ಚಾಮರಾಜನಗರ: ಭಾರೀ ಮತ್ತು ಮಧ್ಯಮ ಕೈಗಾರಿಕೆ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಕೇವಲ ಒಂದು ನಿಮಿಷದಲ್ಲೇ 1,400 ಎಕರೆ ಕೈಗಾರಿಕಾ ಪ್ರದೇಶವನ್ನು ಪರಿಶೀಲನೆ ಮಾಡಿ ಕಾಲ್ಕಿತ್ತಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರದ ಕೆಲ್ಲಂಬಳ್ಳಿ ಹಾಗೂ ಬದನಗುಪ್ಪೆ ಕೈಗಾರಿಕಾ ಪ್ರದೇಶವನ್ನು ವೀಕ್ಷಿಸಲು ಜಾರ್ಜ್ ಬರುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದರು. ಅಧಿಕಾರಿಗಳು ಒಂದು ವಾರದಿಂದ ಇಲ್ಲಿನ ಸಮಸ್ಯೆಗಳನ್ನು ಹಾಗೂ ಪರಿಹಾರವನ್ನು ಪಟ್ಟಿಮಾಡಿಕೊಂಡು ಸ್ಥಳ ವೀಕ್ಷಣೆಗೆ ಸಜ್ಜಾಗಿದ್ದರು. ಇದನ್ನೂ ಓದಿ: ಗಡಿ ಜಿಲ್ಲೆ ಅಭಿವೃದ್ಧಿ ಕನಸಿಗೆ ತೊಡಕಾದ ಮೂಲಭೂತ ಸೌಲಭ್ಯ- ಸರ್ಕಾರದ 800ಕೋಟಿ ರೂ. ಯೋಜನೆ ವ್ಯರ್ಥ
ನಿಗದಿಯಂತೆ ಆಗಮಿಸಿದ ಜಾರ್ಜ್ 1,400 ಎಕರೆ ಕೈಗಾರಿಕಾ ಪ್ರದೇಶವನ್ನು ಕೇವಲ ಒಂದೇ ನಿಮಿಷದಲ್ಲಿ ವೀಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬಂದಿಳಿದ ಜಾರ್ಜ್ ಸಚಿವ ಕೈ ಕುಲುಕಿ ಹಾರ ಹಾಕಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈಗ ಜಾರ್ಜ್ ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಕಾಟಚಾರಕ್ಕೆ ಕೈಗಾರಿಕಾ ಪ್ರದೇಶದ ಪರಿಶೀಲನೆ ನಡೆಸಿದ್ದಾರೆ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.