ಬಳ್ಳಾರಿ: ವಿಮ್ಸ್ (VIMS) ವಿದ್ಯುತ್ ವ್ಯತ್ಯಯದಿಂದ ನಾಲ್ವರು ಸಾವು ಪ್ರಕರಣ ಸಂಬಂಧ ಬಳ್ಳಾರಿಯಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರು ಹಾಗೂ ಶಾಸಕ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ರು.
Advertisement
ಈ ವೇಳೆ ಮಾತನಾಡಿದ ಶಾಸಕ ನಾಗೇಂದ್ರ (Nagendra), ಆರೋಗ್ಯ ಸಚಿವ ಒಬ್ಬ ಅವಿವೇಕಿ. ಇಲ್ಲಿನ ಆಸ್ಪತ್ರೆಯಿಂದ ದುಡ್ಡು ಹೊಡೆದಿದ್ದಾರೆ. ಬಡ ಜನರ ಆರೋಗ್ಯ ಬೇಕಿಲ್ಲಾ ಇಲ್ಲಿನ ಆಸ್ಪತ್ರೆಯಿಂದ ಅವರಿಗೆ ಕೇವಲ ದುಡ್ಡು ಬೇಕು. ವಿಮ್ಸ್ ಬಡವರ ಪಾಲಿನ ಸಂಜೀವಿನಿ ಆಗಬೇಕಿತ್ತು. ಆದರೆ ಅದು ಬಡವರ ಪ್ರಾಣ ತೆಗೆಯುತ್ತಿದೆ. ಇದೊಂದು ಕೊಲೆಗಡುಕ ಸರ್ಕಾರ ಅಂತ ಆಕೋಶ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನ ಕಳ್ಳತನ- ಕರ್ನಾಟಕದಲ್ಲಿ 53.5 ಲಕ್ಷ ನಗದು ಸೀಜ್
Advertisement
Advertisement
ರಾಜ್ಯದಲ್ಲಿ ಅಧಿಕಾರಿಗಳ ನೇಮಕಾತಿಯ ಲಾಬಿಯನ್ನು ಶಾಸಕ ಸೋಮಶೇಖರ್ ರೆಡ್ಡಿ (Somashekhar Reddy) ಬಿಚ್ಚಿಟ್ಟಿದ್ದಾರೆ. ವಿಮ್ಸ್ ನಲ್ಲಿ ನಡೆದ ಘಟನೆ ನೋಡಿ ನನಗೆ ಸಾಕಷ್ಟು ದುಃಖ ಆಗಿದೆ. ಸರ್ಕಾರದಿಂದ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಘಟನೆಗೆ ವಿಮ್ಸ್ ಆಡಳಿತ ಮಂಡಳಿಯ ವೈಫಲ್ಯ ಕಾರಣ. ನಾವು ಗಂಗಾಧರ ಗೌಡ ಅವರ ನೇಮಕ ಮಾಡುವುದು ಬೇಡ ಅಂದಿದ್ದೆ. ಸಚಿವ ಸುಧಾಕರ್, ಗಂಗಾಧರ್ ಗೌಡ ಅವರನ್ನು ನೇಮಕ ಮಾಡಿದ್ದಾರೆ ಅಂತ ಹೇಳಿದ್ರು.
Advertisement
ಬಳ್ಳಾರಿಯಲ್ಲಾದ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾಳೆ ವಿಮ್ಸ್‍ಗೆ ಭೇಟಿ ನೀಡ್ತೇನೆ. ಸಾವಿಗೆ ಸಾವೇ, ಈಗಾಗಲೇ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದ್ರು.