ಬೆಂಗಳೂರು: ಸರ್ಕಾರದ ತೀರ್ಮಾನಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೆಗೆದುಕೊಂಡಿದ್ದೇವೆ. ಇದನ್ನು ಅವೈಜ್ಞಾನಿಕ ನಿಯಮ ಎಂದು ಯಾರಾದರೂ ಹೇಳಿದರೆ ಅದು ಕಾಂಗ್ರೆಸ್ ನಾಯಕರು ಮಾತ್ರ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೇ ಅಲೆಯಲ್ಲಿ ನೂರು ಕೋವಿಡ್ ಪ್ರಕರಣಗಳು ದೃಢಪಟ್ಟ ತಕ್ಷಣ ಲಾಕ್‌ಡೌನ್ ಮಾಡಿದ್ದೆವು. ಎರಡನೇ ಅಲೆಯಲ್ಲೂ ಮೂರು ಸಾವಿರ ದಾಟಿದ ತಕ್ಷಣ ನಾವು ಲಾಕ್‌ಡೌನ್ ಮಾಡಿದ್ವಿ. ಮೂರನೇ ಅಲೆಯಲ್ಲಿ ಎರಡು ವಾರ ವೀಕೆಂಡ್ ಕರ್ಫ್ಯೂ ಮಾಡಿದ್ದೆವು. ಇವೆಲ್ಲವನ್ನು ವೈಜ್ಞಾನಿಕವಾಗಿ ಯೋಚನೆ ಮಾಡಿ ನಿರ್ಧಾರ ಮಾಡಿದ್ದೆವು. ಇದರಲ್ಲಿ ತೀವ್ರತೆ ಇಲ್ಲ ಎನ್ನುವ ಕಾರಣಕ್ಕೆ ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿದ್ದೇವೆ. ಒಂದು ವೇಳೆ ಕೊರೊನಾ ಮೂರನೇ ಅಲೆ ತೀವ್ರತೆ ಹೆಚ್ಚಾದರೆ ಕಠಿಣ ರೂಲ್ಸ್ ಮತ್ತೆ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ರಾಜ್ಯದಲ್ಲಿ ಅತಿ ಹೆಚ್ಚು ಜನರಿಗೆ ಟೆಸ್ಟ್ ಮಾಡಿದ್ದೇವೆ. ಜೊತೆಗೆ ಮೊದಲನೇ ಡೋಸ್ ಶೇಕಡಾ ನೂರರಷ್ಟು ಜನರಿಗೆ ನೀಡಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ನಮ್ಮ ಸಿಎಂ ಮತ್ತು ಸಚಿವರ ಸಾಥ್‌ನಿಂದಾಗಿ ಈ ಗುರಿ ತಲುಪಿದ್ದೇವೆ. ಎರಡನೇ ಡೋಸ್ 85% ಆಗಿದೆ. ಒಟ್ಟರೆಯಾಗಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಯಶಸ್ಸು ಕಂಡಿದೆ ಎಂದು ಅಭಿಪ್ರಾಯಪಟ್ಟರು.
Advertisement
ಬೆಂಗಳೂರಿನಲ್ಲಿ ಎರಡು, ಮೂರು ದಿನಗಳಲ್ಲಿ ಸೋಂಕು ಕಡಿಮೆ ಆಗಿದೆ. ಪಾಸಿಟಿವಿಟಿ ರೇಟ್ ಕಡಿಮೆ ಆಗಿದೆ. ಇನ್ನೆರಡು ದಿನ ಇದೇ ರೀತಿ ಮುಂದುವರಿದರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಹೇಳಬಹುದು. ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಜಾಸ್ತಿ ಆಗುತ್ತಿದೆ. ಆದರೆ ಜನವರಿ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
Advertisement
ನಿನ್ನೆಯ ಎರಡು, ಮೂರು ದಿನಗಳಲ್ಲಿ ಬೆಂಗಳೂರಲ್ಲಿ 24%, 25% ಪಾಸಿಟಿವಿಟಿ ರೇಟ್ ಇತ್ತು. ಇದೀಗ 17%, 18%, 19%ರಷ್ಟು ಪಾಸಿಟಿವಿಟಿ ರೇಟ್ ಬರುತ್ತಿದೆ. ಹೊರ ಜಿಲ್ಲೆಯಲ್ಲಿ ಈಗ ನಿಧಾನವಾಗಿ ಏರುತ್ತಿದೆ. ನಮ್ಮ ದೇಶದಲ್ಲಿ ಮಹಾರಾಷ್ಟ್ರ, ದೆಹಲಿಯಲ್ಲಿ ಹೆಚ್ಚಾಗಿತ್ತು. ಆದರೆ ಕರ್ನಾಟಕದಲ್ಲಿ ಒಂದು ತಿಂಗಳ ಬಳಿಕ ಹೆಚ್ಚಾಗಿತ್ತು. ಜನರು ಇದೇ ರೀತಿಯ ಸಹಕಾರ ಕೊಡಲಿ. ಎರಡು, ಮೂರು ವಾರ ಕಡಿಮೆ ಆಗುವ ಸಾಧ್ಯತೆ ಇದೆ. ಆದಷ್ಟು ಶೀಘ್ರವಾಗಿ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೊಂದೆ ಕಾರಣ ಅಲ್ಲ. ಇದು ಸ್ವಾಭಾವಿಕ. ಐದಾರು ರಾಜ್ಯಕ್ಕೆ ನಾವು ಗಡಿ ಹಂಚಿಕೊಂಡಿದ್ದೇವೆ. ಖಂಡಿತ ಅಲ್ಲಿಂದಲೂ ಬರುವವರು ಇರುತ್ತಾರೆ. ಪಾಸಿಟಿವ್ ಬಂದವರನ್ನು ಬರಬೇಡಿ ಎಂದು ಹೇಳಿದ್ದೇವೆ. ಆದರೂ ಬಂದಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದೆಲ್ಲ ನೂರಕ್ಕೆ ನೂರು ವರ್ಕೌಟ್ ಆಗುತ್ತದೆ ಎಂದು ಹೇಳಲು ಆಗಲ್ಲ ಎಂದರು.