ಬೆಂಗಳೂರು: ದೇಶಭಕ್ತರು ಬಿಜೆಪಿಗೆ ವೋಟ್ ಹಾಕುತ್ತಾರೆ. ಪಾಕಿಸ್ತಾನದ ಪರ ಇರುವವರು ಬಿಜೆಪಿಗೆ ವೋಟ್ ಹಾಕಲ್ಲ. ನಾನು ಇದೂವರೆಗೂ ನನ್ನ ಕ್ಷೇತ್ರದಲ್ಲಿ ಒಬ್ಬ ಮುಸ್ಲಿಂನಿಗೂ ವೋಟ್ ಹಾಕಿ ಅಂತ ಕೈ ಮುಗಿದು ಕೇಳಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶ್ರೀರಾಮಸೇನೆಯ ಆಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಮ್ಮ ಸರ್ಕಾರ ಬರುವ ಬದಲು ಕೆಲ ಕಾಂಗ್ರೆಸ್ ಶಾಸಕರು ಸಿಕ್ಕಿದ್ದರು. ನಮಗೂ ಬಿಜೆಪಿಗೆ ಬರಬೇಕೆಂದು ಆಸೆ ಇದೆ. ಆದ್ರೆ ನಮ್ಮ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ 50 ಸಾವಿರ ವೋಟ್ ಗಳಿವೆ. ಒಂದು ವೇಳೆ ಬಿಜೆಪಿಗೆ ಬಂದ್ರೆ ಆ ಎಲ್ಲ ಮತಗಳನ್ನು ಕಳೆದುಕೊಳ್ಳುತ್ತೇವೆ ಅಂದ್ರು. ಇದೊಂದು ಹಿಜಡಾತನ, ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಂರ ವೋಟ್ ಗಳಿವೆ. ಇದೂವರೆಗೂ ಒಬ್ಬ ಮುಸ್ಲಿಮನಿಗೂ ನಮಸ್ಕಾರ ಹೊಡೆದು ವೋಟ್ ಕೇಳಿಲ್ಲ. ಆದ್ರೂ 47 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಯಾವ ರಾಷ್ಟ್ರ ಭಕ್ತ ಮುಸ್ಲಿಂ ಇದ್ದಾನೋ ಅವನು ಬಿಜೆಪಿಗೆ ವೋಟ್ ಹಾಕುತ್ತಾನೆ. ಪಾಕಿಸ್ತಾನ ಪರ ಇರೋ ಮುಸ್ಲಿಂ ವ್ಯಕ್ತಿ ಬಿಜೆಪಿಗೆ ವೋಟ್ ಹಾಕಲು ಹಿಂದೆ ಮುಂದೆ ನೋಡ್ತಾರೆ. ಬೇಕಾದರೆ ಇದನ್ನು ಪತ್ರಕರ್ತರು ಬರೆದುಕೊಳ್ಳಲಿ ಎಂದು ವಿವಾದದ ಕಿಡಿ ಹೊತ್ತಿಸಿದರು.
Advertisement
Advertisement
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಾಡಲಾಗಿತ್ತು. ಕಾಂಗ್ರೆಸ್ ಬಂದ ಕೂಡಲೇ ಗೋ ಹತ್ಯೆ ನಿಷೇಧವನ್ನು ಅಳಸಿ ಹಾಕಿತು. ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಗೋ ಹತ್ಯೆ ನಿಷೇಧ ಮಾಡುತ್ತದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡೆಗೆ ಅಲ್ಲಿಯ ವಿಪಕ್ಷ ನಾಯಕರು ಕಿಡಿಕಾರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಸಹ ಭಾರತಕ್ಕೆ ಸೇರ್ಪಡೆಯಾಗಲಿದೆ ಎಂದರು. ಇದನ್ನೂ ಓದಿ: ರೌಡಿಶೀಟರ್ ಯಶಸ್ವಿನಿ ಗೌಡ ಜೊತೆ ವೇದಿಕೆ ಹಂಚಿಕೊಂಡ ಈಶ್ವರಪ್ಪ
Advertisement
ಕೇಂದ್ರದಲ್ಲಿಯ ಬಿಜೆಪಿ ಸರ್ಕಾರ ಕಾರ್ಯಕ್ಕೆ ದೇಶದೆಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಜೆಪಿ ಅನುಚ್ಛೇಧ 370 ಅಳಿಸಿ ಹಾಕಿದೆ. ತ್ರಿಪಲ್ ತಲಾಖ್ ನಿಷೇಧಗೊಳಿಸಿದ್ದು, ಹೀಗೆ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ನರೇಂದ್ರ ಮೋದಿ ಅವರು ಇರೋವರೆಗೂ ಅವರೇ ಭಾರತದ ಪ್ರಧಾನಿಗಳಾಗಿ ಇರುತ್ತಾರೆ. ನರೇಂದ್ರ ಮೋದಿಯವರ ಕಾಲದಲ್ಲೇ ಪಾಕಿಸ್ತಾನ ಭೂಪಟದಿಂದ ಮಾಯವಾಗಿ ಅಖಂಡ ಭಾರತವಾಗಲಿದೆ. ಕರ್ನಾಟಕದಲ್ಲಿ ಪ್ರತಿ ಗ್ರಾಮದಲ್ಲಿ ಹಿಂದುತ್ವ ಬೆಳೆಯುತ್ತಿದ್ದರಿಂದ ಇಂದು ಬಿಜೆಪಿ ಅಧಿಕಾರದಲ್ಲಿದೆ ಎಂದು ತಿಳಿಸಿದರು.
Advertisement
ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿಧಾನಸಭೆಯಲ್ಲಿ ಇರಬೇಕೆಂದು ಬಿಜೆಪಿಗೆ ನನ್ನ ಸಮ್ಮುಖದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಬಿಜೆಪಿಗೆ ಪ್ರಮೋದ್ ಮುತಾಲಿಕ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ರಾಜಕಾರಣದಲ್ಲಿ ಕೆಲ ಬೆಳವಣಿಗಳಿಂದ ಅವರು ಬಿಜೆಪಿಯಿಂದ ಹೊರ ಹೋಗಬೇಕಾಯಿತು. ಕೆಲವರ ಕುತಂತ್ರ ರಾಜಕಾರಣದಿಂದ ಪ್ರಮೋದ್ ಮುತಾಲಿಕ್ ಹೊರ ಬಂದರು. ಆದ್ರೆ ಯಾಕೆ ಹೊರ ಬಂದರು ಎಂಬ ವಿಚಾರ ನನಗೆ ಇದೂವರೆಗೂ ಗೊತ್ತಾಗಿಲ್ಲ ಎಂದು ಹೇಳಿದರು.