ಚಿಕ್ಕಬಳ್ಳಾಪುರ: ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಸ್ವತಃ ಜೆಡಿಎಸ್ ಪಕ್ಷದಿಂದ ಸಚಿವರಾಗಿರುವ ತೋಟಗಾರಿಕಾ ಇಲಾಖಾ ಸಚಿವ ಎಂ ಸಿ ಮನಗೂಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನವೀಕೃತಗೊಂಡ ನೆಹರು ನಿಲಯ ಉದ್ಘಾಟನೆ ಮಾಡಿ ರಾಜ್ಯದ ಮಟ್ಟದ ತೋಟಗಾರಿಕಾ ಇಲಾಖಾಧಿಕಾರಿಗೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತೋಟಗಾರಿಕಾ ಇಲಾಖಾ ಒಂದು ಹೃದಯವಿದ್ದಂತೆ, ಹೃದಯವನ್ನೇ ಕಸಿದುಕೊಂಡರೇ ಹೇಗೆ ಎಂಬ ಪ್ರಶ್ನೆ ಉದ್ಭವ ಮಾಡಿದೆ ಎಂದರು.
Advertisement
Advertisement
ರಾಜ್ಯ ಸರ್ಕಾರದಿಂದ ನೂತನವಾಗಿ ಅನುಷ್ಠಾನಗೊಂಡಿರುವ ಅಂತಗಂಗೆ ನಿಗಮ ಮಂಡಳಿಗೆ, ರೇಷ್ಮೆ, ಕೃಷಿ, ಹಾಗೂ ತೋಟಗಾರಿಕಾ ಇಲಾಖೆಯ ಹಲವು ಯೋಜನೆಗಳನ್ನ ಸೇರ್ಪಡೆ ಮಾಡಿ ನಿಗಮಕ್ಕೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ. ಹೀಗಾಗಿ ತೋಟಗಾರಿಕಾ ಇಲಾಖೆಯ ಪ್ರಮುಖವಾದ ಹನಿ ನೀರಾವರಿ ಯೋಜನೆಯನ್ನ ಈ ಅಂತರಗಂಗೆ ಯೋಜನೆ ಮೂಲಕ ರೈತರಿಗೆ ಕೊಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಈ ಸರ್ಕಾರದ ಕ್ರಮ ಸರಿ ಇಲ್ಲ. ಯಾವುದೇ ಕಾರಣಕ್ಕೂ ಅಂತರಗಂಗೆ ನಿಗಮ ಮಂಡಳಿಗೆ ತಮ್ಮ ಇಲಾಖೆ ಯೋಜನೆಗಳನ್ನ ಸೇರಿಸಲು ಬಿಡುವುದಿಲ್ಲ ಎಂದು ಸ್ವತಃ ಸರ್ಕಾರದ ವಿರುದ್ದವೇ ಸಚಿವರು ಮಾತನಾಡಿದ್ದಾರೆ.
Advertisement
ಸರ್ಕಾರದ ಕ್ರಮಕ್ಕೆ ಸಹಾಯಕ ತೋಟಗಾರಿಕಾ ಇಲಾಖಾಧಿಕಾರಿಗಳ ಸಂಘ ಸಹ ವಿರೋಧ ವ್ಯಕ್ತಪಡಿಸಿದ್ದು, ನಂದಿಗಿರಿಧಾಮದಲ್ಲಿ ಸಚಿವರನ್ನ ಭೇಟಿ ಮಾಡಿದ ಹಿರಿಯ ಅಧಿಕಾರಿಗಳ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸದಂತೆ ಮನವಿಪತ್ರ ಸಲ್ಲಿಸಿದರು.