– ಬದುಕುಳಿದ ಚಾರಣಿಗರು ದೈಹಿಕವಾಗಿ ಸ್ಥಿರವಾಗಿದ್ದಾರೆ.. ಮಾನಸಿಕವಾಗಿ ಭಯದಲ್ಲಿದ್ದಾರೆ
ಬೆಂಗಳೂರು: ಉತ್ತರಾಖಂಡ (Uttarakhand) ಸಹಸ್ರತಾಲ್ ಟ್ರೆಕ್ಕಿಂಗ್ ವೇಳೆ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿ ರಕ್ಷಿಸಲ್ಪಟ್ಟ ಕರ್ನಾಟಕದ ಚಾರಣಿಗರನ್ನು (Bengaluru Trekkers) ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸ್ ಕರೆತರಲಾಯಿತು. ಈ ವೇಳೆ ಹಿಮ ದುರಂತ ಹಾಗೂ ಚಾರಣಿಗರ ರಕ್ಷಣೆ ಬಗ್ಗೆ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ ನೀಡಿದರು.
- Advertisement -
ನಗರದಲ್ಲಿ ಮಾತನಾಡಿದ ಅವರು, ಒಟ್ಟು 22 ಜನ ಬೆಂಗಳೂರಿಗರು ಚಾರಣಕ್ಕೆ ಹೋಗಿದ್ದರು. 9 ಜನರು ಮೃತಪಟ್ಟಿದ್ದಾರೆ. ಉಳಿದವರನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೇವೆ. ಉತ್ತರಕಾಶಿಯಿಂದ ಡೆಹ್ರಾಡೂನ್ ಮೂಲಕ ಮೃತದೇಹಗಳನ್ನ ತರಲಾಗ್ತಿದೆ. 9 ಮೃತದೇಹಗಳನ್ನ ತರುವ ಚಾರ್ಟರ್ ಫ್ಲೈಟ್ ಸಿಗಲಿಲ್ಲ. ಹೀಗಾಗಿ ತಡ ಆಗುತ್ತಿದೆ. ಬೆಳಗಿನ ಜಾವದಿಂದ ಎರಡೆರೆಡು ಮೃತದೇಹಗಳಂತೆ ಐದು ಚಾರ್ಟರ್ ಫ್ಲೈಟ್ ಮೂಲಕ ಬರುತ್ತೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಾವಿನ ಕೂಪದಂತಿದ್ದ ಸಹಸ್ರತಾಲ್ ಹಿಮದ ಹೊದಿಕೆಯಿಂದ ಬದುಕುಳಿದವರು ಬೆಂಗಳೂರಿಗೆ ವಾಪಸ್
- Advertisement -
- Advertisement -
ನಾಮತ್ತಾಲ್‌ದಿಂದ ಸಹಸ್ತ್ರತಾಲ್ ಸರೋವರಕ್ಕೆ ಬರುವ ವೇಳೆ ಹವಮಾನ ವೈಪರೀತ್ಯವಾಗಿ ಮಂಜು ಆವರಿಸಿಕೊಂಡು, ಮುಂದೆ ಸಾಗೋದಕ್ಕೂ ಆಗದೇ ಕಾಲಕ್ರಮೇಣ ಇಬ್ಬರು, ಇನ್ನಿಬ್ಬರು ಮೃತಪಟ್ಟಿದ್ದಾರೆ. ಜೂ.3 ಮಧ್ಯಾಹ್ನ ಘಟನೆ ಆಗಿದ್ದು, ಜೂ.4 ರ ರಾತ್ರಿ ನಮಗೆ ಮಾಹಿತಿ ಸಿಕ್ಕಿತು. ಭಾರತೀಯ ವಾಯುಸೇನೆಯ ವಿಮಾನ ಮೂಲಕ ರಕ್ಷಣಾ ಕಾರ್ಯ ಮಾಡಲಾಯಿತು. ಜೂ.5 ರಂದು 11 ಜನರ ರಕ್ಷಣೆ ಮಾಡಲಾಯ್ತು. ಇವತ್ತು 13 ಜನರನ್ನು ರಾಜ್ಯ ಸರ್ಕಾರ ಕರೆದುಕೊಂಡು ಬಂದಿದೆ. ಇದರ ಖರ್ಚು ವೆಚ್ಚ ಸರ್ಕಾರ ಭರಿಸುವ ಬಗ್ಗೆ ಸಿಎಂ ಸೂಚನೆ ನೀಡಿದರು ಎಂದು ತಿಳಿಸಿದರು.
- Advertisement -
ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯ ಆಗಿದ್ದರಿಂದ ಕೆಲವರ ಪ್ರಾಣ ಉಳಿಯಿತು. ನಮ್ಮ ರಾಜ್ಯದ ಅಧಿಕಾರಿಗಳು, ಉತ್ತರಾಖಂಡ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಮೃತ ಚಾರಣಿಗರ ಆತ್ಮಕ್ಕೆ ಶಾಂತಿ ಸಿಗಲಿ. ರಕ್ಷಣೆಯಾದ 13 ಜನರ ಆರೋಗ್ಯ ಸ್ಥಿರವಾಗಿದೆ. 11 ಜನ ಚಾರಣಕ್ಕೆ ಹೋಗಿದ್ದರು. ಇನ್ನಿಬ್ಬರು ಹೋಗಿರಲಿಲ್ಲ. ಇನ್ನೂ ಮಾನಸಿಕವಾಗಿ ಭಯದಲ್ಲಿದ್ದಾರೆ. ದೈಹಿಕವಾಗಿ ಸ್ಥಿರವಾಗಿದ್ದಾರೆ. ಆತಂಕದಲ್ಲಿದ್ದಾರೆ. ಚಾರಣಕಕ್ಕೆ ಹೋದ 22 ಜನ ಬೆಂಗಳೂರಿನವರೇ. ಇವರೆಲ್ಲರೂ ಹವ್ಯಾಸಿ ಚಾರಣಿಗರೇ. ಹವಾಮಾನ ವೈಪರೀತ್ಯದ ಬಗ್ಗೆ ಮುನ್ಸೂಚನೆ ಇರಲಿಲ್ಲ ಅಂತಾ ಅವರ ಹೇಳಿಕೆ. ಈ ರೀತಿಯ ಘಟನೆಗಳು ಅಪರೂಪ. ದುರಂತ ಆಗಬಾರದಿತ್ತು. ಈ ಘಟನೆ ಅನಿರೀಕ್ಷಿತ. ಈ ಟ್ರೆಕ್ಕಿಂಗ್ ರೂಟ್ ಕಠಿಣ ರೈಟ್ ಆಗಿರಲಿಲ್ಲ ಅಂತಾ ಸ್ಥಳೀಯ ಅಧಿಕಾರಿಗಳು ಹೇಳಿದರು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಹಿಮಗಾಳಿ ಬಳಿಕ ಎಲ್ಲೆಡೆ ಕಗ್ಗತ್ತಲು, ತಿಂದಿದ್ದು ಡ್ರೈಪ್ರೂಟ್ಸ್ ಮಾತ್ರ!