ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕೊನೆಕ್ಷಣದಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಆರೋಪ ವ್ಯಕ್ತಪಡಿಸಿ ವೈದ್ಯರ ವಿರುದ್ಧ ಅಭಿಮಾನಿಗಳು ದೂರು ದಾಖಲಿಸಿರುವ ಬೆನ್ನಲ್ಲೇ ಡಾ. ರಮಣರಾವ್ ಅವರ ಕ್ಲಿನಿಕ್‌ಗೆ ಸಚಿವ ಮುನಿರತ್ನ ಶನಿವಾರ ಭೇಟಿ ನೀಡಿದ್ದಾರೆ.
ಸದಾಶಿವನಗರದಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿದ ಸಚಿವರು, ವೈದ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸೂಟ್ಕೇಸ್ ತೆಗೆದು ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ!
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ಈ ಕ್ಲಿನಿಕ್‌ಗೆ ನಿರಂತರವಾಗಿ ಬರ್ತಾ ಇದ್ದೇನೆ. ವೈದ್ಯರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ಅವರ ಜೊತೆ ಕೂತು ಮಾತನಾಡಿದ್ದೇನೆ. ಕ್ಲಿನಿಕ್‌ನ ಮುಂದೆ ನಡೆಯುತ್ತಿರುವ ಧರಣಿ ವಿಚಾರ ನನ್ನ ಗಮನಕ್ಕೆ ಬಂದಿದೆ. ವೈದ್ಯರ ಮೇಲೆ ಅನುಮಾನ ಪಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದ
ಡಾ. ರಮಣರಾವ್ ಅವರು 35 ವರ್ಷಗಳಿಂದ ರಾಜಕುಮಾರ್ ಕುಟುಂಬದವರೊಂದಿಗೆ ಇದ್ದಾರೆ. ರಾಜ್ ಕುಟುಂಬದಲ್ಲಿ ಅವರು ಒಬ್ಬರಾಗಿದ್ದಾರೆ. ಇವರ ಮೇಲೆ ಅನುಮಾನ ಬೇಡ. ಅಭಿಮಾನಿಗಳು ದುಃಖ ತಡೆಯಲಾರದೇ ಅಭಿಮಾನದಿಂದ ದೂರು ದಾಖಲಿಸಿರಬಹುದು. ಇವರ ಮೇಲೆ ಅನುಮಾನ ಬೇಡ. ತುಂಬು ಹೃದಯದ ಅಭಿಮಾನ ಕೆಲವೊಮ್ಮೆ ಬೇಸರವಾಗುತ್ತದೆ ಎಂದಿದ್ದಾರೆ.