– ಹಿಟ್ & ರನ್ ಕೇಸ್ ದಾಖಲು
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಾರು ಅಪಘಾತ ಪ್ರಕರಣದಲ್ಲಿ ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು ದಾಖಲಿಸಲಾಗಿದೆ. ಸರ್ಕಾರಿ ಕಾರು ಡ್ರೈವರ್, ಹಿಟ್ & ರನ್ ಕೇಸ್ ದಾಖಲಿಸಿದ್ದಾರೆ.
Advertisement
ಓವರ್‌ಟೇಕ್ ಮಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಆಯ್ತಾ ಎಂದು ಪ್ರಶ್ನೆ ಮೂಡಿದೆ. ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಿನ್ನೆ ಬೆಳಗ್ಗೆ 5 ಗಂಟೆಗೆ ಕಾರು ಅಪಘಾತ ಸಂಭವಿಸಿತ್ತು.
Advertisement
Advertisement
ದೂರಿನಲ್ಲಿ ಏನಿದೆ?
ನಾನು ಸಚಿವರ ಸರ್ಕಾರಿ ಕಾರು ಏಂ01 ಉಂ977 ಚಲಾಯಿಸುತ್ತಿದ್ದೆ. ಕಾರಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಸಚಿವರ ಅಂಗರಕ್ಷಕ ಈರಪ್ಪ ಹುಣಶಿಕಟ್ಟಿ ಇದ್ದರು. ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದೆವು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 48ರ ಮೇಲಿದ್ದೆವು. ನಮ್ಮ ಮುಂದೆ ಲೈನ್ 1 ರಲ್ಲಿ ಹೋಗುತ್ತಿದ್ದ ಕಂಟೇನರ್ ಟ್ರಕ್ ಚಾಲಕ ಯಾವುದೇ ಮುನ್ಸೂಚನೆ ಕೊಡದೇ ಎಡಬದಿಗೆ ಬಂದ. ಆಗ ಎಡಬದಿಗೆ ತೆಗೆದುಕೊಂಡರೂ ಟ್ರಕ್ ಚಾಲಕ ಕಾರಿನ ಬಲ ಬದಿಗೆ ತಾಗಿಸಿದ.
Advertisement
ಕಾರು ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ, ಗಂಭೀರ ಗಾಯಗಳಾಗಿವೆ. ಅಪಘಾತ ಮಾಡಿ ವಾಹನ ನಿಲ್ಲಿಸದೇ ಲಾರಿ ಡ್ರೈವರ್ ಹೋಗಿದ್ದಾನೆ ಎಂದು ದೂರು ದಾಖಲಿಸಲಾಗಿದೆ.
ಎಫ್‌ಐಆರ್‌ನಲ್ಲಿ ಎಲ್ಲಿಯೂ ನಾಯಿಗಳು ಅಡ್ಡ ಬಂದ ವಿಚಾರವನ್ನ ಡ್ರೈವರ್ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಕೇಸ್ ದಾಖಲಿಸಿ ಕಿತ್ತೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.