ಬೆಂಗಳೂರು: ನನ್ನ ಮತ್ತು ನನ್ನ ತಂದೆ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿರುವುದಾಗಿ ಸಚಿವ ಕೆ.ಎನ್ ರಾಜಣ್ಣ (KN Rajanna) ಪುತ್ರ ರಾಜೇಂದ್ರ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿಂದು ತಮ್ಮ ವಿರುದ್ಧ ಹನಿಟ್ರ್ಯಾಪ್ ಯತ್ನ ನಡೆದಿರುವುದಾಗಿ ಸಚಿವ ರಾಜಣ್ಣ ಬಹಿರಂಗಪಡಿಸಿದ್ರು. ಈ ಬೆನ್ನಲ್ಲೇ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವ ರಾಜಣ್ಣ ಪುತ್ರ, ನನ್ನ ತಂದೆ, ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ. ನನಗೆ ಈಗಲೂ ಕರೆಗಳು ಬರ್ತಿವೆ. ನಾನು ದೂರು ಕೊಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್ ರಾಜಣ್ಣ ಬಾಂಬ್
ನನ್ನ ತಂದೆ ಮೇಲೆ ಎರಡು ಸಲ ಹನಿಟ್ರ‍್ಯಾಪ್ ಯತ್ನ ಆಗಿದೆ. ಸರ್ಕಾರಿ ನಿವಾಸಕ್ಕೆ ಹೋಗಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೂ ದೂರು ಕೊಡ್ತೀವಿ, ಆದಷ್ಟು ಬೇಗ ತನಿಖೆ ಆದ್ರೆ ಒಳ್ಳೆಯದು. ಯಾವ ಪಕ್ಷದವರು ಅನ್ನೋದು ತನಿಖೆಯಿಂದ ಗೊತ್ತಾಗುತ್ತೆ. ಸಿಎಂಗೂ ಕೂಡ ನಾನು ದೂರು ಕೊಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈಟಿಪಿಎಸ್‌ನ 1,500 ಗುತ್ತಿಗೆ ನೌಕರರಿಂದ ಉಗ್ರ ಹೋರಾಟ
ಸಿಎಂ ಭೇಟಿಯಾದ ರಾಜಣ್ಣ ಪುತ್ರ:
ತಮ್ಮ ವಿರುದ್ಧ ಹನಿಟ್ರ್ಯಾಪ್ ರಹಸ್ಯ ಬಹಿರಂಗಪಡಿಸಿದ ಬೆನ್ನಲ್ಲೇ ಸಚಿವ ರಾಜಣ್ಣ ಪುತ್ರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ವಿಧಾನಸಭೆ ಮೊಗಸಾಲೆಯಲ್ಲಿ ಸಿಎಂ ಕೊಠಡಿಯಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಹನಿಟ್ರ‍್ಯಾಪ್ ಯತ್ನ ನಡೆದಿರುವ ಬಗ್ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಹೇಗೆ ಮಾಡಬೇಕು ಅನ್ನೋದು ನನಗೆ ಗೊತ್ತಿದೆ: ಡಿಕೆಶಿ