ಬೆಂಗಳೂರು: ವಿಧಾನಸಭಾ ಚುನಾವಣಾ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಆಪ್ತನಿಗೆ ಪೊಲೀಸ್ ಇಲಾಖೆ ದೊಡ್ಡ ಶಾಕ್ ಕೊಟ್ಟಿದೆ.
ಎಂ.ಬಿ ಪಾಟೀಲ್ ಆಪ್ತ ಮಹಾದೇವ ಭೈರಗೊಂಡ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೇ ವಿಜಯಪುರ ಜಿಲ್ಲೆಯ ಸುತ್ತಮುತ್ತ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳು ದಂಧೆ ನಡೆಸ್ತಿದ್ದನು. ಇಂದು ಏಕಾಏಕಿ ದಾಳಿ ನಡೆಸಿದ ಐಜಿಪಿ ಅಲೋಕ್‍ಕುಮಾರ್ ನೇತೃತ್ವದ ತಂಡ ಈ ಅಕ್ರಮ ದಂಧೆ ಬಯಲಿಗೆಳೆದಿದ್ದಾರೆ.
Advertisement
Advertisement
ಅಲ್ಲದೇ ಲಕ್ಷಾಂತರ ಬೆಲೆಬಾಳುವ 20ಕ್ಕೂ ಹೆಚ್ಚು ಮರಳಿನ ಲಾರಿಗಳನ್ನ ವಶಕ್ಕೆ ಪಡೆದು ಕಿಂಗ್‍ಪಿನ್ ಮಹಾದೇವ ವಿರುದ್ಧ ರೌಡಿಶೀಟರ್ ತೆರೆದು ಚಡಚಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
Advertisement
ವಿಷಯ ತಿಳಿಯುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಮಹಾದೇವನನ್ನು ಬೆನ್ನಟ್ಟಿದ್ದ ಪೊಲೀಸರು ಶಿರಡಿಯಲ್ಲಿ ಬಂಧಿಸಿದ್ದಾರೆ. ಆರೋಪಿ ಮಹಾದೇವ ಕಾಂಗ್ರೆಸ್‍ನ ಘಟಾನುಘಟಿ ಸಚಿವರಾದ ವಿನಯ್ ಕುಲಕುರ್ಣಿ ಮತ್ತು ಎಂಬಿಪಾಟೀಲ್ ಅವರೊಂದಿಗೆ ಗುರತಿಸಿಕೊಂಡಿದ್ದ ಎನ್ನಲಾಗಿದೆ. ಇದನ್ನೇ ದಾಳವಾಗಿಸಿಕೊಂಡು ಪಾರಾಗಲು ಯತ್ನಿಸಿದ್ದ ಎಂಬುದಾಗಿ ತಿಳಿದುಬಂದಿದೆ.