Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸರ್ಕಾರದ ತೀರ್ಮಾನಗಳು ವೈಜ್ಞಾನಿಕ ನೆಲೆಗಟ್ಟಿನಲ್ಲಿವೆ: ಕಾಂಗ್ರೆಸ್‌ಗೆ ಸುಧಾಕರ್ ತಿರುಗೇಟು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸರ್ಕಾರದ ತೀರ್ಮಾನಗಳು ವೈಜ್ಞಾನಿಕ ನೆಲೆಗಟ್ಟಿನಲ್ಲಿವೆ: ಕಾಂಗ್ರೆಸ್‌ಗೆ ಸುಧಾಕರ್ ತಿರುಗೇಟು

Bengaluru City

ಸರ್ಕಾರದ ತೀರ್ಮಾನಗಳು ವೈಜ್ಞಾನಿಕ ನೆಲೆಗಟ್ಟಿನಲ್ಲಿವೆ: ಕಾಂಗ್ರೆಸ್‌ಗೆ ಸುಧಾಕರ್ ತಿರುಗೇಟು

Public TV
Last updated: January 23, 2022 1:39 pm
Public TV
Share
2 Min Read
sudhakar 4
SHARE

ಬೆಂಗಳೂರು: ಸರ್ಕಾರದ ತೀರ್ಮಾನಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೆಗೆದುಕೊಂಡಿದ್ದೇವೆ. ಇದನ್ನು ಅವೈಜ್ಞಾನಿಕ ನಿಯಮ ಎಂದು ಯಾರಾದರೂ ಹೇಳಿದರೆ ಅದು ಕಾಂಗ್ರೆಸ್ ನಾಯಕರು ಮಾತ್ರ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೇ ಅಲೆಯಲ್ಲಿ ನೂರು ಕೋವಿಡ್ ಪ್ರಕರಣಗಳು ದೃಢಪಟ್ಟ ತಕ್ಷಣ ಲಾಕ್‌ಡೌನ್ ಮಾಡಿದ್ದೆವು. ಎರಡನೇ ಅಲೆಯಲ್ಲೂ ಮೂರು ಸಾವಿರ ದಾಟಿದ ತಕ್ಷಣ ನಾವು ಲಾಕ್‌ಡೌನ್ ಮಾಡಿದ್ವಿ. ಮೂರನೇ ಅಲೆಯಲ್ಲಿ ಎರಡು ವಾರ ವೀಕೆಂಡ್ ಕರ್ಫ್ಯೂ ಮಾಡಿದ್ದೆವು. ಇವೆಲ್ಲವನ್ನು ವೈಜ್ಞಾನಿಕವಾಗಿ ಯೋಚನೆ ಮಾಡಿ ನಿರ್ಧಾರ ಮಾಡಿದ್ದೆವು. ಇದರಲ್ಲಿ ತೀವ್ರತೆ ಇಲ್ಲ ಎನ್ನುವ ಕಾರಣಕ್ಕೆ ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿದ್ದೇವೆ. ಒಂದು ವೇಳೆ ಕೊರೊನಾ ಮೂರನೇ ಅಲೆ ತೀವ್ರತೆ ಹೆಚ್ಚಾದರೆ ಕಠಿಣ ರೂಲ್ಸ್ ಮತ್ತೆ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Congress

ರಾಜ್ಯದಲ್ಲಿ ಅತಿ ಹೆಚ್ಚು ಜನರಿಗೆ ಟೆಸ್ಟ್ ಮಾಡಿದ್ದೇವೆ. ಜೊತೆಗೆ ಮೊದಲನೇ ಡೋಸ್ ಶೇಕಡಾ ನೂರರಷ್ಟು ಜನರಿಗೆ ನೀಡಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ನಮ್ಮ ಸಿಎಂ ಮತ್ತು ಸಚಿವರ ಸಾಥ್‌ನಿಂದಾಗಿ ಈ ಗುರಿ ತಲುಪಿದ್ದೇವೆ. ಎರಡನೇ ಡೋಸ್ 85% ಆಗಿದೆ. ಒಟ್ಟರೆಯಾಗಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಯಶಸ್ಸು ಕಂಡಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಎರಡು, ಮೂರು ದಿನಗಳಲ್ಲಿ ಸೋಂಕು ಕಡಿಮೆ ಆಗಿದೆ. ಪಾಸಿಟಿವಿಟಿ ರೇಟ್ ಕಡಿಮೆ ಆಗಿದೆ. ಇನ್ನೆರಡು ದಿನ ಇದೇ ರೀತಿ ಮುಂದುವರಿದರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಹೇಳಬಹುದು. ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಜಾಸ್ತಿ ಆಗುತ್ತಿದೆ. ಆದರೆ ಜನವರಿ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

vaccine 2

ನಿನ್ನೆಯ ಎರಡು, ಮೂರು ದಿನಗಳಲ್ಲಿ ಬೆಂಗಳೂರಲ್ಲಿ 24%, 25% ಪಾಸಿಟಿವಿಟಿ ರೇಟ್ ಇತ್ತು. ಇದೀಗ 17%, 18%, 19%ರಷ್ಟು ಪಾಸಿಟಿವಿಟಿ ರೇಟ್ ಬರುತ್ತಿದೆ. ಹೊರ ಜಿಲ್ಲೆಯಲ್ಲಿ ಈಗ ನಿಧಾನವಾಗಿ ಏರುತ್ತಿದೆ. ನಮ್ಮ ದೇಶದಲ್ಲಿ ಮಹಾರಾಷ್ಟ್ರ, ದೆಹಲಿಯಲ್ಲಿ ಹೆಚ್ಚಾಗಿತ್ತು. ಆದರೆ ಕರ್ನಾಟಕದಲ್ಲಿ ಒಂದು ತಿಂಗಳ ಬಳಿಕ ಹೆಚ್ಚಾಗಿತ್ತು. ಜನರು ಇದೇ ರೀತಿಯ ಸಹಕಾರ ಕೊಡಲಿ. ಎರಡು, ಮೂರು ವಾರ ಕಡಿಮೆ ಆಗುವ ಸಾಧ್ಯತೆ ಇದೆ. ಆದಷ್ಟು ಶೀಘ್ರವಾಗಿ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

CORONA 6

ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೊಂದೆ ಕಾರಣ ಅಲ್ಲ. ಇದು ಸ್ವಾಭಾವಿಕ. ಐದಾರು ರಾಜ್ಯಕ್ಕೆ ನಾವು ಗಡಿ ಹಂಚಿಕೊಂಡಿದ್ದೇವೆ. ಖಂಡಿತ ಅಲ್ಲಿಂದಲೂ ಬರುವವರು ಇರುತ್ತಾರೆ. ಪಾಸಿಟಿವ್ ಬಂದವರನ್ನು ಬರಬೇಡಿ ಎಂದು ಹೇಳಿದ್ದೇವೆ. ಆದರೂ ಬಂದಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದೆಲ್ಲ ನೂರಕ್ಕೆ ನೂರು ವರ್ಕೌಟ್ ಆಗುತ್ತದೆ ಎಂದು ಹೇಳಲು ಆಗಲ್ಲ ಎಂದರು.

TAGGED:bengalurucongressCoronadr. k sudhakarvaccineಆರೋಗ್ಯ ಸಚಿವಕಾಂಗ್ರೆಸ್ಕೆ.ಸುಧಾಕರ್ಕೊರೊನಾಬೆಂಗಳೂರುಲಸಿಕೆ
Share This Article
Facebook Whatsapp Whatsapp Telegram

Cinema news

Pushpa Arunkumar
ಸೈಟ್‌ ವಿಚಾರಕ್ಕೆ ಜಟಾಪಟಿ – ಕೆಡವಿದ್ದ ಕಾಂಪೌಂಡ್‌ ಕಟ್ಟಿಸಲು ಮುಂದಾದ ಯಶ್‌ ತಾಯಿ
Cinema Districts Hassan Karnataka Latest Sandalwood States Top Stories
Ram Charan
ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್‌ಚರಣ್ ಪತ್ನಿ ಉಪಾಸನಾ
Bollywood Cinema Latest Top Stories
Jayamala
ಫಿಲ್ಮ್ ಚೇಂಬರ್‌ ಚುನಾವಣೆ – ಅಧ್ಯಕ್ಷೆ ಪಟ್ಟಕ್ಕೇರಿದ ನಟಿ ಜಯಮಾಲಾ
Bengaluru City Cinema Latest Main Post Sandalwood
Aishwarya Rajesh
ತುಂಡು ಬಟ್ಟೆ ಕೊಟ್ಟು ನಿನ್ನ ಬಾಡಿ ನೋಡ್ಬೇಕು ಅಂದ್ರು – ಕಹಿ ಘಟನೆ ಬಿಚ್ಚಿಟ್ಟ ಐಶ್ವರ್ಯ ರಾಜೇಶ್
Cinema Latest South cinema Top Stories

You Might Also Like

MB Patil 1
Bengaluru City

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯ – ಜೋಶಿ, ಸೋಮಣ್ಣ ಹೇಗೆ ಜನಕ್ಕೆ ಮುಖ ತೋರಿಸ್ತಾರೆ? – ಎಂಬಿಪಿ

Public TV
By Public TV
2 minutes ago
rupee budget
Latest

Budget 2026: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

Public TV
By Public TV
14 minutes ago
Vijayapura RowdySheeter murder
Crime

ಹಣ, ಹೆಣ್ಣಿಗಾಗಿ ಕೊಲೆ ಶಂಕೆ – ಕತ್ತು ಕೊಯ್ದು ರೌಡಿಶೀಟರ್ ಬರ್ಬರ ಹತ್ಯೆ

Public TV
By Public TV
21 minutes ago
Tejasvi Surya
Latest

ಇದು ದೂರದರ್ಶಿ ಬಜೆಟ್: ತೇಜಸ್ವಿ ಸೂರ್ಯ

Public TV
By Public TV
27 minutes ago
5b8eff6e 881c 49d0 bfbd e3cb6584182c
Latest

Union Budget 2026 LIVE Updates | ಬೆಂಗಳೂರಿಗೆ ಬುಲೆಟ್‌ ರೈಲು ಘೋಷಣೆ

Public TV
By Public TV
28 minutes ago
election evm vote
Latest

ಬಜೆಟ್‌ ಭಾಷಣದಲ್ಲಿ ಯಾವ ರಾಜ್ಯಕ್ಕೆ ಏನು ಸಿಕ್ಕಿದೆ? ಚುನಾವಣಾ ರಾಜ್ಯಕ್ಕೆ ಏನು?

Public TV
By Public TV
36 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?