ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರಿಗೆ ತಲೆ ಕೆಟ್ಟಿದೆ. ಅರ್ಥವಿಲ್ಲದ ಹೇಳಿಕೆ ನೀಡುತ್ತಾ ಜಾತಿಗೆ ಒರೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಲೆ ಕೆಟ್ಟಿದೆ, ಅವರದ್ದು ಚಿಲ್ಲರೆ ಮನಸ್ಥಿತಿ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಗುಡುಗಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಎಂ.ಬಿ ಪಾಟೀಲ್ ಅವರ ಹೆಗಲ ಮೇಲೆ ಸಿದ್ದರಾಮಯ್ಯ (Siddaramaiah) ಇಟ್ಟು ಹೊಡೆದ ಗುಂಡು ಡಿಕೆ ಶಿವಕುಮಾರ್‌ಗೆ ತಗುಲಿಲ್ವಾ?ʼ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಜನರನ್ನು ಲೆಕ್ಕಿಸದೇ ಗುಂಡು ಹಾರಿಸಿದ ದುಷ್ಕರ್ಮಿಗಳು – ಸಹೋದರನನ್ನು ಕಾಪಾಡಲು ಹೋಗಿ ಸಹೋದರಿಯರಿಬ್ಬರು ಬಲಿ
Advertisement
Advertisement
ಪ್ರತಾಪ್ ಸಿಂಹ ಅವರಿಗೆ ತಲೆ ಕೆಟ್ಟಿದೆ, ಜಾತಿಗೆ ಒರೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದು ಅವರ ಚಿಲ್ಲರೆ ಮನಸ್ಥಿತಿ ತೋರಿಸುತ್ತಿದೆ. ಸಿದ್ದರಾಮಯ್ಯ ಅವ್ರು ನನ್ನ ಹೆಗಲ ಮೇಲೆ ಗನ್ ಇಟ್ಟು ಯಾರಿಗೂ ಗುಂಡು ಹೊಡೆಯುವ ಕೆಲಸ ಮಾಡಿಲ್ಲ. ನಾನೂ ಕೂಡ ಅದಕ್ಕೆ ಆಸ್ಪದ ಕೊಟ್ಟಿಲ್ಲ. ಹೊಡೆಯೋದಿದ್ದರೆ ನಾವೇ ಡೈರೆಕ್ಟ್ ಆಗಿ ಹೊಡಿಯುತ್ತೇವೆ. ನನ್ನ ಡಿ.ಕೆ ಶಿವಕುಮಾರ್ ಸಂಬಂಧ ಉತ್ತಮವಾಗಿದೆ. ಒಂದು ವಿಚಾರ ಬಂದಾಗ ಅಭಿಪ್ರಾಯ, ಭಿನ್ನಾಭಿಪ್ರಾಯ ಇರಬಹುದು. ಅದು ಪ್ರಜಾಪ್ರಭುತ್ವದಲ್ಲಿ ಸಹಜ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಎಳಸು ಅಂದ್ರೆ ಬೇಸರವಿಲ್ಲ, ಚೈಲ್ಡ್ ಆಗಿಯೇ ಪ್ರಶ್ನೆ ಕೇಳ್ತೀನಿ – ಪ್ರತಾಪ್ ಸಿಂಹ
Advertisement
Advertisement
ಇದೇ ವೇಳೆ BJP ಕೇಂದ್ರ ಸರ್ಕಾರ ಅಕ್ಕಿ ತಡೆಹಿಡಿದ ವಿಚಾರವಾಗಿ ಮಾತನಾಡಿ, ನಾವು ಕೇಂದ್ರಕ್ಕೆ ಉಚಿತವಾಗಿ ಅಕ್ಕಿ ಕೊಡಿ ಅಂತಾ ಹೇಳಿಲ್ಲ, ಹಣ ಕೊಡುತ್ತೇವೆ. ಮೊದಲು FCI ಅಧಿಕಾರಿಗಳು ಅಕ್ಕಿ ಕೊಡೋದಕ್ಕೆ ಒಪ್ಪಿದ್ದರು. ಆಮೇಲೆ ಕೇಂದ್ರ ಸರ್ಕಾರ ತಡೆಹಿಡಿದಿದೆ. ಇದು ಬಡವರ ವಿರುದ್ಧವಾಗಿ ಬಿಜೆಪಿ ಮಾಡುತ್ತಿರುವ ಸೇಡಿನ ರಾಜಕರಾಣವಾಗಿದೆ. ನಮ್ಮ ರಾಜ್ಯದ ಬಿಜೆಪಿ ನಾಯಕರು ರಾಜಕೀಯ ಮಾಡೋದು ಬಿಟ್ಟು, ಒಗ್ಗಟ್ಟಾಗಿ ಅಕ್ಕಿ ಕೊಡುವಂತೆ ಮನವಿ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಉರಿಯುವ ಬಿಸಿಲಿಗೆ 54 ಮಂದಿ ಬಲಿ, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ಪ್ರತಾಪ್ ಸಿಂಹ ಹೇಳಿದ್ದೇನು?
ಎರಡು ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರತಾಪ್ ಸಿಂಹ, ಎಂ.ಬಿ ಪಾಟೀಲ್ ಅವರ ಹೆಗಲ ಮೇಲೆ ಸಿದ್ದರಾಮಯ್ಯ ಇಟ್ಟು ಹೊಡೆದ ಗುಂಡು ಡಿಕೆ ಶಿವಕುಮಾರ್‌ಗೆ ತಗುಲಿಲ್ವಾ? ಯಡಿಯೂರಪ್ಪ ಜೈಲಿಗೆ ಹೋದರು ಎಂದು ಹಾದಿ ಬೀದಿಯಲ್ಲಿ ಎಂ.ಬಿ ಪಾಟೀಲ್, ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಏನೂ ಮಾಡಿದೆ? ನನ್ನ ಹೆಗಲ ಮೇಲೆ ಯಾರು ಬಂದೂಕು ಇಟ್ಟಿಲ್ಲ. ಎಂ.ಬಿ ಪಾಟೀಲ್ ಮೇಲೆ ಯಾಕೆ ಸಿದ್ದರಾಮಯ್ಯ ಬಂದೂಕು ಇಟ್ಟು ಕೊಂಡಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ಕಾಂಗ್ರೆಸ್ ನವರು. ಅಂದಿನ ರಾಜ್ಯಪಾಲ ಭಾರದ್ವಾಜ್ ಹೆಗಲ ಮೇಲೆ ಬಂದೂಕು ಇಟ್ಟು ಯಡಿಯೂರಪ್ಪ ಅವರ ಎದೆಗೆ ಹಾರಿಸಿದರು. ಭಾರದ್ವಾಜ್ ಅವರನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಯಡಿಯೂರಪ್ಪ ವಿಚಾರದಲ್ಲಿ ಆಟ ಆಡಿದ್ದು ಮರೆತು ಹೋಯ್ತಾ? ಎಂದು ಪ್ರಶ್ನಿಸಿದ್ದರು.