– ಇವರ ಪಿತೂರಿ ಮುಚ್ಚಿ ಹಾಕಲು ಡಿಕೆಶಿಗೆ ಸಿಎಂ ಸ್ಥಾನದ ಕೂಗು
ತುಮಕೂರು: ಮಠ ಮಾಡಿ ಕೊಡುತ್ತೇವೆ ಎಂಬ ಸ್ವಾಮಿಜಿಗಳ ಸಲಹೆಯನ್ನು ಪರಿಶೀಲಿಸುತ್ತೇನೆ. ಬೆವರು ಸುರಿಸದೇ ಜೀವನ ಮಾಡೋವಂತಹದ್ದನ್ನ ಸ್ವಾಮೀಜಿಗಳು ಸಲಹೆ ಮಾಡಿದ್ದಾರೆ ಎಂದು ಸಚಿವ ಕೆ.ಎನ್ ರಾಜಣ್ಣ (K.N Rajanna) ಕಿಡಿಕಾರಿದ್ದಾರೆ.
Advertisement
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಣ್ಣಗೆ ಮಠ ಮಾಡಿಕೊಡ್ತೀವಿ ಎಂಬ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji ) ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ದೇಶದಲ್ಲಿ ಬಹಳ ಜನ ಸ್ವಾಮಿಗಳು ಇದ್ದಾರೆ. ಅವರೆಲ್ಲ ಸಲಹೆ ಕೊಡುತ್ತಾರೆ. ಅದೇ ರೀತಿ ಈ ಸಲಹೆಯನ್ನ ನಾನು ಪರಿಶೀಲನೆ ಮಾಡ್ತಿನಿ ಎಂದಿದ್ದಾರೆ.
Advertisement
ಹೆಚ್ಚುವರಿ ಡಿಸಿಎಂ ವಿಚಾರವಾಗಿ ಸ್ವಾಮೀಜಿಗಳ ಹೇಳಿಕೆ ವಿಚಾರವಾಗಿ, ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಈ ಬಗ್ಗೆ ಅಂತಿಮವಾಗಿ ನಿರ್ಣಯ ಮಾಡುವುದು ಕಾಂಗ್ರೆಸ್ ಹೈಕಮಾಂಡ್, ನಾವು ಕೇಳದೇ ಇದ್ದರೆ, ಅವರ ಗಮನಕ್ಕೆ ಹೇಗೆ ಹೋಗುತ್ತೆ? ಅಂತಿಮವಾಗಿ ಹೈಕಮಾಂಡ್‍ನವರು ಏನು ನಿರ್ಣಯ ತೆಗೆದುಕೊಳ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದಿದ್ದಾರೆ.
Advertisement
Advertisement
ಹೊಸಬರನ್ನು ಮಂತ್ರಿಗಳನ್ನಾಗಿ ಮಾಡೋದು, ಸಂಪುಟ ವಿಸ್ತರಣೆ ಮಾಡೋದು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‍ಗೆ ಬಿಟ್ಟಿದ್ದು. ಇವತ್ತು ಹೈಕಮಾಂಡ್ ಜೊತೆ ಹೆಚ್ಚುವರಿ ಡಿಸಿಎಂ ಸ್ಥಾನ ಪ್ರಸ್ತಾಪ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಈ ವಿಚಾರವನ್ನು ಕೆಲವರು ಪದೇ ಪದೇ ಚರ್ಚಿಸುತ್ತಿದ್ದಾರೆ. ಈ ವಿಚಾರ ಹೈಕಮಾಂಡ್ ಎದುರು ಚರ್ಚೆಗೆ ಬಂದರೂ ಬರಬಹುದು, ಬರದೇ ಇದ್ದರು ಇರಬಹುದು ಎಂದು ಅವರು ಹೇಳಿದ್ದಾರೆ.
ಡಿ.ಕೆ ಸುರೇಶ್ ಸೋಲಲಿಕ್ಕೆ ಇವರೆಲ್ಲ ಕಾರಣ. ಈ ಮಠ ಯಾರು ಮಾಡಿದ್ದು? ದೇವೇಗೌಡರು ಮಾಡಿದ್ದ ಮಠ ಇದು. ಬಾಲಗಂಗಾಧರನಾಥ್ ಸ್ವಾಮೀಜಿ ವಿರುದ್ಧ ದೇವೇಗೌಡರು ಈ ಮಠ ಮಾಡಿದ್ದರು. ಮಠ ಪ್ರಾರಂಭ ಮಾಡಿದ ದಿನದ ಭಾಷಣ ಯಾರ ಬಳಿಯಾದರೂ ಇದ್ರೆ ಕೇಳಿ. ಇವರು ದೇವೇಗೌಡರ ಕೃಪಾಶಿರ್ವಾದದಿಂದ ಮಠ ಮಾಡಿದ್ದು. ಈಗ ದೇವೇಗೌಡರ ಅಳಿಯನ ವಿರುದ್ಧ ಡಿ.ಕೆ ಸುರೇಶ್ ಸೋಲಲು ಇವರುಗಳೇ ಕಾರಣ. ಕ್ಷೇತ್ರದಲ್ಲಿ ಎಲ್ಲಾ ಎಂಪಿಗಳಿಂತ ಹೆಚ್ಚು ಕೆಲಸ ಮಾಡಿದವರು ಡಿ.ಕೆ ಸುರೇಶ್ ಅವರು, ಅಷ್ಟೇಲ್ಲಾ ಕೆಲಸ ಮಾಡಿದ್ರು ಸೋಲೋದು ಅಂದ್ರೆ ಪಿತೂರಿಗಳನ್ನ ಮಾಡಿದ್ದಾರೆ. ಇವರುಗಳೆಲ್ಲಾ ಮಾಡಿದ ಆ ಕ್ರಮ ಮುಚ್ಚಿ ಹಾಕಿಕೊಳ್ಳಲು, ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಎಂದು ಇವಾಗ ಹೇಳೋದು ಅಷ್ಟೇ. ದೇವೇಗೌಡರು ಮಠ ಮಾಡಿದ್ದಕ್ಕೆ ಇದು ಉಪಕಾರ ಸ್ಮರಣೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರು ಎಲ್ಲಿಯವರೆಗೂ ಮುಂದುವರಿಯಲು ಅವಕಾಶ ನೀಡುತ್ತಾರೋ, ಅಲ್ಲಿಯವರೆಗೆ ಸಿಎಂ ಸ್ಥಾನದಲ್ಲಿ ಇರ್ತಾರೆ. ಯಾವಾಗ ಅವಕಾಶ ತಪ್ಪುತ್ತೋ ಅವಾಗ ಹೈಕಮಾಂಡ್‍ನವರು ಮಾತು ಕೇಳಬೇಕಾಗುತ್ತೆ. ಹೈಕಮಾಂಡ್ ಮಾತನ್ನು ಪಕ್ಷದಲ್ಲಿ ಅವರು ಕೇಳಬೇಕು, ಇನ್ನೊಬ್ಬರು ಕೇಳಬೇಕು ಎಂದಿದ್ದಾರೆ.
ಸ್ವಾಮೀಜಿಗಳು ಪದೇ ಪದೇ ರಾಜಕೀಯದಲ್ಲಿ ಮೂಗು ತೂರಿಸುವ ವಿಚಾರವಾಗಿ, ಸಮಾಜಕ್ಕೆ ಒಳಿತನ್ನು ಮಾಡುವಂತಹದ್ದು ಸ್ವಾಮಿಗಳ ಕೆಲಸ. ಸಮಾಜ ಅಂದ್ರೆ ಜಾತಿಗಲ್ಲ, ಇಡೀ ಮಾನವ ಕುಲಕ್ಕೆ ಒಳಿತನ್ನ ಮಾಡುವಂತಹದ್ದು. ಆ ಸಮಾಜದಲ್ಲಿ ಸಾಮಾಜಿಕ ಪಿಡುಗನನ್ನು ದೂರ ಮಾಡುವಂತಹದ್ದು, ಮಕ್ಕಳಿಗೆ ವಿದ್ಯಾಭ್ಯಾಸವನ್ನ ಕೊಡುವಂತಹದ್ದು ಶತಮಾನಗಳಿಂದ ನಡೆದುಕೊಂಡು ಬಂದಿರುವಂತಹ ಪದ್ದತಿ. ಒಂದಷ್ಟು ಜನ ಸ್ವಾಮೀಜಿಗಳು ಲೆಟೆಸ್ಟ್ ಆಗಿ ಹೈಟೆಕ್ ಸ್ವಾಮೀಜಿಗಳು ಬಹಳ ಜನ ಬಂದಿದ್ದಾರೆ. ಅವರುಗಳ ಥಿಂಕಿಂಗ್ ಒಂದೊಂದು ರೀತಿ ಇರುತ್ತೆ. ಅದಕ್ಕೆ ನಾವೇನು ಹೇಳೊಕೆ ಆಗಲ್ಲ, ಅದು ಅವರಿಗೆ ಸೇರಿರುವಂತಹದ್ದು. ಇದನ್ನು ಬ್ಲಾಕ್‍ಮೈಲ್ ಎಂದು ನಾನು ಹೇಳುವುದಿಲ್ಲ ಎಂದಿದ್ದಾರೆ.
ನಾವು ಸ್ವಾಮೀಜಿಗಳು ಎಂದರೆ ದೇವರ ಅಪರವತಾರ ಎಂದು ಹೇಳಿ ಕಾಲಿಗೆ ಬಿದ್ದು, ನಮಸ್ಕಾರ ಮಾಡಿ ಆಶೀರ್ವಾದ ಪಡೆಯಬೇಕು ಎಂಬಂತೆ ನಡೆದುಕೊಂಡಿದ್ದೇವೆ. ಅವರು ಒಬ್ಬ ಮನುಷ್ಯನ ಮಟ್ಟಕ್ಕೆ ಇಳಿದರೆ, ಅದು ಅವರಿಗೆ ಸೇರಿರುವಂತಹದ್ದು ಎಂದು ಅವರು ಕುಟುಕಿದ್ದಾರೆ.