ಜನರು ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ತಿದ್ದಾರೆ: ಕೆ. ಸುಧಾಕರ್

Public TV
2 Min Read
K. Sudhakar

– ಯಾರೂ ನಿರ್ಲಕ್ಷ್ಯವಹಿಸಬಾರದು, ಮಾಸ್ಕ್ ಹಾಕಬೇಕು
– ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು

ಬೆಂಗಳೂರು: ಜನರು ತುಂಬಾನೇ ಉತ್ಸಾಹದಿಂದ ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಡ್ರೈವ್ ಇಂದು ಕೂಡ ಮಾಡ್ತಿದ್ದೇವೆ. 7 ಕೋಟಿ 80 ಲಕ್ಷ ಡೋಸ್ ಲಸಿಕೆ ಕೊಡಲಾಗಿದೆ. ಶೇ.68 ಎರಡು ಡೋಸ್ ಪಡೆದವರ ಸಂಖ್ಯೆ ಆಗಿದೆ. ಜನರು ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ತಿದ್ದಾರೆ. ಕರ್ನಾಟಕ ರಾಜ್ಯದ ಕ್ರಮ ಸರಿಯಾಗಿದೆ ಅಂತ ಕೇಂದ್ರ ಹೇಳಿದೆ. ಬೇರೆ ರಾಜ್ಯ ಕೂಡ ಇದನ್ನ ಪಾಲನೆ ಮಾಡಿ ಅಂತ ಹೇಳಿದೆ. ಯಾರು ಕೂಡ ಉದಾಸೀನ ಮಾಡಬಾರದು. ಹೊಸ ತಳಿ ಆಗಿರೋದ್ರಿಂದ ಮೃದು ಲಕ್ಷಣ ಕಾಣ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ನಾವು ತಗೋಬೇಕು ಎಂದು ಹೇಳಿದರು.

coronavirus treatment in kukatpally 1024x768 1

ಇದೇ ವೇಳೆ ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಟಫ್ ರೂಲ್ಸ್ ಜಾರಿಗೆ ತರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಸಿಎಂ ಚರ್ಚೆ ಮಾಡ್ತಿದ್ದಾರೆ. ಆದಷ್ಟು ಬೇಗ ಸಿಎಂ ಈ ಬಗ್ಗೆ ನಿರ್ಧಾರ ಮಾಡ್ತಾರೆ. ನಾಳೆಯ ಸಭೆಯಲ್ಲೂ ಟಫ್ ರೂಲ್ಸ್ ಬಗ್ಗೆ ಚರ್ಚೆ ಆಗುತ್ತೆ ಎಂದು ತಿಳಿಸಿದರು.

DR K SUDHAKAR

ಇತಿಹಾಸದ ಸಾಂಕ್ರಾಮಿಕ ರೋಗ ನೋಡಿದ್ರೆ 2 ಅಲೆ ತೀವ್ರವಾಗಿ ಇರುತ್ತೆ. ಬಳಿಕ 3-4 ನೇ ಅಲೆ ತೀವ್ರತೆ ಕಡಿಮೆ ಇರುತ್ತೆ. ಹಾಗಾಂತ ಯಾರು ನಿರ್ಲಕ್ಷ್ಯವಹಿಸಬಾರದು. ಮಾಸ್ಕ್ ಹಾಕಬೇಕು, ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾ ಎಂಡ್ ಆಗೋ ಕೊನೆ ದಿನಗಳು ಕಂಡು ಬರುತ್ತಿವೆ. ಆದರೆ ಹಾಗಂತ ಯಾರೂ ಉದಾಸೀನ ಮಾಡಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.

vaccine

ಇಂದು ವಿಶೇಷ ಲಸಿಕೆ ಡ್ರೈವ್ ಆಯೋಜನೆ ಮಾಡಲಾಗಿದೆ. 1,200 ಕಡೆ ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಈವರೆಗೆ 7 ಕೋಟಿ 80 ಲಕ್ಷ ಡೋಸ್ ರಾಜ್ಯದಲ್ಲಿ ನೀಡಲಾಗಿದೆ. ಶೇ.68 ಜನ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಜನರು ಕೂಡ ಉತ್ಸಾಹದಿಂದ ಲಸಿಕೆ ಪಡೆಯುತ್ತಿದ್ದಾರೆ. ಕರ್ನಾಟಕದ ಕ್ರಮಗಳನ್ನು ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ನಮ್ಮ ಮಾದರಿಯನ್ನು ಎಲ್ಲಾ ರಾಜ್ಯಗಳು ಅಳವಡಿಕೆ ಮಾಡಬೇಕು ಅಂತ ಸಲಹೆ ನೀಡಿದೆ ಎಂದರು. ಇದನ್ನೂ ಓದಿ: ಟ್ರೈನ್ ಟಿಕೆಟ್ ರದ್ದು ಮಾಡಿದ್ದಕ್ಕೆ ದಂಡ ವಿಧಿಸಿದವನನ್ನೇ ಕೊಂದ ಸಹೋದರರು!

FotoJet 8 18

ಓಮಿಕ್ರಾನ್ ಹೊಸ ತಳಿ ಆಗಿರೋದ್ರಿಂದ ಮೃದು ಲಕ್ಷಣ ಕಾಣ್ತಿದೆ. ಇದರ ತೀವ್ರತೆ ಏನು ಅಂತ ನಮಗೆ ಇನ್ನು ಗೊತ್ತಾಗಿಲ್ಲ. ಹೀಗಾಗಿ ಯಾರು ಕೂಡಾ ನಿರ್ಲಕ್ಷ್ಯ ಮಾಡಬಾರದು. ಜನರು ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಮಾಸ್ಕ್ ಧರಿಸಿ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಹೀಗಿದ್ದಾಗ ಮಾತ್ರ ಕೊರೊನಾ ವಿರುದ್ಧ ಹೋರಾಡೋಕೆ ಸಾಧ್ಯವಾಗುತ್ತೆ ಎಂದು ಹೇಳಿದರು.

corona virus 2

ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಕೂಡಾ ರಾಜ್ಯದ ಕ್ರಮಗಳನ್ನ ಮೆಚ್ಚಿಕೊಂಡಿದೆ. ಬೇರೆ ರಾಜ್ಯಗಳು ಕರ್ನಾಟಕ ಮಾದರಿ ಪಾಲನೆ ಮಾಡಿ ಅಂತ ಹೇಳಿದ್ದಾರೆ. ಹೀಗಾಗಿ ನಾವು ನಮ್ಮ ಕ್ರಮಗಳನ್ನು ಮುಂದುವರೆಸುತ್ತೇವೆ ಎಂದು ವಿವರಿಸಿದರು. ಇದನ್ನೂ ಓದಿ: ರೌಡಿಶೀಟರ್ ಹತ್ಯೆಗೆ ಸ್ಕೆಚ್ – ಕಾರು ರಿವರ್ಸ್ ತೆಗೆದು ಜೆಸಿಬಿ ನಾರಾಯಣ ಬಚಾವ್

Share This Article
Leave a Comment

Leave a Reply

Your email address will not be published. Required fields are marked *