ಬೆಂಗಳೂರು: ಪರಮೇಶ್ವರ್ ವಿರುದ್ಧ ಇ.ಡಿಗೆ ಯಾವ ಕಾಂಗ್ರೆಸ್ ನಾಯಕರು ದಾಖಲೆ ಕೊಟ್ಟಿದ್ರು ಅಂತ ಪ್ರಹ್ಲಾದ್ ಜೋಶಿ (Pralhad Joshi) ಅವರು ಬಹಿರಂಗಪಡಿಸಲಿ ಎಂದು ಸಚಿವ ಎಂ.ಬಿ.ಪಾಟೀಲ್ (M.B.Patil) ಸವಾಲೆಸೆದಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಎಂ.ಬಿ.ಪಾಟೀಲ್, ಇ.ಡಿಗೆ ಪರಮೇಶ್ವರ್ ವಿರುದ್ಧ ಯಾರು ದಾಖಲೆ ಕೊಟ್ರು? ಪ್ರಹ್ಲಾದ್ ಜೋಶಿಯವರ ಬಳಿ ಮಾಹಿತಿ ಇದ್ರೆ ಹೇಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಯಾಕೆ ಕಾಂಗ್ರೆಸ್‌ನವ್ರು ಯಾರು ಅಂತ ಬಹಿರಂಗಪಡಿಸಲು ಜೋಶಿಯವರಿಗೆ ಧೈರ್ಯ ಇಲ್ವಾ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಇಡಿ ತನಿಖೆಗೆ ಸಂಪೂರ್ಣ ಸಹಕಾರ – ದಾಳಿ ಉದ್ದೇಶ ಗೊತ್ತಿಲ್ಲ, ನಾನೇನೂ ಮುಚ್ಚಿಟ್ಟಿಲ್ಲ ಅಂದ ಪರಂ
ಯಾರು ದಾಖಲೆ ಕೊಟ್ಟವರು ಅಂತ ಅವರಿಗೆ ಗೊತ್ತಿರುತ್ತೆ. ಸಂಪೂರ್ಣ ಮಾಹಿತಿ ಇರುತ್ತೆ. ಅವರ ಅಡಿಯಲ್ಲೇ ಇ.ಡಿ, ಐಟಿ ಎಲ್ಲ ಬರೋದು. ಮೋದಿ, ಪ್ರಹ್ಲಾದ್ ಜೋಶಿಯವರೇ ಇದನ್ನೆಲ್ಲ ಮಾಡಿಸ್ತಿದ್ದಾರೆ. ಹಾಗಾದ್ರೆ ಇ.ಡಿಯವ್ರು ಎಲ್ಲವನ್ನೂ ಪ್ರಹ್ಲಾದ್ ಜೋಶಿಯವರಿಗೆ ರಿಪೋರ್ಟ್ ಮಾಡ್ತಾರೆ ಅಂತ ಆಯ್ತಲ್ಲ ಎಂದು ವಾಗ್ದಾಳಿ ನಡೆಸಿದರು.