ಬೆಂಗಳೂರು: ಪ್ರಜ್ವಲ್ ಕೇಸನ್ನ ಸಿಬಿಐಗೆ ಕೊಡಿ ಅಂತಾ ಬಿಜೆಪಿ-ಜೆಡಿಎಸ್ ಅವರು ಕೇಳ್ತಿರೋದಾ ಕ್ಲೀನ್ ಚಿಟ್ ಕೊಡೋಕಾ ಎಂದು ಸಚಿವ ಎಂ.ಬಿ.ಪಾಟೀಲ್ (M.B.Patil) ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿಯಿಂದ ಸಿಬಿಐಗೆ ಕೊಡಬೇಕು ಅಂತಿದ್ದಾರೆ. ಸಿಬಿಐಗೆ (CBI) ಕೊಡೋದು ಕ್ಲೀನ್ ಚಿಟ್ ಕೊಡೋದಕ್ಕಾ? ಬಿಜೆಪಿ ಅದನ್ನ ವಾಷಿಂಗ್ ಮಿಷನ್‌ಗೆ ಹಾಕೋಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಯುತ್ತೆ: ಬಿಎಸ್‌ವೈ
ಈಗಾಗಲೇ ಪ್ರಜ್ವಲ್ ಕೇಸ್‌ನಲ್ಲಿ SIT ತನಿಖೆ ಆಗುತ್ತಿದೆ. ಯಾರೇ ಇದ್ದರೂ, ಎಷ್ಟೇ ದೊಡ್ಡವರು ಇದ್ದರೂ ಅವರ ವಿರುದ್ಧ ತನಿಖೆ ಆಗುತ್ತದೆ. ನಾನು ಮಾಜಿ ಗೃಹ ಸಚಿವ ಆಗಿದ್ದವನು. ಹೀಗಾಗಿ ತನಿಖೆ ಹಂತದಲ್ಲಿ ನಾನು ಮಾತಾಡೋದಿಲ್ಲ. ಕಾನೂನು ಪ್ರಕಾರ ತನಿಖೆ ಆಗುತ್ತಿದೆ. ತನಿಖೆಯಿಂದ ಎಲ್ಲಾ ಹೊರಗೆ ಬರಲಿದೆ ಎಂದರು.
ಬಿಜೆಪಿಯವರು ಹಿಂದೆ ಸಿಬಿಐ ಕಾಂಗ್ರೆಸ್ ಇನ್ವೆಸ್ಟಿಗೇಷನ್ ಅಂತಿದ್ದರು. ಈಗ ಸಿಬಿಐಗೆ ಕೊಡಬೇಕು ಅಂತಾರೆ. SIT ತನಿಖೆ ಆಗುತ್ತಿದೆ. ಎಲ್ಲಾ ಸತ್ಯ ಹೊರಗೆ ಬರಲಿದೆ. ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಬಂದು ಶರಣಾಗಬೇಕು. ಕಾನೂನಿಗೆ ಬೆಲೆ ಕೊಡೋದಾದ್ರೆ ಬಂದು ಶರಣಾಗಬೇಕು.ಇಲ್ಲದೆ ಹೋದರೆ ಕೇಂದ್ರ ಸರ್ಕಾರ ಈ ಕೇಸನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಕರೆ ತರಬೇಕು ಎಂದು ಹೇಳಿದರು. ಇದನ್ನೂ ಓದಿ: ಇಂದು ನ್ಯಾಯಾಧೀಶರ ಮುಂದೆ ದೇವರಾಜೇಗೌಡ
ಬರ ಪರಿಹಾರ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ನಾವು ಕೇಳಿದಷ್ಟು ಬರ ಪರಿಹಾರ ಕೊಡುವವರೆಗೂ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡಲಾಗುವುದು. ಕೇಂದ್ರದಿಂದ ಬಂದ ಬರ ಪರಿಹಾರದ ಹಣ ರೈತರಿಗೆ ಹಂಚಿಕೆ ಮಾಡುತ್ತಿದ್ದೇವೆ. ಪರಿಹಾರ ಹಾಕೋದು ಆಗುತ್ತೆ. ಆದರೆ ನಾವು ಬರ ಪರಿಹಾರ ಕೇಳಿದ್ದೆಷ್ಟು ಅವರು ಕೊಟ್ಟಿದ್ದು ಎಷ್ಟು ಎಂದು ಪ್ರಶ್ನಿಸಿದರು.
NDRF, SDRF ನಿಯಮಗಳು ಬದಲಾವಣೆ ಆಗಬೇಕು. ನಾವು ಕೇಳಿದ್ದು 18 ಸಾವಿರ ಕೋಟಿ. ಅವರು ಕೊಟ್ಟಿದ್ದು 3,500 ಕೋಟಿ. ಈ ಹಣದಿಂದ ರೈತರಿಗೆ ಬೀಜ, ಗೊಬ್ಬರ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ನಾವು ಕೇಳಿದಷ್ಟು ಸಂಪೂರ್ಣ ಹಣ ಬಿಡುಗಡೆ ಆಗಬೇಕು. ಇಲ್ಲದೇ ಹೋದರೆ ನಾವು ಕೋರ್ಟ್‌ನಲ್ಲಿ ಹೋರಾಟ ಮಾಡ್ತೀವಿ. ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್‌ನಲ್ಲಿ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.