ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗಾದ ಸೋಲಿನ ಬಗ್ಗೆ ಸಚಿವ ಕೆ.ಹೆಚ್.ಮುನಿಯಪ್ಪ(K H Muniyappa) ಸಿಎಂ ಇದ್ದ ವೇದಿಕೆಯಲ್ಲೇ ಪ್ರಸ್ತಾಪ ಮಾಡಿದರು.
ವಿಧಾನಸೌಧದ ಆವರಣದಲ್ಲಿ ನಡೆದ ಬಾಬು ಜಗಜೀವನ್ ರಾಮ್(Babu Jagajeevan Ram) ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಮುನಿಯಪ್ಪ ಭಾಷಣ ಮಾಡಿ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಮಾಡಿಯೇ ಮಾಡ್ತೀವಿ, ಯಾರಿಗೂ ಅನ್ಯಾಯ ಮಾಡಲ್ಲ: ಸಿದ್ದರಾಮಯ್ಯ
ಬಾಬು ಜಗಜೀವನ್ ರಾಂರಂತೆ ನಾನು 8 ಬಾರಿ ಸಂಸದನಾಗಿ ಗೆಲ್ಲುವ ಅವಕಾಶ ಇತ್ತು. ಇನ್ನೊಂದು ಬಾರಿ ಗೆದ್ದಿದ್ದರೆ ನಾನು ಅವರ ಸಾಲಿನಲ್ಲಿ ಸೇರುತ್ತಿದ್ದೆ, ಆದರೆ ಸಾಧ್ಯ ಆಗಲಿಲ್ಲ. ನಮ್ಮವರೇ ನಮಗೆ ತೊಂದರೆ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’ ಪ್ರಶಸ್ತಿ ಪ್ರದಾನ
ನನಗೆ ಬಹಳ ನೋವಿದೆ. ನನಗೆ ಅನ್ಯಾಯ ಮಾಡಿದ್ದಕ್ಕೆ ದೇವರು ಅವರಿಗೂ ತೋರಿಸಿದ. ಅವರೇ ಅನುಭವಿಸಿದರು ಎಂದು ಪರೋಕ್ಷವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಅಸಮಾಧಾನ ಹೊರಹಾಕಿದರು.