂಗ್ ಕೊಟ್ಟರು. ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿರುವಲ್ಲಿ ಯಾತ್ರೆ ಹೋಗ್ತಾರೆ. ವಿಪಕ್ಷದ ಶಾಸಕರು ಇರುವಲ್ಲಿ ಜನಾಶೀರ್ವಾದ ಕೇಳಲು ಅಧ್ಯಕ್ಷ ಜಿ. ಪರಮೇಶ್ವರ್ ಹೋಗುತ್ತಾರೆ ಎಂದು ಸ್ಪಷ್ಟನೆ ನೀಡಿದರು.
Advertisement