ಬಳ್ಳಾರಿ: ಕೌಶಲಾಭಿವೃದ್ದಿ ಹಾಗೂ ಮುಜರಾಯಿ ಸಚಿವ ಪರಮೇಶ್ವರ ನಾಯ್ಕ್ ಸಚಿವರಾದ ಬಳಿಕ ಪಡೆದಿದ್ದ ಕಾರು ಜಾತ್ರೆಯ ರಥ ಎಳೆಯುವ ವೇಳೆ ರಥದ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡ ಪರಿಣಾಮ ಭಾಗಶಃ ಜಖಂಗೊಂಡಿದೆ.
ಜಿಲ್ಲೆಯ ಹೂವಿನಹಡಗಲಿಯ ಮಾನ್ಯರ ಮಸಲವಾಡ ಗ್ರಾಮದಲ್ಲಿ ಇಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ನಡೆದಿತ್ತು. ಆದರೆ ರಥ ಎಳೆಯುವ ರಸ್ತೆಯಲ್ಲೇ ಸಚಿವರ ಕಾರು ನಿಲ್ಲಿಸಿದ್ದರು. ಹೀಗಾಗಿ ರಥ ಎಳೆಯುವ ವೇಳೆ ಆಯ ತಪ್ಪಿದ ಪರಿಣಾಮ ಸಚಿವರ ಕಾರಿಗೆ ರಥ ಅಪ್ಪಳಿಸಿದೆ.
ತೇರು ಎಳೆಯವ ವೇಳೆ ರಥಕ್ಕೆ ಕಾರು ಅಡ್ಡಿಯಾಗಿ ಹಲವರು ಕಾರಿನ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಜನರ ಜೀವಹಾನಿ ತಪ್ಪಿಸುವುದು ಬಿಟ್ಟು ಸಚಿವರ ಕಾರು ಉಳಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಗರಂ ಆದ ಕೆಲವರು ಸಚಿವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಸಚಿವ ಪರಮೇಶ್ವರ ನಾಯ್ಕ್ ತಮ್ಮ ಖಾಸಗಿ ಕಾರಿನ ಚಾಲಕನನ್ನೇ ಸರ್ಕಾರಿ ಕಾರು ಚಾಲನೆ ಮಾಡಿಸಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತವಾಗಿದೆ. ಚಾಲಕನ ನಿರ್ಲಷ್ಯದಿಂದಲೇ ಅವಘಡ ಸಂಭವಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv