– ಯಾರ ಮೇಲೂ ಆರೋಪ ಮಾಡಲ್ಲ ಎಂದ ಹೆಚ್.ಕೆ ಪಾಟೀಲ್
ಬೆಂಗಳೂರು: ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಚಿವರ ಭಾಗಿ ಆರೋಪ ವಿಚಾರಕ್ಕೆ ಸಚಿವ ಹೆಚ್.ಕೆ.ಪಾಟೀಲ್ (H.K.Patil) ಪ್ರತಿಕ್ರಿಯಿಸಿದ್ದಾರೆ.
ಮೊದಲು ಇಬ್ಬರು ಸಚಿವರು ಅಂತಾ ಹೇಳಿದ್ರು. ಈಗ ಮೂವರು ಸಚಿವರು ಅಂತಿದ್ದಾರೆ. ಏನೇ ಇರಲಿ, ಕಾನೂನು ಪ್ರಕಾರ ಕ್ರಮ ಆಗಬೇಕು. ಸಿಬಿಐ ತನಿಖೆ ನಡೆಯುತ್ತಿದೆ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗಬೇಕು ಎಂದರು. ಇದನ್ನೂ ಓದಿ: ರನ್ಯಾ ರಾವ್‌ಗೆ KIADBಯಿಂದ ಜಮೀನು ಮಂಜೂರು ಮಾಡಿಲ್ಲ: ಸಿಇಓ ಸ್ಪಷ್ಟನೆ
ಇದೇ ವೇಳೆ, ಸಚಿವ ಎಂ.ಬಿ.ಪಾಟೀಲ್ (M.B.Patil) ಮಾತನಾಡಿ, ಯಾವ ಸಚಿವರು? ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ಬಂದಿದ್ದನ್ನ ನಾನು ಗಮನಿಸಿದ್ದೇನೆ ಎಂದು ತಿಳಿಸಿದರು.
ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ ಕೆಐಎಡಿಬಿಯಿಂದ ಭೂಮಿ ಹಂಚಿಕೆ ಪ್ರಕರಣ ಆರೋಪ ಕುರಿತು ಮಾತನಾಡಿ, ಕೆಐಎಡಿಬಿ ಭೂಮಿ ಹಂಚಿಕೆ ವಿಚಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದು. ಅವರ ಕಂಪನಿಗೆ ಶಿರಾದಲ್ಲಿ ಭೂಮಿ ಹಂಚಿಕೆ ಆಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ: ಶಾಸಕ ಭರತ್ ಶೆಟ್ಟಿ ಬಾಂಬ್
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್‌ಗೆ ರಾಜ್ಯದ ಪ್ರಭಾವಿ ನಾಯಕರ ಜೊತೆ ನಂಟಿದೆ ಎಂಬ ಆರೋಪ ಕೇಳಿಬಂದಿದೆ. ನಟಿ ಕೆಲ ಸಚಿವರಿಗೆ ಕರೆ ಮಾಡಿದ್ದಾಳೆ. ಆಕೆಯನ್ನು ಬಿಡಿಸಲು ಸಚಿವರು ಪ್ರಭಾವ ಬಳಸಿದ್ದಾರೆಂಬ ಆರೋಪ ವ್ಯಕ್ತವಾಗಿವೆ.