ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಡಿ.ಕೆ ಸುರೇಶ್ (D.K Suresh) ಅವರಿಗೆ ಸೋಲಾಗಲು ಚಂದ್ರಶೇಖರನಾಥ ಸ್ವಾಮೀಜಿ (Chandrasekharanatha Swamiji) ಸೇರಿದಂತೆ ಹಲವು ಸ್ವಾಮೀಜಿಗಳು ಕಾರಣ ಎಂದು ಸಚಿವ ಕೆ.ಎನ್.ರಾಜಣ್ಣ(K.N Rajanna) ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಬಗ್ಗೆ ಮಾತಾಡೋರು ಚುನಾವಣೆಗೆ ಹೋಗೋಣ ಎಂಬ ಸುರೇಶ್ ಹೇಳಿಕೆಗೆ ಅವರು ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ ಉತ್ತಮವಾಗಿ ಕೆಲಸ ಮಾಡಿರುವ ಸಂಸದರ ಪೈಕಿ ಸುರೇಶ್ ಅವರು ಮೊದಲು. ಯಾಕೆ ಅವರನ್ನು ಸೋಲಿಸಿದ್ರು? ಈ ಸ್ವಾಮೀಜಿಗಳೇ ಎಲ್ಲಾ ಸೇರಿಕೊಂಡು ಸೋಲಿಸಿದ್ದು. ಈ ಸ್ವಾಮೀಜಿ ದೇವೇಗೌಡರ ಸೃಷ್ಟಿ, ಬಾಲಗಂಗಾಧರನಾಥ ಸ್ವಾಮೀಜಿ ಜೊತೆ ವ್ಯತ್ಯಾಸ ಬಂದಾಗ ಮಠ ಮಾಡಿ ಇವರನ್ನು ಸ್ವಾಮೀಜಿ ಮಾಡಿದ್ದು ದೇವೇಗೌಡರು. ಈ ವಿಚಾರ ದೇಶಕ್ಕೆ ಗೊತ್ತು. ಈ ಸ್ವಾಮೀಜಿ ಸೇರಿ ಎಲ್ಲಾ ಸ್ವಾಮೀಜಿಗಳು ಸುರೇಶ್ ಸೋಲಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ವಾರ್ನಿಂಗ್ ನಾನ್ ಕೇಳ್ತೀನಾ? ನೋಟಿಸ್ ಕೊಡಲಿ ಅಮೇಲೆ ಮಾತಾಡ್ತೀನಿ: ಕೆ.ಎನ್.ರಾಜಣ್ಣ
Advertisement
Advertisement
ಬಿಜೆಪಿ ಅಧಿಕಾರಕ್ಕೆ ಬಂದರೆ ಯಾರನ್ನು ಸಿಎಂ ಮಾಡೋದು ಎಂದು ಅವರು ತೀರ್ಮಾನ ಮಾಡಲಿ. ಅಶೋಕ್‍ನ ಮಾಡ್ತಾರೋ ಯಾರನ್ನ ಮಾಡ್ತಾರೋ ಅದು ಅವರ ಪಾರ್ಟಿಗೆ ಬಿಟ್ಟಿದ್ದು. ಹಾಗೆ ಕಾಂಗ್ರೆಸ್‍ನಲ್ಲಿ ನಮ್ಮ ಶಾಸಕರು, ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸ್ವಾಮೀಜಿಗಳು ಹೇಳಿದ ಹಾಗೆ ಸಿಎಂ ಮಾಡೋಕೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಯೋಗ್ಯತೆ ಇಲ್ಲ ಅಂದ್ರೆ ಜವಾಬ್ದಾರಿ ಬಿಟ್ಟು ಚುನಾವಣೆಗೆ ಹೋಗುವುದು ವಾಸಿ: ಸಚಿವ ರಾಜಣ್ಣಗೆ ಡಿಕೆಸು ತಿರುಗೇಟು