ಚಾಮರಾಜನಗರ: ಜಾತಿ ವ್ಯವಸ್ಥೆ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ಬಿಜೆಪಿ, ಕಾಂಗ್ರೆಸ್, ಜನತಾದಳ ಅಸ್ತಿತ್ವದಲ್ಲಿರುತ್ತವೆ. ಜಾತಿ ವ್ಯವಸ್ಥೆ ಅಸಮಾನತೆ ಯಾವತ್ತು ಕೊನೆಗೊಳ್ಳುತ್ತದೋ ಆ ದಿನ ಬಸವಣ್ಣನ ಪಕ್ಷವಾದ ಬಹುಜನ ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬರುತ್ತದೆ ಎಂದು ಶಿಕ್ಷಣ ಸಚಿವ ಎನ್ ಮಹೇಶ್ ಮೈತ್ರಿ ಪಕ್ಷಗಳ ವಿರುದ್ಧವೇ ಟೀಕಾ ಪ್ರಹಾರ ನಡೆಸಿದ್ದಾರೆ.
ಬಿಎಸ್ಪಿ ನಡಿಗೆ ಪಾರ್ಲಿಮೆಂಟ್ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೆಚ್ಚು ಕಾಲ ನಮ್ಮ ದೇಶವನ್ನು ಆಳ್ವಿಕೆ ಮಾಡಿದೆ. ದೇಶದ ನೂರು ಕೋಟಿ ಜನರನ್ನು ಸಾಮಾಜಿಕ ಆರ್ಥಿಕ ಸಂಕಷ್ಟದಿಂದ ಬಿಡುಗಡೆ ಮಾಡುವಂತಹ ಧ್ಯೇಯ ಕಾಂಗ್ರೆಸ್ಸಿಗೆ ಇದ್ದಿದ್ದರೆ ಇಷ್ಟೊತ್ತಿಗೆ ಭಾರತದಲ್ಲಿ ಎಲ್ಲರೂ ಸಮಾನತೆಯಿಂದ ಇರುತ್ತಿದ್ದರು ಎಂದು ಹೇಳಿದರು. ಇದನ್ನು ಓದಿ: ನಾವು ಮನಸ್ಸು ಮಾಡಿದ್ರೆ ಅವನನ್ನು ಕಿತ್ತುಹಾಕ್ತೀವಿ: ಎನ್.ಮಹೇಶ್‍ಗೆ ಪುಟ್ಟರಂಗಶೆಟ್ಟಿ ಎಚ್ಚರಿಕೆ
70-80 ವರ್ಷಗಳಿಂದ ಸಂಘ ಪರಿವಾರದವರು ಚಳುವಳಿ ಮಾಡಿಕೊಂಡು ಭಾರತೀಯ ಜನತಾ ಪಾರ್ಟಿ ಸೃಷ್ಟಿಯಾಗಿದೆ. ಇವರು ಕೂಡಾ ಅನೇಕ ರಾಜ್ಯಗಳಲ್ಲಿ ರಾಷ್ಟ್ರಗಳಲ್ಲಿ ಆಳ್ವಿಕೆ ಮಾಡಿದ್ದಾರೆ. ಆದರೆ ಸಾಮಾಜಿಕ ಅಸಮಾನತೆ ಹೋಗಿದ್ಯಾ ಎಂದು ಪ್ರಶ್ನಿಸಿದರು.
ಸಣ್ಣ ಪುಟ್ಟ ಪಕ್ಷಗಳಾದ ಜನತಾದಳ, ಸಮಾಜವಾದಿ ಪಕ್ಷ ಇವುಗಳಿಂದಲೂ ಸಾಮಾಜಿಕ ಆರ್ಥಿಕವಾಗಿ ಸಮಾನತೆ ತಂದುಕೊಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಬಹುಜನ ಸಮಾಜ ಪಕ್ಷ ಹುಟ್ಟಿಕೊಂಡಿದೆ. ಇಲ್ಲದಿದ್ದರೆ ಬಹುಜನ ಸಮಾಜ ಪಕ್ಷ ಹುಟ್ಟುವ ಅವಶ್ಯವೇ ಇರಲಿಲ್ಲ. ಬಿಎಸ್ಪಿ ಕೇವಲ ದಲಿತರ ಪಕ್ಷವಲ್ಲ, ಎಲ್ಲ ವರ್ಗದವರನ್ನು ಒಳಗೊಂಡ ಪಕ್ಷ ಎಂದು ಸಮರ್ಥಿಸಿಕೊಂಡರು. ಇದನ್ನು ಓದಿ: ಕಾಂಗ್ರೆಸ್ ಗಿಡ ಅಪಾಯಕಾರಿಯಂತ ಕಿತ್ತು ಹಾಕಿದ್ದೀವಿ ಅಂದ್ರು ಸಚಿವ ಎನ್.ಮಹೇಶ್: ವಿಡಿಯೋ ನೋಡಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv