– ಟ್ವಿಟ್ಟರ್‍ನಲ್ಲಿ ಶೋಭಾ ಕರಂದ್ಲಾಜೆ ಆಕ್ರೋಶ
ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿಗೆ ಅವಮಾನ ಮಾಡಲಾಗಿದೆ.
ತಿರುವನಂತಪುರಂನಲ್ಲಿರುವ ಮಹಾವಿಷ್ಣು ದೇವಸ್ಥಾನ ಕೆರೆ ಅಭಿವೃದ್ಧಿಯ ಕಾಮಗಾರಿಯ ಲೋಕಾರ್ಪಣೆಗೆ ಸ್ವಾಮೀಜಿ ಹೋಗಿದ್ದರು. ಆದ್ರೆ ಶ್ರೀಗಳಿಗೆ ಮೀಸಲಾಗಿದ್ದ ಆಸನ ತೆಗೆದು ಎಡಪಂಥೀಯ ಸರ್ಕಾರದ ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್, ಕಾಂಗ್ರೆಸ್ ಶಾಸಕ ಶಿವಕುಮಾರ್ ದುರಂಹಕಾರ ಪ್ರದರ್ಶಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಶ್ರೀಗಳಿಗೆ ಮಾಡಲಾದ ಅವಮಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.
https://twitter.com/ShobhaBJP/status/874521327566114816
https://twitter.com/ShobhaBJP/status/874524051825229825
Strongly condemn the insult to Bharati Teertha Swamiji of Sringeri Mutt by Kerala Devaswom minister Sh.Kadakampally Surendra at Trivandrum
— B.S.Yediyurappa (@BSYBJP) June 13, 2017
ಇತ್ತ ತಮ್ಮ ಕ್ರಮವನ್ನು ಸಚಿವ ಕಡಕಂಪಲ್ಲಿ ಸುರೇಂದ್ರನ್ ಸಮರ್ಥಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಅತಿಥಿಗಳಿಗೆ ಕೂರಲು ಜಾಗ ಸಾಕಾಗುತ್ತಿರಲಿಲ್ಲ. ಈ ಬಗ್ಗೆ ತಿಳಿದು ವಿಶೇಷ ಕುರ್ಚಿಯನ್ನು ತೆಗೆಸಿದೆ. ಅಲ್ಲಿ ಮಂತ್ರಿಗಳಿಗಾಗಲಿ, ಸ್ವಾಮೀಜಿಗಳಿಗಾಗಲೀ ವಿಶೇಷ ಕುರ್ಚಿಯನ್ನು ಹಾಕೋ ಅಗತ್ಯವಿರಲಿಲ್ಲ. ಸ್ವಾಮೀಜಿಗೆ ಹಾಕಿದ್ದ ವಿಶೇಷ ಕುರ್ಚಿಯನ್ನು ಬಿಜೆಪಿ ಶಾಸಕ ಒ. ರಾಜಗೋಪಾಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಕುಮ್ಮನಂ ರಾಜಶೇಖರನ್ ಸಹಾಯದಿಂದ ತೆಗೆಸಿದೆ. ವೇದಿಕೆಯಲ್ಲಿ ಎಲ್ಲರಿಗೂ ಕೂರಲು ಕಷ್ಟ ಆಗ್ತಿತ್ತು ಅನ್ನೋದನ್ನು ಅವರೂ ಅರ್ಥ ಮಾಡಿಕೊಂಡಿದ್ದರು ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ವಿಶೇಷ ಪೀಠ ತೆಗೆಸಿದ್ದರ ಕಾರಣ ಕಾರ್ಯಕ್ರಮಕ್ಕೆ ಬಂದಿದ್ದ ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿ ವೇದಿಕೆ ಹತ್ತಲಿಲ್ಲ.