ಗೃಹಲಕ್ಷ್ಮಿಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ವಿಳಂಬ- ನಾಲ್ಕೈದು ದಿನದ ಬಳಿಕ ಆದೇಶವೆಂದ ಸಚಿವೆ

Public TV
2 Min Read
LAXMI HEBBALKAR 1

ಬೆಂಗಳೂರು: ಮನೆ ಯಜಮಾನಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಗೆ ಅರ್ಜಿ ಸಲ್ಲಿಕೆಯನ್ನು 4-5 ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ.

ಶುಕ್ರವಾರದಿಂದ ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಧ್ಯಾಹ್ನವಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ರು. ಆದರೆ ಕ್ಯಾಬಿನೆಟ್ ಸಭೆ (Cabinet Meeting) ನಂತರ ಶುಕ್ರವಾರ ಲಾಂಚ್ ಮಾಡಬೇಕಿದ್ದ ಗೃಹಲಕ್ಷ್ಮಿ ಯೋಜನೆ 4-5 ದಿನಗಳ ಕಾಲ ಮುಂದೂಡಿಕೆಗೆ ತೀರ್ಮಾನಿಸಲಾಗಿದೆ.

ಗೃಹಜ್ಯೋತಿ ಫಲಾನುಭವಿಗಳಿಗೆ ಹಿಂಬಾಕಿ ಕಟ್ಟಲು ಸೆಪ್ಟೆಂಬರ್ ವರೆಗೆ ಅವಕಾಶ ನೀಡಲಾಗಿದೆ. ಇ-ಗವರ್ನೆನ್ಸ್ ನವರು 2 ದಿನದಲ್ಲಿ ಅರ್ಜಿ ತುಂಬುವ ಆಪ್ ಸಿದ್ಧಪಡಿಸುತ್ತೇವೆ ಎಂದಿದ್ದರು. ಈಗ 4 ರಿಂದ 6 ದಿನ ಬೇಕು ಎಂದಿದ್ದಾರೆ. ಬಾಪೂಜಿ ಸೇವಾ ಕೇಂದ್ರದಲ್ಲೂ ಅರ್ಜಿ ಪಡೆಯುವ ವ್ಯವಸ್ಥೆ ಇರಲಿದೆ ಅವರಿಗೂ ಟ್ರೈನಿಂಗ್ ಕೊಡಬೇಕು. ಹಾಗಾಗಿ ಯೋಜನೆ ಜಾರಿಗೆ 4-5 ದಿನ ಬೇಕಾಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ರು.

ಸುದ್ದಿಗೋಷ್ಠಿಯಲ್ಲಿ ಸಚಿವೆ ಹೇಳಿದ್ದೇನು..?: ಶುಕ್ರವಾರ ಬೆಳಗ್ಗೆ 1:30 ಕ್ಕೆ ಶಕ್ತಿ ಭವನದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಯೋಜನೆಯ ವೆಬ್‍ಸೈಟ್ ಲಾಂಚ್ ಮಾಡಲಾಗುವುದು. ಸಾಂಕೇತಿಕವಾಗಿ ನಾಲ್ಕೈದು ಜನರಿಗೆ ನಾಳೆ ನೋಂದಣಿ ಮಾಡಲಿದ್ದೇವೆ. ಆಗಸ್ಟ್ 18 ಕ್ಕೆ ಬೆಳಗಾವಿಯಿಂದ ಚಾಲನೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಮನೆ ಯಜಮಾನಿಯ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಅರ್ಜಿದಾರರ ಬ್ಯಾಂಕ್ ಖಾತೆ ವಿವರ ಸಲ್ಲಿಸೋದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ಮೋದಿ, ಬಿಜೆಪಿ ನಾಯಕರು ಬಡವರಿಗೆ ಆಹಾರ ಧಾನ್ಯ ನಿರಾಕರಿಸುವಷ್ಟು ಕುರುಡರಾಗಬಹುದೇ?: ಸುರ್ಜೆವಾಲ ವಾಗ್ದಾಳಿ

lakshmi hebbalkar

ಅರ್ಜಿಗಳನ್ನು ಆನ್‍ಲೈನ್ ಮೂಲಕ ಅಥವಾ ಗ್ರಾಮ ಒನ್ (Grama One), ಬೆಂಗಳೂರು ಒನ್ (Bengaluru one), ಕರ್ನಾಟಕ ಒನ್ ಕೇಂದ್ರದಲ್ಲಿ ಸೇವಾಸಿಂಧು ಪೆÇೀರ್ಟಲ್‍ನ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್ (Adhar Card) ಸಲ್ಲಿಸಬೇಕು. 2,000 ರೂ. ಗಳನ್ನು ಡಿಬಿಟಿ ಮೂಲಕ ನೀಡಲಾಗುತ್ತೆ. ಅರ್ಜಿಗಳ ಸಲ್ಲಿಕೆಯೂ ಉಚಿತವಾಗಿರುತ್ತದೆ. ಅದಕ್ಕೆ ಯಾವುದೇ ಹಣ ಪಾವತಿಸಬೇಕಾಗಿಲ್ಲ. ಗೃಹಲಕ್ಷ್ಮಿ ಸಹಾಯವಾಣಿ ಆರಂಭಿಸಲಾಗುವುದು. ಯೋಜನೆಗೆ ಸಂಬಂಧಿಸಿದ ಮಾಹಿತಿಗಾಗಿ 1902 ಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದ್ದರು.

ನಾಡಕಚೇರಿಯಲ್ಲಿ ಸಲ್ಲಿಕೆಗೆ ಅವಕಾಶ ಇಲ್ಲ. ಮನೆ ಮನೆಗೂ ಕೆಲವರಿಗೆ ಅರ್ಜಿ ಸಲ್ಲಿಕೆಗೆ ತೆಗೆದುಕೊಳ್ಳುತ್ತೇವೆ. 1.28 ಕೋಟಿ ಕುಟುಂಬಕ್ಕೆ (78%) ಈ ಯೋಜನೆಯ ಲಾಭ ಸಿಗಲಿದೆ. ಬೆಳಗಾವಿಯಿಂದ ಯೋಜನೆಗೆ ಚಾಲನೆ ನೀಡಲಾಗುವುದು. ಪ್ರತಿ ತಿಂಗಳು ಯಾವ ದಿನಾಂಕದಲ್ಲಿ ಹಣ ಹಾಕೋದು ಅನ್ನೋದು ನಿರ್ಧಾರ ಮಾಡುತ್ತೇವೆ. ತೆರಿಗೆ ಕಟ್ಟೋರ ಬಗ್ಗೆ ನಾವು ಆಧಾರ್, ಬ್ಯಾಂಕ್ ಆಕೌಂಟ್ ಮೂಲಕ ಪರಿಶೀಲನೆ ಮಾಡ್ತೀವಿ. ಹೀಗಾಗಿ ಮನೆ ಯಜಮಾನಿಯ ಪತಿ ತೆರಿಗೆ ಪಾವತಿ ಮಾಡಿದರೆ ಗೊತ್ತಾಗುತ್ತೆ ಎಂದು ಹೇಳಿದ್ದರು.

Share This Article