Bengaluru CityDistrictsKarnatakaLatestMain Post

ಸಂಸದೆ ಸುಮಲತಾ ಬಿಜೆಪಿಗೆ ಬಂದ್ರೆ ಸ್ವಾಗತ ಮಾಡ್ತೀನಿ: ನಾರಾಯಣಗೌಡ

Advertisements

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇನೆ ಅಂತ ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಮಲತಾ ಅವರು ಪಕ್ಷಕ್ಕೆ ಬರುವುದಾದರೆ ನಾವು ಸ್ವಾಗತ ಮಾಡುತ್ತೇವೆ. ಸುಮಲತಾ ಅವರು ಪಕ್ಷಕ್ಕೆ ಬರುವುದಾಗಿ ತಿಳಿಸಿದ್ದಾರೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಈಗ ಬರುವುದಕ್ಕೆ ಆಗುತ್ತಿಲ್ಲ ಅಂತ ಹೇಳಿದ್ದಾರೆ. ನೋಡೋಣ ಮುಂದೆ ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂದ ತಿಳಿಸಿದರು. ಇದನ್ನೂ ಓದಿ: ಶೀಘ್ರವೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ನಿಲ್ಲಿಸಲಾಗುತ್ತದೆ: ಅಜಿತ್ ಪವಾರ್

sumalatha ambarish

ಇದೇ ವೇಳೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ 3ನೇ ಅಭ್ಯರ್ಥಿಯೂ ಗೆಲ್ಲಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿ ಹಾಕಿದೆ. ಅವರು ಗೆಲ್ಲುವುದಿಲ್ಲ. ನಮಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳು ಇವೆ. ಎರಡನೇ ಪ್ರಾಶಸ್ತ್ಯದ ಮತದಲ್ಲಿ ನಾವು ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಭಾಗದಲ್ಲಿ ಮತ್ತಷ್ಟು ಜನ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು 17 ಜನ ಈಗ ಬಂದಿದ್ದೇವೆ. ಅದು ಮುಂದೆ ಪ್ಲಸ್ ಪ್ಲಸ್ ಆಗುತ್ತದೆ. ಯಾರು, ಯಾರು ಬರುತ್ತಾರೆ ಅಂತ ಈಗ ಹೇಳುವುದಿಲ್ಲ. ಈಗ ಹೇಳಿದರೆ ಅವರನ್ನು ಕೂಡಿ ಹಾಕುತ್ತಾರೆ. ಈಗಾಗಲೇ 4-5 ಜನರ ಹೆಸರು ನೀವೇ ಹಾಕಿದ್ದೀರಾ. ಇನ್ನು ಯಾರು ಯಾರು ಬರ್ತಾರೆ ಅಂತ ಮುಂದೆ ಗೊತ್ತಾಗುತ್ತದೆ ಅಂದರು. ಇದನ್ನೂ ಓದಿ: ಸತೇಂದ್ರ ಜೈನ್ ಬಳಿಕ‌ ಮನೀಷ್ ಸಿಸೋಡಿಯ ಬಂಧನಕ್ಕೆ ತಯಾರಿ : ಮೋದಿ ವಿರುದ್ಧ ಕೇಜ್ರಿವಾಲ್‌ ಕಿಡಿ

ಮಂಡ್ಯದಲ್ಲಿ ಕೇಂದ್ರ ನಾಯಕರ ಸಮಾವೇಶ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಜಿಲ್ಲೆಯಲ್ಲಿ ಅನೇಕರು ಬಿಜೆಪಿ ಸೇರ್ಪಡೆಗೆ ಆಸಕ್ತಿ ತೋರಿಸಿದ್ದಾರೆ. ಆದರೆ ಯಾರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿ ಸೇರಿಸಿಕೊಳ್ಳುತ್ತೇವೆ. ಸದ್ಯ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಮಾವೇಶ ಈಗ ಮಾಡುವುದಿಲ್ಲ ಅಂತ ತಿಳಿಸಿದರು. ಇನ್ನು ಮಂಡ್ಯದಲ್ಲಿ ಈ ಬಾರಿ ನಾವು 4 ಸ್ಥಾನ ಗೆಲ್ಲುತ್ತೇವೆ. ಹೇಗೆ ಗೆಲ್ಲುತ್ತೇವೆ ಅಂತ ನಾನು ಹೇಳುವುದಿಲ್ಲ. ಆದರೆ 4 ಸ್ಥಾನ ಬಿಜೆಪಿ ಗೆಲ್ಲುತ್ತದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published.

Back to top button