ಬಾಗಲಕೋಟೆ: ಮುಸ್ಲಿಂ, ಕ್ರಿಶ್ಚಿಯನ್ ವೋಟುಗಳ ಮೇಲೆ ಕಣ್ಣಿಟ್ಟು ಆರ್‍ಎಸ್‍ಎಸ್‍ಗೆ ಬೈದ್ರೆ ತಮಗೆ ವೋಟು ಕೊಡುತ್ತಾರೆ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಇವೆ. ಈಗ ದಲಿತರು, ಹಿಂದುಳಿದವರು ಬಿಜೆಪಿ ಜೊತೆ ಬಂದಾಯಿತು. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿಯಲ್ಲೆ ಇದ್ದಾರೆ. ಉಳಿದ ಮುಸ್ಲಿಮರು ನಮ್ಮ ಜೊತೆ ಬರುತ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳು ಪಾಕಿಸ್ತಾನ ಜೊತೆ ಇದ್ದವು. ಈಗ ಮೋದಿ ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ಮೋದಿ ಜೊತೆ ಇದೆ. ಇಂದು ಪಾಕಿಸ್ತಾನ ಒಬ್ಬಂಟಿಯಾಗಿದೆ. ಇವರಿಗೇನು ಕಲ್ಪನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದುರ್ಗಾ ದೇವಿ ರೀತಿ ಮಮತಾ ಬ್ಯಾನರ್ಜಿ ವಿಗ್ರಹ ಸ್ಥಾಪನೆ
Advertisement
Advertisement
ಇದೇ ವೇಳೆ ಡಿಕೆಶಿ, ಸಿದ್ದರಾಮಯ್ಯ, ಹೆಚ್‍ಡಿಕೆಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, RSS ಬಗ್ಗೆ ನೆಹರು, ಇಂದಿರಾಗಾಂಧಿ ಮಾತಾಡಿದಾಗ ಅವರನ್ನೇ ಬಿಟ್ಟಿಲ್ಲ. ಇನ್ನು ಇವರ್ಯಾರ್ರಿ ನಮ್ಮ ಲೆಕ್ಕಕ್ಕೆ. RSS ದೇಶದ ಯುವಕರಿಗೆ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ದೊಡ್ಡ ಶಕ್ತಿ. RSS ಇಲ್ಲಾ ಅಂದಿದ್ರೆ ಈ ದೇಶ ಪಾಕಿಸ್ತಾನ ಆಗಿ ಹೋಗಿರ್ತಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಬ್ರಮಣಿಯನ್ ಸ್ವಾಮಿಗೆ ಕೊಕ್ – ಟ್ವಿಟ್ಟರ್‌ನಿಂದ ಬಿಜೆಪಿ ಹೆಸರು ರಿಮೂವ್
Advertisement
ಐಎಎಸ್, ಐಪಿಎಸ್ ಮೂಲಕ ಆಡಳಿತ ನಡೆಸುತ್ತೆ. ಇದು ಮೆದುಳಿಗೆ ಪೊರೆ ಬಂದಿರುವವರು ಹೇಳುವ ಮಾತು. ಎಲ್ಲ ಕ್ಷೇತ್ರಗಳಲ್ಲೂ RSS ಇದೆ. ರಾಷ್ಟ್ರಪತಿ, ವಿಶ್ವದ ನಾಯಕ ನರೇಂದ್ರ ಮೋದಿ, ನಾವೆಲ್ರೂ RSS. RSS ಏನೂ ಮಾಡಲ್ಲ. ಅಲ್ಲಿ ತರಬೇತಿ ತಗೊಂಡವರು ಸ್ವಯಂ ಸೇವಕರು ಏನು ಬೇಕಾದ್ರು ಮಾಡ್ತಾರೆ. RSS ಕುಛ್ ಭಿ ನಹೀ ಕರೇಗಾ, ಲೇಕಿನ್ ಸ್ವಯಂ ಸೇವಕ್ ಸಬ್ ಕುಛ್ ಕರೇಗಾ. ಯಾರೆಲ್ಲ ಇಲ್ಲಿ ಸಂಸ್ಕಾರ ತಗೊಳ್ತಾರೋ ಅವರು, ಅವರವರ ಕ್ಷೇತ್ರದಲ್ಲಿ ರಾಷ್ಟ್ರಭಕ್ತಿ ಬೆಳೆಸಿ ದೇಶ ಕಟ್ಟುವ ಕೆಲಸ ಮಾಡ್ತಾರೆ ಎಂದರು.
RSS ಪರ ಹಾಗೂ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ