Karnataka

ಭಾರತದಲ್ಲಿ RSS ಇಲ್ಲದಿದ್ದರೆ ಪಾಕಿಸ್ತಾನದ ಸ್ವರೂಪವಾಗುತ್ತಿತ್ತು: ಈಶ್ವರಪ್ಪ

Published

on

Share this

ಶಿವಮೊಗ್ಗ: ಭಾರತದಲ್ಲಿ ಆರ್‌ಎಸ್‌ಎಸ್ ಇಲ್ಲದಿದ್ದರೆ ಪಾಕಿಸ್ತಾನದ ಸ್ವರೂಪ ಪಡೆದುಕೊಳ್ಳುತಿತ್ತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರ ಪರ ಮಾತನಾಡಿದ್ದಾರೆ. ಈಗ ಆರ್‌ಎಸ್‌ಎಸ್ ಸುದ್ದಿಗೆ ಬಂದಿದ್ದಾರೆ. ಭಾರತದಲ್ಲಿ ಆರ್‌ಎಸ್‌ಎಸ್ ಇಲ್ಲದಿದ್ದರೆ ಪಾಕಿಸ್ತಾನದ ಸ್ವರೂಪ ಪಡೆದುಕೊಳ್ಳುತಿತ್ತು. ಇಂದು ಎಲ್ಲ ಕ್ಷೇತ್ರಗಳಲ್ಲೂ ಆರ್‌ಎಸ್‌ಎಸ್ ಇದೆ. ನೀವು ಮುಸಲ್ಮಾನರ ಓಟಿಗಾಗಿ ಟೀಕೆ ಮಾಡಿದರೆ ಪರವಾಗಿಲ್ಲ. ಆದರೆ ಆರ್‌ಎಸ್‌ಎಸ್ ಅನ್ನು ಟೀಕೆ ಮಾಡಲೇಬೇಕೆಂದು ಟೀಕೆ ಮಾಡಿದರೆ, ಮುಂದೊಂದು ದಿನ ಕಾಂಗ್ರೆಸ್, ಜೆಡಿಎಸ್ ಅಡ್ರೆಸ್ ಇಲ್ಲದ ಹಾಗೆ ಹೋಗುತ್ತೀರಾ ಎಂದರು. ಇದನ್ನೂ ಓದಿ: ಯಾರೇ ತಪ್ಪು ಮಾಡಿದ್ರೂ ಐಟಿ ಅಧಿಕಾರಿಗಳು ಬಿಡಲ್ಲ: ಬಿಎಸ್‍ವೈ ಮೊದಲ ಪ್ರತಿಕ್ರಿಯೆ

ಮಹಾತ್ಮ ಗಾಂಧಿಯವರೇ ಆರ್‌ಎಸ್‌ಎಸ್ ಅನ್ನು ಹೊಗಳಿದ್ದರು. ಇಲ್ಲಿಯವರೆಗೆ ಆರ್‌ಎಸ್‌ಎಸ್ ಟೀಕೆ ಮಾಡಿದ್ದು ಸಾಕು. ಆರ್‍ಎಸ್‍ಎಸ್ ಬಳಿ ಕ್ಷಮೆ ಕೇಳುವುದು ಬೇಡ, ಆದರೆ ದೇಶದ ಜನರ ಬಳಿ ನೀವು ಈಗಲೇ ಕ್ಷಮೆ ಕೇಳಬೇಕು ಎಂದು ಸಚಿವ ಈಶ್ವರಪ್ಪ ಆಗ್ರಹಿಸಿದರು.

ದೇಶದಲ್ಲಿ ಆರ್‌ಎಸ್‌ಎಸ್ ಇಲ್ಲದಿದ್ದರೆ ಭಾರತ ಭಾರತವಾಗಿ ಉಳಿಯುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆರ್‌ಎಸ್‌ಎಸ್ ಹಿನ್ನೆಲೆಯುಳ್ಳವರು. ಆರ್‍ಎಸ್‍ಎಸ್ ನ ಸ್ವಯಂ ಸೇವಕರು ರಾಜ್ಯ, ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ

ರಾಜ್ಯ, ದೇಶದ ಅಭಿವೃದ್ಧಿಗೆ ಏನು ಮಾಡಬೇಕೆಂಬ ಸಂಸ್ಕಾರವನ್ನು ಆರ್‌ಎಸ್‌ಎಸ್ ನೀಡಿದೆ. ಆದರೆ ಕುಮಾರಸ್ವಾಮಿಯವರಿಗೆ ಆರ್‌ಎಸ್‌ಎಸ್ ಬಗ್ಗೆ ಕಲ್ಪನೆಯೇ ಇಲ್ಲ. ಕುಮಾರಸ್ವಾಮಿಯವರ ಮೆದುಳಿಗೆ ಪೊರೆ ಬಂದಿದೆ. ದೇಶದ ಹಿಂದೂ ಸಮಾಜದವರೆಲ್ಲರೂ ಮೋದಿ ಪರವಾಗಿದ್ದಾರೆ ಎಂದು ಸಿದ್ದರಾಮಯ್ಯ ಮತ್ತು ಎಚ್‍ಡಿಕೆಗೆ ಅನಿಸಿಬಿಟ್ಟಿದೆ. ರಾಷ್ಟ್ರಭಕ್ತ ಮುಸಲ್ಮಾನರು ಕೂಡ ಬಿಜೆಪಿ ಜೊತೆಯಲ್ಲಿದ್ದಾರೆ. ಹೀಗಾಗಿ ಹಿಂದೂಗಳ ಮತ ನಮಗೆ ಸಿಗುವುದಿಲ್ಲ ಎಂಬುದು ಖಾತರಿಯಾಗಿಬಿಟ್ಟಿದೆ ಎಂದರು.

ಗೋವಿನ ಕಗ್ಗೊಲೆಯಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನವರು ಅವರಿಗೆ ಬೆಂಬಲ ನೀಡಿದ್ದರು. ಆಗ ಎಚ್‍ಡಿಕೆ ಮೌನವಾಗಿದ್ದರು. ಹೀಗಾಗಿ ಹಿಂದೂಗಳು ನಮ್ಮ ಜೊತೆಗೆ ಬರುವುದಿಲ್ಲ ಎಂಬುದು ಕಾಂಗ್ರೆಸ್, ಜೆಡಿಎಸ್ ನವರಿಗೆ ತಿಳಿದಿದೆ. ಹೀಗಾಗಿ ಮುಸಲ್ಮಾನರನ್ನು ಸಂತೃಪ್ತಿಪಡಿಸುವ ಒಂದೇ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications