ಬೆಂಗಳೂರು: ಕೊರೊನಾ ಸೋಂಕು ತಡೆಗೆ ಲಾಕ್‍ಡೌನ್ ಪರಿಹಾರ ಅಲ್ಲ. ಹೀಗಾಗಿ ಮತ್ತೆ ಸಂಪೂರ್ಣ ಲಾಕ್‍ಡೌನ್ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಲಾಕ್‍ಡೌನ್ ಸ್ಪಷ್ಟತೆಯೇ ಇಲ್ಲ. ಮುಖ್ಯಮಂತ್ರಿಗಳಿಗೆ ಅಷ್ಟು ಸ್ಪಷ್ಟತೆ ಇದೆ. ಸೋಂಕು ಹಬ್ಬಿಯೇ ಹಬ್ಬುತ್ತೆ, ತಡೆಯಲು ಆಗಲ್ಲ. ಸೋಂಕು ಹೆಚ್ಚು ಆಗಿಯೇ ಆಗುತ್ತೆ. ಯಾರೂ ಕೂಡಾ ಪಾಸಿಟಿವಿಟಿ ಬಗ್ಗೆ ಚಿಂತೆ ಬೇಡ ಎಂದರು.
Advertisement
Advertisement
ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಕೊರೊನಾ ಕೇಸ್ ಜಾಸ್ತಿ ಆಗ್ತಿದೆ. ಇನ್ನೂ ಕೇಸ್ ಜಾಸ್ತಿ ಆಗುತ್ತೆ. ಇದು ವಿಶ್ವವ್ಯಾಪಿ ಹರಡಿರುವ ರೋಗ ಆಗಿದೆ. ನಮ್ಮಲ್ಲಿ ಅಂತರಾಷ್ಟ್ರೀಯ ವಿಮಾನ ಬಂದ್ ಆಗಿಲ್ಲ. ಹೀಗಾಗಿ ಹೊರಗಿನವರ ಓಡಾಟ ಹೆಚ್ಚಾಗಿ ಇರುತ್ತೆ. ಹೀಗಿದ್ದರೂ ನಾವು ಕೊರೊನಾ ನಿಯಂತ್ರಣ ಮಾಡಲು ಅವಕಾಶ ಇದೆ. ಇದಕ್ಕೆ ಜನರ ಸಹಕಾರ ಪಡೆದು ಮುಂದೆವರಿಯುತ್ತೇವೆ ಎಂದು ಹೇಳಿದರು.
Advertisement
Advertisement
ಜನರ ಬದುಕಿಗೆ ತೊಂದರೆ ಆಗದಂತೆ ಕ್ರಮ ತಗೋತೀವಿ. ನಮಗೆ ಎರಡು ವರ್ಷಗಳ ಅನುಭವ ಇದೆ. ಹೇಗೆ ನಿಯಂತ್ರಣ ಮಾಡಬೇಕು ಅಂತ ಅನುಭವ ಇದೆ. ಹೀಗಾಗಿ ಜನರಿಗೆ ಸಮಸ್ಯೆ ಆಗದಂತೆ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಅನ್ನೋ ಮೂಲಕ ಸಂಪೂರ್ಣ ಲಾಕ್ ಡೌನ್ ಇಲ್ಲ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ರಾಣೆಗೆ ಕ್ಯಾಬಿನೆಟ್‍ನಲ್ಲಿ ಖಾಯಂ ಸ್ಥಾನ ಕೊಟ್ಟ ಗೋವಾ ಸರ್ಕಾರ
15-18 ವರ್ಷದವರಿಗೆ ಕರ್ನಾಟಕದಲ್ಲಿ ಶೇ.42 ಲಸಿಕೆ ನೀಡಲಾಗಿದೆ. 13.35 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಚಿಕ್ಕಬಳ್ಳಾಪುರ, ಕೊಡಗಿನಲ್ಲಿ ಶೇ.59, ಬೆಳಗಾವಿ, ಬಾಗಲಕೋಟೆ, ಹಾವೇರಿ ಶೇ.58 ಹಾಗೂ ಉತ್ತರ ಕನ್ನಡ ಶೇ.57 ಯಲ್ಲಿ ವ್ಯಾಕ್ಸಿನ್ ನೀಡಲಾಗಿದೆ. ದೊಡ್ಡವರಲ್ಲಿ ಶೇ.99 ಮೊದಲ ಡೋಸ್, 2 ನೇ ಡೋಸ್ ಶೇ.80 ಲಸಿಕೆ ನೀಡಲಾಗಿದೆ. ಇಡೀ ದೇಶದಲ್ಲಿ 3 ನೇ ಸ್ಥಾನದಲ್ಲಿ ದೊಡ್ಡವರ ಲಸಿಕೆಯಲ್ಲಿ ಇದ್ದೇವೆ ಎಂದು ಮಾಹಿತಿ ನೀಡಿದರು.
ಓಮಿಕ್ರಾನ್, ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ಶೇ. 3.95 ಪಾಸಿಟಿವಿಟಿ ದರ ಇದೆ. ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ ಮೈಸೂರು, ಉಡುಪಿ ಹಾಗೂ ಕೋಲಾರದಲ್ಲಿ ಹೆಚ್ಚು ಕೇಸ್‍ಗಳು ಕಂಡುಬರುತ್ತಿವೆ. ಈ ಸಂಬಂಧ ಡಿಸಿಗಳ ಜೊತೆ ಕ್ರಮಕ್ಕೆ ಮಾತಾಡ್ತೀನಿ ಎಂದು ಹೇಳಿದರು.