– ಧರ್ಮಸ್ಥಳದ ಹಣ ಅನ್ನುತ್ತಿದ್ದಂತೆ ಯಾರೂ ಉಳಿಸಿಕೊಳ್ಳಲ್ಲ ಎಂದ ಸಚಿವ
ಹಾಸನ: ಧರ್ಮಸ್ಥಳ ಸಂಘ (Dharmasthala Association)ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಬರಲ್ಲ ಅಂತ ಸಚಿವ ಕೆ.ಎನ್ ರಾಜಣ್ಣ (KN Rajanna) ಹೇಳಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಧರ್ಮಸ್ಥಳ ಸಂಘದ ಸಾಲ ಸೌಲಭ್ಯದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಸಿಎಂ ಆಗಿರೋರಿಗೆ ಮೂರ‍್ನಾಲ್ಕು ಸೈಟ್ ಯಾವ ಲೆಕ್ಕ – ಮುಡಾ ಕೇಸ್ ಬಗ್ಗೆ ಕೆ.ಎನ್ ರಾಜಣ್ಣ ರಿಯಾಕ್ಷನ್
ಮೈಕ್ರೋ ಫೈನಾನ್ಸ್ (Micro Finance) ವ್ಯಾಪ್ತಿಯಲ್ಲಿ ಧರ್ಮಸ್ಥಳ ಸಂಘ ಬರಲ್ಲ. ಅವರು ಗ್ರಾಮೀಣ ಯೋಜನೆ ಅಂತ ಮಾಡಿಕೊಂಡಿದ್ದಾರೆ. ಸ್ವ-ಸಹಾಯ ಸಂಘ ಮಾಡಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವ-ಸಹಾಯ ಸಂಘಗಳಿಗೆ ಅವರು ಸಾಲ ಕೊಡ್ತಾರೆ. ಧರ್ಮಸ್ಥಳದ ಹಣ ಅನ್ನುತ್ತಿದ್ದಂತೆ ಯಾರೂ ಸಹ ಉಳಿಸಿಕೊಳ್ಳಲ್ಲ. ಅವರು ಹೀಗೆ ಕಿರುಕುಳ ನೀಡಿದ್ದಾರೆ ಅಂತ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಹರಿಹರ ಶಾಸಕರಿಗೆ ತಲೆ ಕೆಟ್ಟಿರಬೇಕು – ಬಿ.ಪಿ ಹರೀಶ್ ವಿರುದ್ಧ ಎಸ್.ಎಸ್ ಮಲ್ಲಿಕಾರ್ಜುನ್ ಕಿಡಿ
ಇನ್ನೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಮಾತನಾಡಿ, ಹೀಗೆ ಕಿರುಕುಳ ಕೊಡೋರಿಗೆ ಕಠಿಣ ಶಿಕ್ಷೆ ಆಗಬೇಕು. ಹಾಸನ ಜಿಲ್ಲೆಯಲ್ಲೂ ಈ ಸಮಸ್ಯೆ ಸಾಕಷ್ಟಿದೆ. ಕೆಲ ಸಂಸ್ಥೆಗಳು ಆರ್‌ಬಿಐ ಅನುಮತಿ ಪಡೆದು ಫೈನಾನ್ಸ್ ನಡೆಸುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ಕೊಟ್ಟಾಗ ನಾವು ಕ್ರಮ ಕೈಗೊಳ್ಳಬಹುದು. ಹಾಗಾಗಿ ಸಿಎಂ ಸಭೆ ಮಾಡಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇಂತಹ ಕಿರುಕುಳ ತಡೆಗೆ ಹೊಸ ಕಾಯ್ದೆ ತರುವ ಬಗ್ಗೆಯೂ ಚರ್ಚೆ ಆಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಆಗಲಿದೆ. ನಿನ್ನೆ ಸಿಎಂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಅದಕ್ಕಾಗಿ ನಿನ್ನೆ ರಜೆ ಇದ್ದರೂ ಸಿಎಂ ಅಧಿಕಾರಿಗಳು ಹಾಗೂ ಸಚಿವರೊಟ್ಟಿಗೆ ಸಭೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಯಾರೆಲ್ಲ ಜನರಿಗೆ ತೊಂದರೆ ಕೊಡುತ್ತಾರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮೀಟರ್ ಬಡ್ಡಿ ದಂಧೆ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್ ಬೀಳುತ್ತೆ ಅನ್ನೋ ವಿಶ್ವಾಸ ನನಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: 5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ, ನಾನೇ ಸಿಎಂ ಎಂದಿಲ್ಲ: ಡಿ.ಸುಧಾಕರ್