ಚಿಕ್ಕೋಡಿ: ಯಡಿಯೂರಪ್ಪ (Yediyurappa) ವಿರುದ್ದ ಬಹಿರಂಗ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿಚಾರದಲ್ಲಿ ನಾನೇನು ಮಾತನಾಡುವುದಿಲ್ಲ, ಎಲ್ಲವನ್ನೂ ಹೈ ಕಮಾಂಡ್ ಗಮನಿಸುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ನಾರಾಯಣಸ್ವಾಮಿ (Narayanaswamy) ಶಾಸಕ ಯತ್ನಾಳ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Advertisement
ಬೆಳಗಾವಿ (Belgavi) ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ವಯೋಶ್ರೀ ಯೋಜನೆಯಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ (HighCommand) ಎಲ್ಲವನ್ನೂ ಗಮನಿಸುತ್ತಿದೆ. ಯತ್ನಾಳ್ ಕುರಿತು ನಾನು ಚರ್ಚೆ ಮಾಡಲ್ಲ. ನಮ್ಮ ಹೈಕಮಾಂಡ್ ಎಲ್ಲವನ್ನೂ ನೋಡುತ್ತಿದೆ. ನಮ್ಮ ರಾಜ್ಯದ ಅಧ್ಯಕ್ಷರು ಸಹ ಎಲ್ಲವನ್ನು ನೋಡುತ್ತಿದ್ದಾರೆ. ಕಾರ್ಯಕರ್ತರಿಂದ ನಮಗೆ ನಮ್ಮ ಐಡೆಂಟಿಟಿ ಸಿಕ್ಕಿದೆ. ಎಲ್ಲರನ್ನೂ ಗೌರವಿಸಿ ಮಾನವೀಯ ಮೌಲ್ಯಗಳನ್ನು ಕಲಿಯಬೇಕು ಎಂದು ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರೈಲಿಗಿಟ್ಟಿದ್ದ ಟಿಪ್ಪು ಹೆಸರೇಕೆ ತೆಗೆಯಬೇಕಿತ್ತು, ಬೇರೆ ಟ್ರೈನ್‍ಗೆ ಒಡೆಯರ್ ಹೆಸರಿಡಲಿ: ಹೆಚ್.ಡಿ. ರೇವಣ್ಣ
Advertisement
Advertisement
ಎಸ್.ಸಿ, ಎಸ್.ಟಿ ಸಮುದಾಯದಕ್ಕೆ ಮೀಸಲಾತಿ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಹಲವು ಸಮುದಾಯಗಳ ಬೇಡಿಕೆಯ ನಡುವೆ ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಿಸುವ ನಿರ್ಧಾರದ ಧೈರ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (BasavarajBommai) ಅವರು ತೋರಿದ್ದಾರೆ. ಧೈರ್ಯ ತೋರಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಈ ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಈ ರೀತಿಯ ಎದೆಗಾರಿಕೆ ಇರಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
Advertisement
ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿ ಸದನದಲ್ಲಿ ಮಂಡನೆ ಮಾಡುತ್ತಾರೆ. ಸದನದಲ್ಲಿ ಮಂಡನೆ ಮಾಡಿ ಕಾನೂನು ತೊಡಕುಗಳು ಹಾಗೂ ಸುಪ್ರೀಂ ಕೋರ್ಟ್ (Supreme Court) ತೀರ್ಮಾನದ ಕುರಿತು ಚರ್ಚೆ ಮಾಡಲಿ. ಶೋಷಿತ ವರ್ಗಕ್ಕೆ ಮೀಸಲು ಅವಶ್ಯಕತೆ ಇದೆ ಎನ್ನುವ ಧೈರ್ಯ ತೋರಿದ್ದಾರೆ ಅದಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.
ಸದಾಶಿವ ಆಯೋಗದ ವರದಿ ಜಾರಿ ಮಾಡಲು ಕಾಂಗ್ರೆಸ್ ಸಚಿವ ಆಂಜನೇಯ ಫೈಲ್ ಹಿಡಿದುಕೊಂಡು ಕ್ಯಾಬಿನೆಟ್‍ಗೆ ಹೋದರು ಮಂಡನೆ ಮಾಡಿಲ್ಲ. ಅವರ ವರದಿ ಮಂಡನೆ ಮಾಡುವುದಕ್ಕೂ ಕೊಟ್ಟಿಲ್ಲ ಎಂದು ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೇವಾಲಯಕ್ಕೆ ನುಗ್ಗಿ ಕಾಳಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು