ಚಿಕ್ಕಮಗಳೂರು: ಈ ಸರ್ಕಾರ ಬಹಳ ದಿನ ಇರಲ್ಲ. ಆರು ತಿಂಗಳಲ್ಲಿ ಬೀಳುತ್ತೆ ಎಂದು ಹೇಳುತ್ತಿರೋ ಕಾಂಗ್ರೆಸ್ಸಿಗರಿಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಯಾರೂ ಬೇಕಾದರೂ ಕನಸು ಕಾಣಬಹುದು. ಯಾರೇ ಕನಸು ಕಂಡರೂ ತಪ್ಪಿಲ್ಲ. ಎಲ್ಲರಿಗೂ ಕನಸು ಕಾಣುವ ಹಕ್ಕಿದೆ ಎಂದು ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ.
Advertisement
Advertisement
ಬಿಜೆಪಿ ಸರ್ಕಾರದ ವಿಷಯದಲ್ಲಿ ಯಾರ ಕನಸೂ ನನಸಾಗುವುದಿಲ್ಲ, ಬಿಜೆಪಿ ಸರ್ಕಾರ ಸುಭದ್ರ ಹಾಗೂ ಸ್ಥಿರವಾಗಿದೆ. ಮಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರಥಯಾತ್ರೆಗೆ ಅಡ್ಡಿಪಡಿಸಿದ ಸಂಘಟನೆಗಳ ಮೇಲೂ ಕಿಡಿಕಾರಿದ್ದಾರೆ. ವ್ಯಕ್ತಿ, ಶಕ್ತಿ, ಪಾರ್ಟಿ ಹಾಗೂ ಸಂಸ್ಥೆ ಯಾವುದೂ ಮುಖ್ಯವಲ್ಲ. ದೇಶದ ಸಂವಿಧಾನಕ್ಕೆ ಅಗೌರವ ತೋರುವ, ರಾಷ್ಟ್ರದ ರಾಷ್ಟ್ರಧ್ವಕ್ಕೆ ಅಗೌರವ ತೋರುವುದನ್ನ ಸಹಿಸಲ್ಲ, ನಮ್ಮ ಬಿಜೆಪಿ ಸರ್ಕಾರ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿದಿದ್ದಾರೆ. ಇದನ್ನೂ ಓದಿ:ಮಂಡ್ಯದಲ್ಲಿ ಮತ್ತೆ ಸುಮಲತಾ Vs ಎಂಎಲ್‍ಎ ಫೈಟ್ – ದಿಶಾ ಸಭೆಯಲ್ಲಿ ಪ್ರತಿಷ್ಠೆಗೆ ಬಿದ್ದ ಜನಪ್ರತಿನಿಧಿಗಳು
Advertisement
Advertisement
ದತ್ತಪೀಠದಲ್ಲಿ ತ್ರಿಕಾಲ ಪೂಜೆ ನಡೆಯಬೇಕು. ಹಿಂದೂ ಅರ್ಚಕರ ನೇಮಕ ಮಾಡಬೇಕು ಎಂಬ ಸುದ್ದಿ ಚರ್ಚೆಯಲ್ಲಿದೆ. ಈಗಾಗಲೇ ಹೈಕೋರ್ಟಿನಲ್ಲಿ ದತ್ತಪೀಠ ಸಂಬಂಧದ ವಾದ-ವಿವಾದ ಮುಗಿದು ಅಂತಿಮ ತೀರ್ಪು ಬಾಕಿ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ದತ್ತಪೀಠದ ವಿಚಾರದಲ್ಲಿ ನ್ಯಾಯಾಲಯದ ತೀರ್ಪೀನ ಬಳಿಕ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ