ಮಂಗಳೂರು: ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಸಂಪೂರ್ಣ ಅಲ್ಲಗಳೆದಿದ್ದಾರೆ.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಮೋದ್ ಈ ಬಗ್ಗೆ ನೂರು ಸಾರಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೂ ಬಿಜೆಪಿಯವರು ಬೇಕೆಂದೇ ಇಂಥ ಹೇಳಿಕೆ ನೀಡಿ ಪ್ರಮೋದ್ ಇಮೇಜ್ ಹಾಳು ಮಾಡುತ್ತಿದ್ದಾರೆ. ಇದು ಮಧ್ವರಾಜ್ ತೇಜೋವಧೆ ಮಾಡುವ ಯತ್ನ ಅಂತಾ ದೂರಿದ್ರು.
Advertisement
ಅಲ್ಲದೆ, ಸ್ವತಃ ಪ್ರಮೋದ್ ಮಧ್ವರಾಜ್ ಅವರನ್ನೇ ಹತ್ತಿರಕ್ಕೆ ಕರೆದು ಸ್ಪಷ್ಟನೆ ಕೊಡುವಂತೆ ಹೇಳಿದ್ರು. ಸಿಎಂ ಮಾತಿಗೆ ಸಚಿವ ಪ್ರಮೋದ್ ಕೂಡ ದನಿಗೂಡಿಸಿದ್ರು. ಇನ್ನು ಸಂಸದ ನಳಿನ್ ಕುಮಾರ್ ಈ ಬಗ್ಗೆ ಹೇಳಿದ್ದಾರಲ್ಲ ಅನ್ನೋ ಪ್ರಶ್ನೆಗೆ ನಳಿನ್ ಕುಮಾರ್ ಗೆ ಬುದ್ಧಿಯಿಲ್ಲ. ಸಂಸ್ಕಾರ ಇಲ್ಲ. ಏನ್ ಮಾತಾಡ್ತಾರೆ ಅಂತ ಅವರಿಗೇ ಗೊತ್ತಿರಲ್ಲ. ಅವರ ಬಗ್ಗೆ ಯಾಕಪ್ಪಾ ಮಾತನಾಡುತ್ತೀರಿ ಅಂತಾ ಮರು ಪ್ರಶ್ನೆ ಮಾಡಿದ್ರು.
Advertisement
Advertisement
ಬಿಜೆಪಿ – ಆರ್ ಎಸ್‍ಎಸ್ ನ ಸಾಕಷ್ಟು ಮಂದಿ ನನ್ನ ಸಂಪರ್ಕದಲ್ಲಿದ್ದಾರೆ. ಅದನ್ನೆಲ್ಲ ಹೇಳೋಕಾಗುತ್ತಾ ಅಂತಾ ಪ್ರಮೋದ್ ಮಧ್ವರಾಜ್ ವ್ಯಂಗ್ಯವಾಡಿದ್ರು.
Advertisement
ಇದನ್ನೂ ಓದಿ: ಬಿಜೆಪಿ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ
ಪ್ರಮೋದ್ ಮಧ್ವರಾಜ್ ಅವರು ಉಡುಪಿಯ ಪ್ರವಾಸಿ ಮಂದಿರದಲ್ಲಿ ಅಕ್ಟೋಬರ್ 16ರಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತಕುಮಾರ್ ಅವರನ್ನು ಭೇಟಿ ಆಗಿದ್ದರು. ಭೇಟಿ ಬಳಿಕ ಪ್ರಮೋದ್ ಅವರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎನ್ನುವ ಚರ್ಚೆ ಆರಂಭವಾಗಿತ್ತು. ಆದರೆ ಇದನ್ನು ನಿರಾಕರಿಸಿದ್ದ ಪ್ರಮೋದ್ ಮಧ್ವರಾಜ್, ಇದೊಂದು ಆಕಸ್ಮಿಕ ಭೇಟಿ ಎಂದು ಹೇಳಿ ಚರ್ಚೆಗೆ ವಿರಾಮ ಹಾಕಿದ್ದರು.
https://www.youtube.com/watch?v=RE3QRb67N_Q