ಕೋಲಾರ: ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ನಾಗಿಣಿ ಡ್ಯಾನ್ಸ್, ಬಾಯಲ್ಲಿ ನಿಂಬೆ ಹಣ್ಣು ಇಟ್ಟು ಕೊಂಡು ಹೆಜ್ಜೆ ಹಾಕಿ ಸುದ್ದಿಯಾಗಿದ್ದರು. ಕೋಲಾರ ಜಿಲ್ಲೆಯಲ್ಲಿ ಕತ್ತಿ ವರಸೆ ನೃತ್ಯ ಮಾಡುವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.
ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದಲ್ಲಿ ಇಂದು ಕುರುಬ ಸಮುದಾಯ ದೊಡ್ಡ ದ್ಯಾವರು ಉತ್ಸವವನ್ನು ಆಯೋಜಿಸಿತ್ತು. ಈ ಉತ್ಸವದಲ್ಲಿ ಸಚಿವ ಎಂಟಿಬಿ ನಾಗರಾಜ್ ಭಾಗಿಯಾಗಿದ್ದರು. ಈ ವೇಳೆ ಸಚಿವರು ಕತ್ತಿ ಹಿಡಿದು ನೃತ್ಯ ಮಾಡಿ, ಎಲ್ಲರನ್ನೂ ರಂಜಿಸಿ ಹುಬ್ಬೇರುವಂತೆ ಮಾಡಿದ್ದಾರೆ.
Advertisement
Advertisement
ದೊಡ್ಡ ದ್ಯಾವರ ಉತ್ಸವವು 5 ವರ್ಷಕ್ಕೊಮ್ಮೆ ನಡೆಯುತ್ತದೆ. ಸಚಿವರ ಡ್ಯಾನ್ಸ್ ನೋಡಿದ ಜನರ ಕೂಡ ಫುಲ್ ಜೋಶ್‍ನಲ್ಲಿ ಕುಣಿದಿದರು. ಎಂಟಿಬಿ ನಾಗರಾಜ್ ಅವರು ಕತ್ತಿ ಹಿಡಿದು ಕಲಾತಂಡದ ಜೊತೆಗೆ ಹೆಜ್ಜೆ ಹಾಕುವ ಮೂಲಕ ಸಮುದಾಯದ ಜನರಿಗೆ ಸ್ಫೂರ್ತಿ ತುಂಬಿದರು.
Advertisement
ಸಚಿವರು ಇತ್ತೀಚೆಗೆ ನಾಗಿಣಿ ಡ್ಯಾನ್ಸ್ ಮಾಡಿದ್ದರು. ಅಷ್ಟೇ ಅಲ್ಲದೆ ಮೊನ್ನೆಯಷ್ಟೇ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ತಮಟೆ ಸದ್ದಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಡ್ಯಾನ್ಸ್ ಮಾಡುತ್ತಿದ್ದಾಗ ತಮ್ಮ ಫೇವರಿಟ್ 2 ಎಟಿನ ತಾಳ ಹಾಕುವಂತೆ ತಮಟೆ ಬಾರಿಸುವವರಿಗೆ ಹೇಳಿದ್ದರು. ಬಳಿಕ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಯುವಕರನ್ನು ನಾಚಿಸುವಂತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.