ಮಾಜಿ ಸೈನಿಕರಿಗಾಗಿ ಸರ್ಕಾರದಿಂದಲೇ ಜವಾನ್ ಸಮ್ಮಾನ್ ಲೇಔಟ್ ನಿರ್ಮಾಣ – ಕೃಷ್ಣಬೈರೇಗೌಡ

Public TV
1 Min Read
Krishna Byre Gowda 1

ಬೆಳಗಾವಿ: ಸರ್ಕಾರದಿಂದಲೇ ಮಾಜಿ ಸೈನಿಕರಿಗೆ ನಿವೇಶನ ಕೊಡಲು ಜವಾನ್ ಸಮ್ಮಾನ್ ಲೇಔಟ್‌ಗಳನ್ನ (Jawan Samman Layout) ಸರ್ಕಾರ ನಿರ್ಮಾಣ ಮಾಡಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮಂಜೇಗೌಡ ಸೈನಿಕರಿಗೆ ಭೂಮಿ ನೀಡದ ವಿಚಾರ ಪ್ರಸ್ತಾಪ ಮಾಡಿದ್ರು. ರಾಜ್ಯ ಸರ್ಕಾರ ಮಾಜಿ ಸೈನಿಕರಿಗೆ ಭೂಮಿ ಮಂಜೂರು ಮಾಡಿಲ್ಲ. ದೇಶ ಕಾಯೋ ಸೈನಿಕನಿಗೆ (Soldier) ಜಮೀನು ಕೊಡದೇ ಹೋದ್ರೆ ಹೇಗೆ? ನಮಗೆ ರಕ್ಷಣೆ ಕೊಡೋ ಸೈನಿಕನಿಗೆ ಭೂಮಿ ಕೊಟ್ಟಿಲ್ಲ ಅಂತ ಸರ್ಕಾರದ ವಿರುದ್ಧ ಅಕ್ರೋಶ ಹೊರ ಹಾಕಿದ್ರು. ಇದನ್ನೂ ಓದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ – ʻನುಡಿ ಜಾತ್ರೆಯ ಸ್ವರ ಯಾತ್ರೆʼ

ಇದಕ್ಕೆ ಸಚಿವ ಕೃಷ್ಣಬೈರೇಗೌಡ ಉತ್ತರ ನೀಡಿ, ರಾಜ್ಯದಲ್ಲಿ ಒಟ್ಟು 2,317 ಮಾಜಿ ಸೈನಿಕರು ಇದ್ದಾರೆ‌. 16,065 ಅರ್ಜಿ ಭೂ ಮಂಜೂರಾತಿಗಾಗಿ ಬಂದಿದೆ. ಇದರಲ್ಲಿ 6,783 ಅರ್ಜಿ ವಿಲೇವಾರಿ ಮಾಡಲಾಗಿದೆ. 9,282 ಅರ್ಜಿಗಳು ಬಾಕಿ ಇವೆ ಅಂತ ಮಾಹಿತಿ ನೀಡಿದ್ರು. ಇದನ್ನೂ ಓದಿ: ದೇಶಿಯ ಕುರಿ ತಳಿ ಸಂರಕ್ಷಣೆ ಮಾಡಲು ವಿಶೇಷ ಅನುದಾನ ಕೊಡಿ – ಯತೀಂದ್ರ ಸಿದ್ದರಾಮಯ್ಯ

ಮಾಜಿ ಸೈನಿಕರಿಗೆ ಜಮೀನು ಕೊಡಲು ನಮ್ಮ ಬಳಿ ಜಾಗ ಇಲ್ಲ. ಬಡವರಿಗೆ ನಿವೇಶನ ಕೊಡೋಕು ನಮ್ಮ ಬಳಿ ಜಾಗ ಇಲ್ಲ. ಪ್ರಜಾ ಸೌಧ ಕಟ್ಟಲು ಜಾಗ ಇಲ್ಲ. ಹೀಗಾಗಿ ಭೂಮಿ ಬದಲಿಗೆ ಮಾಜಿ ಸೈನಿಕರಿಗೆ ಸೈಟ್ ಕೊಡೋಕೆ ತೀರ್ಮಾನ ಮಾಡಿದ್ದೇವೆ. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ‌ ಜವಾನ್ ಸಮ್ಮಾನ್ ಅಂತ ಲೇಔಟ್ ನಿರ್ಮಾಣ ಮಾಡಿ ಮಾಜಿ ಸೈನಿಕರಿಗೆ ಭೂಮಿ ಬದಲಾಗಿ ಸೈಟ್ ಕೊಡುವ ವ್ಯವಸ್ಥೆ ಮಾಡ್ತೀವಿ. ಆದಷ್ಟು ಬೇಗ ಲೇಔಟ್ ನಿರ್ಮಾಣ ಕಾರ್ಯ ಶುರು ಮಾಡಲು ಡಿಸಿಗಳಿಗೆ ಸೂಚನೆ ಕೊಡ್ತೀನಿ‌ ಅಂತ ತಿಳಿಸಿದರು. ಇದನ್ನೂ ಓದಿ: ವಕ್ಫ್ ವಿಚಾರದಲ್ಲಿ ರಕ್ಷಿಸಲು ಕಾಂಗ್ರೆಸ್ ನಾಯಕರು ವಿಜಯೇಂದ್ರ ಸಂಬಂಧಿಗಳೇ?: ಎಂಪಿ ರೇಣುಕಾಚಾರ್ಯ

Share This Article